ನವದೆಹಲಿ: ಭಾರತದ ವಾಯುಪಡೆಯು ಬಾಲಕೋಟ್ ವೈಮಾನಿಕ ದಾಳಿ ಮತ್ತು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನೊಳಗೊಂಡ ಐಎಎಫ್ ಮೊಬೈಲ್ ಗೇಮ್ ಅನ್ನು ಪ್ರಾರಂಭಿಸುತ್ತಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ಫಾರ್ಮ್ಗಳಿಗಾಗಿ ಫ್ಲೈಟ್ ಸಿಮ್ಯುಲೇಟರ್ ಮೊಬೈಲ್ ಗೇಮ್ನ ಟೀಸರ್ ಅನ್ನು ತನ್ನ ಅಧಿಕೃತ ಟ್ವಿಟರ್ನಲ್ಲಿ ವಾಯುಸೇನೆ ಬಿಡುಗಡೆ ಮಾಡಿದೆ.
ಟೀಸರ್, ರಷ್ಯಾ ನಿರ್ಮಿತ ಮಿಗ್ 21 ರ ಮಾದರಿಯಲ್ಲಿ ಇರುವ ವಿಮಾನದ ದೃಶ್ಯದಿಂದ ಪ್ರಾರಂಭವಾಗುತ್ತದೆ. ವಿಮಾನದ ಜೊತೆಗೆ, ಅಭಿನಂದನ್ ಅವರನ್ನು ಹೋಲುವ ಫೈಟರ್ ಪೈಲಟ್ನನ್ನು ನೋಡಬಹುದಾಗಿದೆ.
‘ಇಂಡಿಯನ್ ಏರ್ ಫೋರ್ಸ್: ಎ ಕಟ್ ಅಬವ್’ ಗೇಮ್ ಅನ್ನು ಜುಲೈ 31 ರಂದು ಚಾಲನೆಗೊಳಿಸಲಿದೆ ಮತ್ತು ಆರಂಭದಲ್ಲಿ ಏಕ ಆಟಗಾರ ಮಾದರಿಯಲ್ಲಿ ಇರಲಿದೆ. ಬಹು ಆಟಗಾರ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಐಎಎಫ್ ಟ್ವೀಟ್ ಮೂಲಕ ಪ್ರಕಟಿಸಿದೆ.
ಭಾರತೀಯ ವಾಯುಪಡೆಯ ಶಕ್ತಿಯನ್ನು ಹೆಚ್ಚಿಸುತ್ತಿರುವ ವಿವಿಧ ಫೈಟರ್ ಜೆಟ್ಗಳು ಮತ್ತು ಹೆಲಿಕಾಫ್ಟರ್ಗಳನ್ನು ಈ ಗೇಮ್ಸ್ನಲ್ಲಿ ಕಾಣಬಹುದಾಗಿದೆ.
ಟೀಸರ್ನಲ್ಲಿ ಆಟಗಾರ- “ನಾನು ವಾಯುಸೇನೆಯ ಹೆಮ್ಮೆಯ ಮತ್ತು ನಿರ್ಭೀತ ಯೋಧ. ಪ್ರತಿಯೊಂದು ಕಾರ್ಯದಲ್ಲೂ ನನ್ನ ತಾಯಿನಾಡಿನ ಗೌರವ ಮತ್ತು ಸುರಕ್ಷತೆಗೆ ನಾನು ಮೊದಲ ಸ್ಥಾನ ನೀಡುತ್ತೇನೆ. ನಾನು ಶತ್ರು ಪ್ರದೇಶಕ್ಕೆ ಜಿಗಿಯುತ್ತೇನೆ ಮತ್ತು ಶತ್ರುಗಳ ಹೃದಯದಲ್ಲಿ ಭಯವನ್ನು ಸೃಷ್ಟಿಸುತ್ತೇನೆ. ವಾಯು ಯೋಧನಾಗಲು ಈಗ ನಿಮಗೂ ಅವಕಾಶವಿದೆ. ನಿಮ್ಮ ಕರ್ತವ್ಯವನ್ನು ಮಾಡಿ ಮತ್ತು ಮಿಷನ್ ಸಾಧಿಸಿ. ಆಕಾಶದ ಮೇಲೆ ಪ್ರಭುತ್ವ ಸಾಧಿಸಿ, ಪರ್ವತಗಳ ಮೇಲೆ ಏರಿ, ವಿಶ್ವದ ಅತ್ಯಾಧುನಿಕ ಯಂತ್ರಗಳನ್ನು ಹಾರಿಸಿ ಮತ್ತು ಆಕಾಶವನ್ನು ವೈಭವದಿಂದ ಸ್ಪರ್ಶಿಸಿ. ವಾಯು ಯೋಧರಾಗಿರಿ” ಎಂಬ ಸಂದೇಶವನ್ನು ನೀಡುತ್ತೇನೆ.
Launch of #IAF #MobileGame : Android / iOS version of IAF developed Mobile Game (Single Player) will be launched on 31 Jul 19. Download on your Android / iOS mobile phone & cherish the thrilling flying experience. The multiplayer version will soon follow. The Teaser of the game… pic.twitter.com/yhfOrOZxWV
— Indian Air Force (@IAF_MCC) July 20, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.