ನವದೆಹಲಿ: ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಒಟ್ಟು ಠೇವಣಿ 1 ಲಕ್ಷ ಕೋಟಿ ರೂ. ಗಡಿಯನ್ನು ದಾಟಿದೆ. ಹಣಕಾಸು ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, 2019ರ ಜುಲೈ 3 ರ ವೇಳೆಗೆ 36.06 ಕೋಟಿಗೂ ಅಧಿಕ ಜನ ಧನ್ ಖಾತೆಗಳಲ್ಲಿ ಸಂಗ್ರಹವಾದ ಒಟ್ಟು ಹಣದ ಮೊತ್ತ 100,495.94 ಕೋಟಿ ರೂ.
ವರದಿಯ ಪ್ರಕಾರ, ಜನ್ ಧನ್ ಯೋಜನೆಯ ಫಲಾನುಭವಿಗಳ ಖಾತೆಗಳಲ್ಲಿನ ಠೇವಣಿ ಜೂನ್ 6 ರಂದು 99,649.84 ಕೋಟಿ ರೂ ಆಗಿತ್ತು ಮತ್ತು ಅದರ ಹಿಂದಿನ ವಾರದಲ್ಲಿ 99,233.71 ಕೋಟಿ ರೂ ಆಗಿತ್ತು. ದೇಶದ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆಗಸ್ಟ್ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದರು.
ಜನ್ ಧನ್ ಯೋಜನೆಯ ಅಡಿಯಲ್ಲಿ, ಗ್ರಾಹಕರಿಗೆ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ (ಬಿಎಸ್ಬಿಡಿ) ಖಾತೆಗಳನ್ನು ರುಪೇ ಡೆಬಿಟ್ ಕಾರ್ಡ್ನ ಹೆಚ್ಚುವರಿ ಸೌಲಭ್ಯಗಳೊಂದಿಗೆ ನೀಡಲಾಗಿದೆ ಮತ್ತು ಈ ಖಾತೆಯ ಓವರ್ಡ್ರಾಫ್ಟ್ ಮಿತಿ 10,000 ರೂ., ಹಿಂದೆ ಓವರ್ ಡ್ರಾಫ್ಟ್ ಮಿತಿ ರೂ. 5 ಸಾವಿರ ಆಗಿತ್ತು.
ಈ ಯೋಜನೆಯ ಅಡಿಯಲ್ಲಿದ್ದ ಶೂನ್ಯ ಠೇವಣಿ ಖಾತೆಗಳ ಸಂಖ್ಯೆ 2018 ರ ಮಾರ್ಚ್ನಲ್ಲಿ 5.10 ಕೋಟಿಯಿತ್ತು, 2019 ರ ಮಾರ್ಚ್ ವೇಳೆಗೆ ಅದು 5.07 ಕೋಟಿಗೆ ಇಳಿದಿದೆ ಎಂದು ಇತ್ತೀಚೆಗೆ ಹಣಕಾಸು ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.