ನವದೆಹಲಿ: ಇಂದು ದೇಶದಾದ್ಯಂತ ಗುರು ಪೂರ್ಣಿಮೆಯನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮೆಯನ್ನು ಆಚರಣೆ ಮಾಡಲಾಗುತ್ತದೆ.
ಗುರು ಪೂರ್ಣಿಮೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ ಸೇರಿದಂತೆ ಅನೇಕರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
‘ಎಲ್ಲಾ ದೇಶವಾಸಿಗಳಿಗೂ ಗುರು ಪೂರ್ಣಿಮೆಯ ಶುಭ ಸಂದರ್ಭದ ಹಾರ್ದಿಕ ಶುಭಾಶಯಗಳು. ಗುರುಪುರ್ಣಿಮೆಯ ಶುಭ ದಿನದಂದು, ನಮ್ಮ ಸಮಾಜವನ್ನು ಪ್ರೇರೇಪಿಸುವ, ರೂಪಿಸುವ ಮತ್ತು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನಮ್ಮ ಎಲ್ಲ ಗುರುಗಳಿಗೂ ನಾವು ತಲೆ ಬಾಗಿ ಗೌರವ ಸಲ್ಲಿಸುತ್ತೇವೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
सभी देशवासियों को गुरु पूर्णिमा की हार्दिक शुभकामनाएं।
On the auspicious day of #GuruPurnima, we bow in reverence to all our Gurus who have played an important role in inspiring, moulding and shaping our society.
— Narendra Modi (@narendramodi) July 16, 2019
ಗೃಹಸಚಿವ ಅಮಿತ್ ಶಾ ಅವರು ಟ್ವಿಟ್ ಮಾಡಿ, “ಗುರುವಿನ ಜ್ಞಾನವೇ ಒಬ್ಬ ವ್ಯಕ್ತಿಯನ್ನು ಅಂಧಕಾರದಿಂದ ಬೆಳಕಿನತ್ತ ಕೊಂಡೊಯ್ಯುತ್ತದೆ. ಗುರುವೇ ಶಿಷ್ಯನಿಗೆ ಮಾರ್ಗದರ್ಶನವನ್ನು ನೀಡಿ ಆತನ ಜೀವನವನ್ನು ಸಾರ್ಥಕತೆಯತ್ತ ಕೊಂಡೊಯ್ಯುತ್ತಾನೆ. ಗುರು ಪೂರ್ಣಿಮೆಯ ಈ ಪವಿತ್ರ ದಿನದಂದು, ಕಷ್ಟವನ್ನು ಸಹಿಸಿಕೊಂಡು ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯಲು ಮಾರ್ಗದರ್ಶನ ನೀಡುವ ಕೋಟಿ ಕೋಟಿ ಮಹಾಪುರುಷರಿಗೆ ವಂದನೆಗಳು” ಎಂದಿದ್ದಾರೆ.
गुरु का ज्ञान ही एक व्यक्ति को अंधकार से प्रकाश की ओर ले जाता है, गुरु ही शिष्य का मार्गदर्शन कर उसके जीवन को सार्थक बनाता है।
गुरु पूर्णिमा के इस पर्व पर स्वयं कष्ट सहकर समाज को उन्नति का मार्ग दिखाने वाले सभी ज्ञानी महापुरुषों को कोटि-कोटि वंदन।
गुरु पूर्णिमा की शुभकामनाएँ। pic.twitter.com/YlTM8NafZA
— Amit Shah (@AmitShah) July 16, 2019
ಗುರು ಪೂರ್ಣಿಮೆಯು ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಶಿಕ್ಷಕರಿಗೆ ಗುರುಪೂಜೆ ಮೂಲಕ ಗೌರವ ವಂದನೆಗಳನ್ನು ಅರ್ಪಿಸುವ ದಿನವಾಗಿದೆ. ಗುರು ಪೂರ್ಣಿಮೆಯನ್ನು ಅಷಾಢ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.