ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ವಿವಿಧ ಕ್ಷಿಪಣಿಗಳನ್ನು ತಯಾರಿಸಲು ರೂ. 8,000 ಕೋಟಿ ಮೊತ್ತದ ಆರ್ಡರ್ ಅನ್ನು ಪಡೆದುಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ವಿವಿಧ ಸಶಸ್ತ್ರ ಪಡೆಗಳಿಗೆ ಈ ಕ್ಷಿಪಣಿಗಳನ್ನು ಅದು ಪೂರೈಕೆ ಮಾಡಲಿದೆ.
ಮುಂದಿನ ಪೀಳಿಗೆಯ ಕ್ಷಿಪಣಿಗಳ ಉತ್ಪಾದನೆಯನ್ನು ಹೆಚ್ಚಿಸುವತ್ತ ಕಾರ್ಯೋನ್ಮುಖಗೊಂಡಿರುವ ಬಿಡಿಎಲ್, ಮುಂದಿನ ನಾಲ್ಕು-ಐದು ವರ್ಷಗಳಲ್ಲಿ ತನ್ನ ಆರ್ಡರ್ಗಳನ್ನು 25 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ನೀರಿಕ್ಷೆಯನ್ನು ಹೊಂದಿದೆ. ವ್ಯವಸ್ಥೆಗಳು ಮತ್ತು ಉತ್ಪನ್ನಗಳ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಸಂಯೋಜಿಸುವ ನಿಟ್ಟಿನಲ್ಲಿ ಇದು, ಐಐಐಟಿ ಹೈದರಾಬಾದ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ರಕ್ಷಣಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ನಡೆಯುತ್ತಿರುವ ಬಿಡಿಎಲ್, ಈ ವರ್ಷ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. 1970ರ ಜುಲೈ 17ರಂದು ಸಶಸ್ತ್ರ ಪಡೆಗಳ ಮಾರ್ಗದರ್ಶಿ ಕ್ಷಿಪಣಿಗಳು ಮತ್ತು ಮೈತ್ರಿ ರಕ್ಷಣಾ ಸಾಧನಗಳ ಅಗತ್ಯತೆಗಳನ್ನು ಪೂರೈಸುವ ಉತ್ಪಾದನಾ ನೆಲೆಯಾಗಿ ಇದನ್ನು ಸ್ಥಾಪನೆ ಮಾಡಲಾಯಿತು.
ಪ್ರಸ್ತುತ ಬಿಡಿಎಲ್, ಆ್ಯಂಡಿ-ಟ್ಯಾಂಕ್ ಗೈಡೆಡ್ ಮಿಸೈಲ್ಗಳು (ಎಟಿಜಿಎಂಗಳು), ಆಕಾಶ್ ಸರ್ಫೇಸ್ ಟು ಏರ್ ಮಿಸೈಲ್, ಟಾರ್ಪಿಡೊಗಳು, ಅನ್ವೇಷಕ-ಆಧಾರಿತ ಬಹು-ಪಾತ್ರದ ವಾಯು ರಕ್ಷಣಾ ಕ್ಷಿಪಣಿ ಅಥವಾ ಎಂಆರ್ಎಸ್ಎಎಂ (ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್)ಗಳನ್ನು ತಯಾರಿಸುತ್ತಿದೆ. ಡಿಆರ್ಡಿಒ, ಐಎಐ (ಇಸ್ರೇಲ್) ಮತ್ತು ಇತರರು ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.