ನವದೆಹಲಿ: ಗುಜರಾತಿನ ಜನಪದ ಗಾಯಕಿ ಗೀತಾ ರಾಬರಿ ಅವರು ಸಂಸತ್ತಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಬಳಿಕ ಮೋದಿಗಾಗಿ ಹಾಡೊಂದನ್ನೂ ಅರ್ಪಣೆ ಮಾಡಿದ್ದಾರೆ. ಆಕೆ ಕಾಡಿನಲ್ಲಿ ವಾಸಿಸುವ ಮಾಲ್ಧರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮೋದಿಯಿಂದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಪೋಸ್ಟ್ ಕಾರ್ಡ್ ಬಂದ ಬಳಿಕವಷ್ಟೇ ನನ್ನ ತಂದೆ ನನ್ನನ್ನು ಶಾಲೆಗೆ ಕಳುಹಿಸಿದರು ಎಂದು ಈಕೆ ಹೇಳಿಕೊಂಡಿದ್ದಾರೆ.
ಶಾಲೆಯಲ್ಲಿರುವಾಗ ನಾನು ಮೊದಲ ಬಾರಿಗೆ ಮೋದಿಯವರನ್ನು ಭೇಟಿಯಾದರೆ, ಆಗ ನಾನು ಹಾಡೊಂದನ್ನು ಹಾಡಿದ್ದೆ, ಬಳಿಕ ಮೋದಿ ನನಗೆ ರೂ.250 ನೀಡಿ ಸಂಗೀತ ಅಭ್ಯಾಸ ಮುಂದುವರೆಸು ಎಂದು ಹಾರೈಸಿದ್ದರು ಎಂದಿದ್ದಾರೆ.
ಮಾಲ್ಧರಿ ಗುಜರಾತಿನ ಬುಡಕಟ್ಟು ಜನಾಂಗವಾಗಿದ್ದು, ಗೋವನ್ನು ಕಾಯುವವರು ಎಂಬುದು ಮಾಲ್ಧರಿ ಶಬ್ಧದ ಅರ್ಥ. ಅವರು ಆ ಪ್ರದೇಶದ ಸಾಂಪ್ರದಾಯಿಕ ಹೈನುಗಾರರಾಗಿದ್ದಾರೆ. ರಾಜ ಮಹಾರಾಜರುಗಳಿಗೆ ಹಿಂದೆ ಇವರೇ ಹಾಲು ಪೂರೈಸುತ್ತಿದ್ದರು ಎಂಬ ಪ್ರತೀತಿ ಇದೆ. ಮಾಲ್ಧರಿಗಳು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದಾರೆ.
Gujarati folk singer Geeta Rabari after meeting PM: I 1st met him when I was a child. I sang in school, he awarded me Rs 250&asked me to keep practicing. We’re Maldhari ppl who live in jungle, my father received a post card of “Beti Bachao, Beti Padhao”, then he sent me to school pic.twitter.com/IrZIRhn5xa
— ANI (@ANI) July 8, 2019
#WATCH Gujarati folk singer Geeta Rabari dedicates a song to Prime Minister Narendra Modi after meeting him at the Parliament pic.twitter.com/f1Nljc6U8O
— ANI (@ANI) July 8, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.