
ಕೇಂದ್ರ ಬಜೆಟ್ 2026 ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆಯ ಮಾತುಗಳು:
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಹಲವು ಬದಲಾವಣೆಗಳಾಗಿವೆ.
ಆತ್ಮ ನಿರ್ಭಯ ನಮ್ಮ ಆರ್ಥಿಕತೆಯ ಮೂಲ ಮಂತ್ರ.
ಸರ್ಕಾರದ ನಿರ್ಣಯಗಳ ಮೂಲಕ ನಾಗರಿಕರಿಗೆ ಪ್ರಯೋಜನವಾಗಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ.
ದೇಶದ ಆರ್ಥಿಕತೆಯು ಶೇ.7 ರಷ್ಟು ಬೆಳವಣಿಗೆ ದರದಲ್ಲಿ ಬೆಳೆದಿದೆ.
ಕರ್ತವ್ಯ ಭವನದಲ್ಲಿ ರಚಿಸಲಾದ ಮೊದಲ ಬಜೆಟ್ ಇದಾಗಿದೆ. ಈ ಬಜೆಟ್ನಲ್ಲಿ ಮೂರು ಪ್ರಮುಖ ಕರ್ತವ್ಯಗಳಿವೆ
1 ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ನಿವೇಶನ, ಉದ್ಯಮ ಮತ್ತು ಉದ್ಯೋಗ ಸೃಷ್ಟಿಯನ್ನು ಬಲಪಡಿಸುವುದು
2 ಜನರ ನಿರೀಕ್ಷೆಗಳನ್ನು ಪೂರೈಸುವುದು, ಸಾಮಾನ್ಯ ನಾಗರಿಕರಿಗೆ ಹೆಚ್ಚಿನ ಸೌಲಭ್ಯಗಳು ಮತ್ತು ಅವಕಾಶಗಳನ್ನು ನೀಡುವುದು
3 ಎಲ್ಲರೊಂದಿಗೆ ಎಲ್ಲರ ವಿಕಾಸ
ಅಭಿವೃದ್ಧಿಯ ಪ್ರಯೋಜನವನ್ನು ಸಮಾಜದ ಎಲ್ಲಾ ವರ್ಗಗಳಿಗೂ ತಲುಪಿಸುವುದು, ಆತ್ಮನಿರ್ಭರತೆಯನ್ನು ನಮ್ಮ ಮಾರ್ಗದರ್ಶಿ ಸೂತ್ರವಾಗಿಸಿಕೊಂಡು ನಾವು ದೇಶೀಯ ಉತ್ಪಾದನಾ ಸಾಮರ್ಥ್ಯ, ಇಂಧನ ಭದ್ರತೆ ಮತ್ತು ಅಗತ್ಯ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದೇವೆ. ಸರ್ಕಾರದ ಪ್ರತಿ ಕ್ರಮದಿಂದ ನಾಗರಿಕರು ಪ್ರಯೋಜನ ಪಡೆಯುವುದನ್ನು ನಾವು ಖಚಿತಪಡಿಸಿದ್ದೇವೆ. ಉದ್ಯೋಗ ಸೃಷ್ಟಿ, ಕೃಷಿ ಉತ್ಪಾದಕತೆ, ಮನೆಯ ಖರೀದಿ ಶಕ್ತಿ ಮತ್ತು ಸಾರ್ವತ್ರಿಕ ಸೇವೆಗಳನ್ನು ಸುಧಾರಿಸಲು ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಂಡಿದ್ದೇವೆ. ಈ ಕ್ರಮಗಳಿಂದ ಬೆಳವಣಿಗೆ ದರ ಸುಮಾರು 7% ರಷ್ಟು ಏರಿಕೆಯಾಗಿದೆ ಮತ್ತು ಬಡತನವನ್ನು ಕಡಿಮೆ ಮಾಡಲು ಮತ್ತು ನಮ್ಮ ಜನರ ಜೀವನವನ್ನು ಸುಧಾರಿಸಲು ಸಹಾಯ ಮಾಡಿವೆ.
ನಮ್ಮ ಮೊದಲ ಕರ್ತವ್ಯದಡಿಯಲ್ಲಿ, ನಾನು ಆರು ಕ್ಷೇತ್ರಗಳಲ್ಲಿ ಮಧ್ಯಸ್ಥಿಕೆಗಳನ್ನು ಪ್ರಸ್ತಾಪಿಸುತ್ತೇನೆ.
1. ಏಳು ಕಾರ್ಯತಂತ್ರದ ವಲಯ ಮತ್ತು ಮುಂಚೂಣಿ ವಲಯಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವುದು.
2. ಪರಂಪರಾಗತ ಕೈಗಾರಿಕಾ ಕ್ಷೇತ್ರಗಳನ್ನು ಪುನಶ್ಚೇತನಗೊಳಿಸುವುದು
3. ಉತ್ತಮ ಮಟ್ಟದ ಎಂಎಸ್ಎಂಇಗಳನ್ನು ಚಾಂಪಿಯನ್ ಆಗಿ ರೂಪಿಸುವುದ4. ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡುವುದು
5. ದೀರ್ಘಕಾಲೀನ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವುದು.
6. ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು.
ಭಾರತವನ್ನು ಜಾಗತಿಕ ಬಯೋ ಫಾರ್ಮಾ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು, ಮುಂದಿನ 5 ವರ್ಷಗಳಲ್ಲಿ ₹10,000 ಕೋಟಿ ವೆಚ್ಚದಲ್ಲಿ ಬಯೋ ಫಾರ್ಮಾ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು
ಇದು ಜೈವಿಕ ಔಷಧಿಗಳ ದೇಶೀಯ ಉತ್ಪಾದನೆಗೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
ಶೀಘ್ರದಲ್ಲೇ ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ಪ್ರಾರಂಭಿಸಲಾಗುತ್ತಿದೆ. ಇದರ ಮೂಲಕ ತಾಂತ್ರಿಕ ಮತ್ತು ಕೌಶಲ್ಯಪೂರ್ಣ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸಲು ಉದ್ಯಮ ನೇತೃತ್ವದ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುವುದು
ದೇಶದಲ್ಲಿ ಕಾಯಿಲೆಯ ಹೊರೆ (ಡಿಸೀಸ್ ಬರ್ಡನ್) ನಿರಂತರವಾಗಿ ಸಾಂಕ್ರಾಮಿಕವಲ್ಲದ ರೋಗಗಳ (ನಾನ್-ಕಮ್ಯೂನಿಕೇಬಲ್ ಡಿಸೀಸಸ್ – NCDs) ಕಡೆಗೆ ಹೆಚ್ಚುತ್ತಿದೆ. ಉದಾಹರಣೆಗೆ ಮಧುಮೇಹ, ಕ್ಯಾನ್ಸರ್, ಹೃದಯ ಕಾಯಿಲೆ, ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳು. ಆದ್ದರಿಂದ, ಈ ರೋಗಗಳನ್ನು ಎದುರಿಸುವ ಸಾಮರ್ಥ್ಯವನ್ನು ಬಲಪಡಿಸಲು ಸರ್ಕಾರವು ರೋಗ ತಡೆಗಟ್ಟುವಿಕೆ, ತಪಾಸಣೆ ಮತ್ತು ಆರಂಭಿಕ ಚಿಕಿತ್ಸೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಿದೆ
ಅಗ್ನಿಶಾಮಕ ಉಪಕರಣಗಳಿಂದ ಹಿಡಿದು ಲಿಫ್ಟ್ಗಳು ಮತ್ತು ಸುರಂಗ ಕೊರೆಯುವ ಯಂತ್ರಗಳನ್ನು ಒಳಗೊಂಡಂತೆ ಹೆಚ್ಚಿನ ಮೌಲ್ಯವುಳ್ಳ, ತಾಂತ್ರಿಕವಾಗಿ ಮುಂದುವರಿದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆಯನ್ನು ಬಲಪಡಿಸಲು ಯೋಜನೆಯೊಂದನ್ನು ಪ್ರಾರಂಭಿಸಲಾಗುವುದು. ಬೃಹತ್ ಜವಳಿ ಪಾರ್ಕ್ ಸ್ಥಾಪಿಸಲು ಕೂಡ ಪ್ರಸ್ತಾಪಿಸುತ್ತಿದ್ದೇವೆ. ಖಾದಿ ಮತ್ತು ಕೈಮಗ್ಗವನ್ನು ಬಲಪಡಿಸಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮವನ್ನು ಪ್ರಾರಂಭಿಸಲಿದ್ದೇವೆ.
ಕಾರ್ಬನ್ ಕ್ಯಾಪ್ಚರ್, ಯೂಟಿಲೈಸೇಶನ್ ಆಂಡ್ ಸ್ಟೋರೇಜ್ (CCUS) ತಂತ್ರಜ್ಞಾನಗಳಿಗಾಗಿ ಮುಂದಿನ 5 ವರ್ಷಗಳಲ್ಲಿ 20,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುವುದು. ಇ ವಿವಿಧ ಕ್ಷೇತ್ರಗಳಲ್ಲಿ ಎಂಡ್-ಯೂಸ್ ಅಪ್ಲಿಕೇಶನ್ಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಉನ್ನತ ಮಟ್ಟದ ತಯಾರಿ (ಹೈ ಲೆವಲ್ ಆಫ್ ರೆಡಿನೆಸ್) ಸಾಧಿಸುವುದು ಇದರ ಉದ್ದೇಶ.
ಭಾರತದ ಹೊರಗಿರುವ ವ್ಯಕ್ತಿ (ಪರ್ಸನ್ಸ್ ರೆಸಿಡಿಂಗ್ ಅವುಟ್ಸೈಡ್ ಇಂಡಿಯಾ – PROI)ಗಳಿಗೆ ಪೋರ್ಟ್ಫೋಲಿಯೊ ಹೂಡಿಕೆ ಯೋಜನೆ ಮೂಲಕ ಪಟ್ಟಿ ಮಾಡಲಾದ ಭಾರತೀಯ ಕಂಪನಿಗಳ ಇಕ್ವಿಟಿ ಇನ್ಸ್ಟ್ರುಮೆಂಟ್ಗಳಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಲಾಗುವುದು. PROIಗಳಿಗೆ ಹೂಡಿಕೆಯ ಮಿತಿಯನ್ನು 5%ರಿಂದ ಹೆಚ್ಚಿಸಿ 10%ಗೆ ಮಾಡುವ ಪ್ರಸ್ತಾಪವೂ ಇದೆ.
ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಒಂದು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಇದು ಬ್ಯಾಂಕಿಂಗ್ ವಲಯವನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಅದನ್ನು ಭಾರತದ ಮುಂದಿನ ಹಂತದ ಅಭಿವೃದ್ಧಿಯೊಂದಿಗೆ ಹೊಂದಿಸಲು, ಆರ್ಥಿಕ ಸ್ಥಿರತೆ, ಸೇರ್ಪಡೆ ಮತ್ತು ಗ್ರಾಹಕರ ರಕ್ಷಣೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.
500,000 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ, ಅಂದರೆ, ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲಾಗುವುದು
ಪರಿಸರ ಸ್ನೇಹಿ ಸರಕು ಸಾಗಣೆಯನ್ನು ಉತ್ತೇಜಿಸಲು, ಪೂರ್ವದಲ್ಲಿರುವ ಡಂಕುನಿಯಿಂದ ಪಶ್ಚಿಮದಲ್ಲಿರುವ ಸೂರತ್ಗೆ ಸಂಪರ್ಕಿಸುವ ಹೊಸ ಮೀಸಲಾದ ಸರಕು ಸಾಗಣೆ ಕಾರಿಡಾರ್ ನಿರ್ಮಿಸಲು ಪ್ರಸ್ತಾಪಿಸಲಾಗುತ್ತಿದೆ.
ಮುಂದಿನ ಐದು ವರ್ಷಗಳಲ್ಲಿ, ಒಡಿಶಾದಲ್ಲಿ ರಾಷ್ಟ್ರೀಯ ಜಲಮಾರ್ಗ 5 ರಿಂದ ಪ್ರಾರಂಭಿಸಿ 20 ಹೊಸ ಜಲಮಾರ್ಗಗಳನ್ನು ಕಾರ್ಯಾರಂಭ ಮಾಡಲಾಗುವುದು, ಇದು ತಲ್ಚರ್ ಮತ್ತು ಅಂಗುಲ್ನ ಖನಿಜ-ಸಮೃದ್ಧ ಪ್ರದೇಶಗಳು ಮತ್ತು ಕಳಿಂಗನಗರದಂತಹ ಕೈಗಾರಿಕಾ ಕೇಂದ್ರಗಳನ್ನು ಪಾರಾದೀಪ್ ಮತ್ತು ಧಮ್ರಾ ಬಂದರುಗಳಿಗೆ ಸಂಪರ್ಕಿಸುತ್ತದೆ.
ಒಳನಾಡಿನ ಜಲಮಾರ್ಗಗಳಿಗಾಗಿ ಹಡಗು ದುರಸ್ತಿ ಪರಿಸರ ವ್ಯವಸ್ಥೆಯನ್ನು ವಾರಣಾಸಿ ಮತ್ತು ಪಾಟ್ನಾದಲ್ಲಿ ಸ್ಥಾಪಿಸಲಾಗುವುದು.
“ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ” ಕ್ಷೇತ್ರದಲ್ಲಿ ಉನ್ನತ ಮಟ್ಟದ ಸ್ಥಾಯಿ ಸಮಿತಿಯನ್ನು ಸ್ಥಾಪಿಸಲಾಗುವುದು. ಈ ಸಮಿತಿಯು ವಿಕಸಿತ ಭಾರತದ ಪ್ರಮುಖ ಚಾಲಕನಾಗಿ ಸೇವಾ ಕ್ಷೇತ್ರಕ್ಕೆ ಕೇಂದ್ರೀಕೃತವಾದ ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಇದು 2047 ರ ವೇಳೆಗೆ 10% ಜಾಗತಿಕ ಪಾಲನ್ನು ಹೊಂದಿರುವ ಸೇವೆಗಳಲ್ಲಿ ಜಾಗತಿಕ ನಾಯಕರಾಗಲು ನಮಗೆ ಅನುವು ಮಾಡಿಕೊಡುತ್ತದೆ. ಸಮಿತಿಯು ಬೆಳವಣಿಗೆ, ಉದ್ಯೋಗ ಮತ್ತು ರಫ್ತು ಸಾಮರ್ಥ್ಯಗಳನ್ನು ಗರಿಷ್ಠಗೊಳಿಸುವ ಸಲುವಾಗಿ ಕ್ಷೇತ್ರಗಳಿಗೆ ಆದ್ಯತೆ ನೀಡಲಿದೆ. ಅಲ್ಲದೆ, ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳು ಉದ್ಯೋಗ ಮತ್ತು ಕೌಶಲ್ಯ ಅವಶ್ಯಕತೆಗಳ ಮೇಲೆ ಬೀರುವ ಪ್ರಭಾವವನ್ನು ಇದು ಮೌಲ್ಯಮಾಪನ ಮಾಡುತ್ತದೆ ಮತ್ತು ಅವುಗಳಿಗೆ ಸೂಕ್ತ ಕ್ರಮಗಳನ್ನು ಪ್ರಸ್ತಾಪಿಸುತ್ತದೆ.
ತೆಂಗಿನಕಾಯಿ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆಯನ್ನು ಇನ್ನಷ್ಟು ಉತ್ತೇಜಿಸಲು, ವಿವಿಧ ವಿಧಾನಗಳ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಉತ್ಪಾದಕತೆಯನ್ನು ಸುಧಾರಿಸಲು ನಾರಿಯಲ್ ಸಂವರ್ಧನ್ ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದೇವೆ ಇದರಡಿ .ತೆಂಗಿನಕಾಯಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಶಿಥಿಲಗೊಂಡ ಮರಗಳನ್ನು ಹೊಸ ಪ್ರಭೇದಗಳೊಂದಿಗೆ ಬದಲಾಯಿಸಲಾಗುವುದು.
2030 ರ ವೇಳೆಗೆ ಭಾರತವು ಕಚ್ಚಾ ಗೋಡಂಬಿ ಮತ್ತು ತೆಂಗಿನಕಾಯಿ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಸ್ವಾವಲಂಬಿಯಾಗಲು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಭಾರತೀಯ ಗೋಡಂಬಿ ಮತ್ತು ಕೋಕೋವನ್ನು ಪ್ರೀಮಿಯಂ ಜಾಗತಿಕ ಬ್ರ್ಯಾಂಡ್ಗಳಾಗಿ ಪರಿವರ್ತಿಸಲು ಭಾರತೀಯ ಗೋಡಂಬಿ ಮತ್ತು ಕೋಕೋಗೆ ವಿಶೇಷ ಕಾರ್ಯಕ್ರಮವನ್ನು ಪ್ರಸ್ತಾಪಿಸುತ್ತಿದ್ದೇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


