ಗುಂಟಕಲ್: ಸೌತ್ ಸೆಂಟ್ರಲ್ ರೈಲ್ವೇ ಝೋನ್ ಅಡಿಯಲ್ಲಿ ಬರುವ ಗುಂಟಕಲ್ ರೈಲ್ವೆ ನಿಲ್ದಾಣವು ಮಳೆನೀರನ್ನು ಸಂರಕ್ಷಿಸುವ ನವೀನ ಮಾದರಿಯನ್ನು ಅಳವಡಿಸಿಕೊಂಡಿದೆ. ‘ಉಲ್ಟಾ ಛತ್ರಿ’ ಛಾವಣಿಯ ರಚನೆಯನ್ನು ಅಲ್ಲಲ್ಲಿ ನಿರ್ಮಾಣ ಮಾಡುವ ಮೂಲಕ ಈ ರೈಲು ನಿಲ್ದಾಣದಲ್ಲಿ ಮಳೆ ನೀರನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಫೈನಾನ್ಶಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮೊಬೈಲ್ ಮತ್ತು ಲ್ಯಾಪ್ಟಾಪ್ ಚಾರ್ಜಿಂಗ್, ಆಸನ ವ್ಯವಸ್ಥೆ ಇತ್ಯಾದಿಗಳಿಗೆ ಸಾಕಷ್ಟು ವಿದ್ಯುತ್ ಅನ್ನು ಒದಗಿಸುವ ಸೌರ ಫಲಕಗಳನ್ನು ಕೂಡ ಈ ಉಲ್ಟಾ ಛತ್ರಿ ಛಾವಣಿ ಒಳಗೊಂಡಿದೆ.
ಜಾಮೆಟ್ರಿಕ್ ವಿನ್ಯಾಸವನ್ನು ಹೊಂದಿರುವ ಕಾರಣ ಈ ವ್ಯವಸ್ಥೆಯನ್ನು ‘ಮಾಡೆಲ್ 1080’ ಎಂದು ಕರೆಯಲಾಗುತ್ತದೆ. ಬಹು-ಉಪಯುಕ್ತತೆಯ ವ್ಯವಸ್ಥೆಯಡಿ ಇಲ್ಲಿ ಮಳೆ ಮತ್ತು ಶಾಖದ ವಿರುದ್ಧ ಸರಳ ರಕ್ಷಣೆಯನ್ನು ಸುಧಾರಣೆಗೊಳಿಸಲಾಗಿದೆ.
‘ಮಾಡೆಲ್ 1080’ ಮಾದರಿಯ ಆರು ಉಲ್ಟಾ ಛತ್ರಿ ರಚನೆಗಳನ್ನು ಅಂದಾಜು 14 ಲಕ್ಷ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗಿದೆ, ಪ್ರತಿಯೊಂದರ ಮೇಲಾವರಣವು ಸುಮಾರು 60,000 ಲೀಟರ್ ಮಳೆನೀರನ್ನು ಕೊಯ್ಲು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ರಚನೆಯನ್ನು ಅಂತರ್ಜಲ ಪುನರ್ಭರ್ತಿ ಮಾಡುವ ಅಥವಾ ಮಳೆ ನೀರನ್ನು ಟ್ಯಾಂಕ್ಗಳಲ್ಲಿ ಸಂಗ್ರಹಿಸಲು ಅನುವು ಮಾಡಿಕೊಡುವ ಟ್ಯಾಂಕುಗಳಿಗೆ ಕನೆಕ್ಟ್ ಮಾಡಲಾಗಿದೆ.
ಈ ಉಲ್ಟಾ ಛತ್ರಿಗಳು 140 ಕಿ.ಮೀ ವೇಗದ ಗಾಳಿಯನ್ನು ಸಹಿಸಬಲ್ಲವು ಮತ್ತು ಇದರಲ್ಲಿ ಉತ್ಪತ್ತಿಯಾಗುವ ಸೌರಶಕ್ತಿಯನ್ನು ಮತ್ತೆ ಗ್ರಿಡ್ಗೆ ನೀಡಬಹುದು. ಸಾಕಷ್ಟು ಸೌರಶಕ್ತಿ ಉತ್ಪಾದನೆಯಾಗದಿದ್ದ ಸಂದರ್ಭಗಳಲ್ಲಿ ಬಳಸಲು ಈ ರಚನೆಗಳು ಚಾರ್ಜಿಂಗ್ ಔಟ್ ಲೆಟ್ಗಳಿಗೆ ಬ್ಯಾಕ್-ಅಪ್ ಬ್ಯಾಟರಿಗಳನ್ನು ಕೂಡ ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.