ಹೈದರಾಬಾದ್: ತ್ರಿವಳಿ ತಲಾಖ್ ಬಗೆಗಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವಿನಿಂದ ಪ್ರೇರಿತರಾಗಿರುವ ಅನೇಕ ಮುಸ್ಲಿಂ ಮಹಿಳೆಯರು ಬುಧವಾರ ಹೈದರಾಬಾದ್ನಲ್ಲಿ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡರು. ದಬೀರ್ಪುರ ಮತ್ತು ಯಕುತ್ಪುರ ಸೇರಿದಂತೆ ಹೈದರಾಬಾದ್ನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಬಿಜೆಪಿಯ ಸದಸ್ಯತ್ವ ಅಭಿಯಾನದ ಸಂದರ್ಭದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು, “ಹೈದರಾಬಾದ್ನ ದಬೀರ್ಪುರ ಮತ್ತು ಯಾಕುತ್ಪುರ ಪ್ರದೇಶಗಳಲ್ಲಿ ಬಿಜೆಪಿಯು ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಿದೆ. ಈ ವೇಳೆ ನೂರಾರು ಮುಸ್ಲಿಂ ಯುವತಿಯರು ಮತ್ತು ಮಹಿಳೆಯರು ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಮುಸ್ಲಿಂ ಸಮುದಾಯದ ಬಿ.ಟೆಕ್. ಪದವೀಧರರು ಕೂಡ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ” ಎಂದಿದ್ದಾರೆ.
ತ್ರಿವಳಿ ತಲಾಖ್ ನಿಷೇಧ ಸೇರಿದಂತೆ ಮೋದಿ ಸರ್ಕಾರ ಜಾರಿಗೆ ತಂದ ಹಲವು ಯೋಜನೆಗಳಿಂದ ಪ್ರೇರಿತಗೊಂಡು ಮುಸ್ಲಿಂ ಮಹಿಳೆಯರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ.
“ಕೆಲವು ಮುಸ್ಲಿಂ ಮಹಿಳೆಯರು ಬೇಟಿ ಪಡಾವೋ ಬೇಟಿ ಬಚಾವೊ ಯೋಜನೆ ಮತ್ತು ಕೇಂದ್ರವು ಒದಗಿಸುವ ವಿದ್ಯಾರ್ಥಿವೇತನ ಯೋಜನೆಯಿಂದ ಸಂತುಷ್ಟರಾಗಿದ್ದಾರೆ. ಕೇಂದ್ರ ಸರ್ಕಾರವು ಮುಸ್ಲಿಮರಿಗಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿದೆ” ಎಂದು ದತ್ತಾತ್ರೇಯ ಹೇಳಿದ್ದಾರೆ.
ಎಐಐಎಂಐಎಂ ಪಕ್ಷವು ಮುಸ್ಲಿಂ ಮಹಿಳೆಯರ ಮನಸ್ಸಿನಲ್ಲಿ ಬಿಜೆಪಿ ವಿರುದ್ಧ ಭಯ ಮತ್ತು ದ್ವೇಷವನ್ನು ಸೃಷ್ಟಿಸುತ್ತಿದೆ ಎಂದು ಅವರು ಈ ವೇಳೆ ಆರೋಪಿಸಿದರು.
“ಈ ಹಿಂದೆ, ಮುಸ್ಲಿಂ ಮಹಿಳೆಯರಿಗೆ ಬಿಜೆಪಿಯ ಸಿದ್ಧಾಂತ ಮತ್ತು ಅವರ ಸಬಲೀಕರಣಕ್ಕಾಗಿ ಅದು ತೆಗೆದುಕೊಂಡ ಪ್ರಯತ್ನಗಳ ಬಗ್ಗೆ ತಿಳಿದಿರಲಿಲ್ಲ, ಏಕೆಂದರೆ ಎಐಎಂಐಎಂ ಪಕ್ಷವು ಬಿಜೆಪಿಯ ವಿರುದ್ಧ ಭಯ ಮತ್ತು ದ್ವೇಷವನ್ನು ಅವರ ಮನಸ್ಸಿನಲ್ಲಿ ಸ್ಥಾಪಿಸಿತ್ತು. ಬಿಜೆಪಿ ಗೆದ್ದರೆ ಇಸ್ಲಾಂ ಧರ್ಮಕ್ಕೆ ಅಪಾಯ, ಆ ಪಕ್ಷ ಮುಸ್ಲಿಮರನ್ನು ಬದುಕಲು ಬಿಡುವುದಿಲ್ಲ ಎಂದೆಲ್ಲಾ ಹೇಳಿ ಅವರ ತಲೆ ಕಡೆಸಿತ್ತು. ಆದರೆ ಪಕ್ಷದ ದೃಷ್ಟಿ ಮತ್ತು ಕೇಂದ್ರದ ಯೋಜನೆಗಳ ಬಗ್ಗೆ ನಾನು ಅವರಿಗೆ ಸ್ಪಷ್ಟವಾಗಿ ವಿವರಿಸಿದ್ದೇನೆ. ಹಳೆಯ ನಗರದಲ್ಲಿ ನೆಲೆಸಿರುವ ಮುಸ್ಲಿಮರು, ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವ ಎಐಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಮಾತನ್ನು ಕೇಳಲು ಇವರೀಗ ಸಿದ್ಧರಿಲ್ಲ” ಎಂದು ಅವರು ಹೇಳಿದ್ದಾರೆ.
ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ಸಂರಕ್ಷಣೆ) ಮಸೂದೆ, 2019, ತ್ರಿವಳಿ ತಲಾಖ್ಗೆ ಮೂರು ವರ್ಷಗಳ ಸಜೆಯನ್ನು ವಿಧಿಸುತ್ತದೆ. ನರೇಂದ್ರ ಮೋದಿ ಸರ್ಕಾರ ಅದನ್ನು ಉಭಯ ಸದಸನಗಳಲ್ಲಿ ಮಂಡನೆಗೊಳಿಸಲು ದೃಢ ನಿಲುವು ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.