ನವದೆಹಲಿ: ಐಐಟಿ ದೆಹಲಿ ಆವರಣದಲ್ಲಿ ಇನ್ನು ಮುಂದೆ ಸೋಲಾರ್ ಚಾಲಿತ ಸೈಕಲ್ ರಿಕ್ಷಾಗಳು ಓಡಾಡಲಿವೆ. ಕೇಂದ್ರ ಸರ್ಕಾರದಡಿಯಲ್ಲಿರುವ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) ತನ್ನ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮದಡಿಯಲ್ಲಿ 10 ಸೋಲಾರ್ ಚಾಲಿತ ರಿಕ್ಷಾಗಳನ್ನು ಸೈಕಲ್ ರಿಕ್ಷಾ ಚಾಲಕರಿಗೆ ಹಸ್ತಾಂತರ ಮಾಡಿದೆ.
ರಿಕ್ಷಾಗಳ ಮೇಲೆ 300-ವ್ಯಾಟ್ ಸಾಮರ್ಥ್ಯದ ಸೌರ ಫಲಕವನ್ನು ನಿರ್ಮಿಸಲಾಗಿದೆ. ಇದು ರಿಕ್ಷಾಗೆ ಮೇಲ್ಛಾವಣಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಫಲಕಗಳು, ದಿನವಿಡೀ ಚಾರ್ಜಿಂಗ್ ಆಗುವುದರಿಂದ ಈ ರಿಕ್ಷಾಗಳು ಸಾಮಾನ್ಯ ರಿಕ್ಷಾಗಳಿಗಿಂತ ಒಂದು ದಿನದಲ್ಲಿ ದುಪ್ಪಟ್ಟು ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸೈಕಲ್ ರಿಕ್ಷಾ ಚಾಲಕರ ದೈಹಿಕ ಶ್ರಮವನ್ನು ಕಡಿಮೆ ಮಾಡುವುದಲ್ಲದೆ, ಹೆಚ್ಚು ಆದಾಯ ಗಳಿಸಲು ಸಹಾಯ ಮಾಡುತ್ತದೆ.
ಪರಿಸರವನ್ನು ಸಂರಕ್ಷಿಸುವ, ಉದ್ಯೋಗವನ್ನು ಸೃಷ್ಟಿಸುವ ಸಲುವಾಗಿ ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ಜ್ಞಾನವನ್ನು ಬಳಸಿ ರೂಪಿಸಲಾದ ಹೊಸ ನಾವೀಣ್ಯದ ಸೈಕಲ್ ರಿಕ್ಷಾ ಇದಾಗಿದೆ ಎಂದು ಐಐಟಿಯ ನಿರ್ದೇಶಕ ರಾಮ್ ಗೋಪಾಲ್ ರಾವ್ ಹೇಳಿದ್ದಾರೆ.
ಭಾರ ಹೆಚ್ಚಾದಾಗ ಮತ್ತು ಕಠಿಣ ಹಾದಿಗಳಲ್ಲಿ ಚಾಲಕರಿಗೆ ಈ ಸೋಲಾರ್ ಸೈಕಲ್ ರಿಕ್ಷಾದಲ್ಲಿ ಅಳವಡಿಸಲಾದ ಸೋಲಾರ್ ಹೈಬ್ರಿಡಿ ಸಿಸ್ಟಮ್ ಸಹಾಯಕ್ಕೆ ಬರುತ್ತದೆ. ಅವರ ಶ್ರಮವನ್ನು ಕಡಿಮೆ ಮಾಡುತ್ತದೆ. ಗಂಟೆಗೆ 10-15 ಕಿಮೀ ಈ ಸೋಲಾರ್ ಚಾಲಿತ ರಿಕ್ಷಾದ ಸೂಕ್ತ ವೇಗವಾಗಿದೆ, ಆದರೆ ಚೀನಾದಿಂದ ಆಮದಾದ ಮೋಟಾರ್ ಅಳವಡಿಸಿದರೆ ಗಂಟೆಗೆ 25 ಕಿಮೀ ಚಲಿಸುತ್ತದೆ.
ಈ ರಿಕ್ಷಾದ ಬೆಲೆ ರೂ.68 ಸಾವಿರ ಆಗಿದೆ. ಇ-ರಿಕ್ಷಾಗಳ ಬೆಲೆ 1.25 ಲಕ್ಷ ಆಗಿದೆ. ಪ್ರಸ್ತುತ ದೆಹಲಿ ಐಐಟಿಯ ಆವರಣದಲ್ಲಿ 10 ಸೋಲಾರ್ ಚಾಲಿತ ರಿಕ್ಷಾಗಳು ಕಾರ್ಯಾಚರಿಸಲಿವೆ. ಮುಂಬರುವ ದಿನಗಳಲ್ಲಿ ಇದನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.