ನವದೆಹಲಿ: ‘ಡಿಜಿಟಲ್ ಉಡಾನ್’ ಎಂಬುದು ಹೊಸ ಡಿಜಿಟಲ್ ಸಾಕ್ಷರತಾ ಅಭಿಯಾನವಾಗಿದೆ. ಮೊದಲ ಬಾರಿಗೆ ಇಂಟರ್ನೆಟ್ಗೆ ಸಂಪರ್ಕಿತಗೊಂಡವರಿಗೆ, ಇಂಟರ್ನೆಟ್ ಹೇಗೆ ಬಳಕೆ ಮಾಡಬೇಕು ಎಂಬುದನ್ನು ಹೇಳಿಕೊಡುವ ಸಲುವಾಗಿ ರಿಲಾಯನ್ಸ್ ಜಿಯೋ ಮತ್ತು ಸೋಶಿಯಲ್ ಮೀಡಿಯಾ ಪಾಲುದಾರ ಫೇಸ್ಬುಕ್ 13 ರಾಜ್ಯಗಳ 200 ಸ್ಥಳಗಳಲ್ಲಿ ಈ ಅಭಿಯಾನವನ್ನು ಆರಂಭಿಸಿದೆ.
ಪ್ರಾಯೋಗಿಕವಾಗಿ ಬಳಕೆ ಮಾಡಲು ಡಿಜಿಟಲ್ ಉಡಾನ್ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಫೇಸ್ಬುಕ್ ಮಾಡ್ಯೂಲ್ಗಳನ್ನು ಅಭಿವೃದ್ಧಿಪಡಿಸಿದೆ. ಜಿಯೋ 300 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಇವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಇಂಟರ್ನೆಟ್ ಬಳಸುತ್ತಿರುವವರಾಗಿದ್ದಾರೆ. ಈ ಅಭಿಯಾನವು 10 ಪ್ರಾದೇಶಿಕ ಭಾಷೆಗಳಲ್ಲಿ ಆಡಿಯೋ-ವಿಶ್ಯುವಲ್ ತರಬೇತಿಯನ್ನು ಹೊಂದಿದೆ.
“ಡಿಜಿಟಲ್ ಉಡಾನ್ ಅಂತರ್ಗತ ಮಾಹಿತಿಗಾಗಿ, ಶಿಕ್ಷಣ ಮತ್ತು ಮನರಂಜನೆಗಾಗಿನ ಒಂದು ಕಾರ್ಯಕ್ರಮವಾಗಿದೆ, ಡಿಜಿಟಲ್ ಅಭಿಯಾನದಿಂದ ಯಾವುದೇ ಭಾರತೀಯರು ಹೊರಗುಳಿಯಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡು ಇದನ್ನು ಆರಂಭಿಸಲಾಗಿದೆ. ಇದನ್ನು ದೇಶದ ಪ್ರತಿ ನಗರ ಮತ್ತು ಹಳ್ಳಿಗೆ ಕೊಂಡೊಯ್ಯಲು ಜಿಯೋ ಉದ್ದೇಶಿಸಿದೆ, ದೇಶ ಶೇ. 100 ರಷ್ಟು ಡಿಜಿಟಲ್ ಸಾಕ್ಷರತೆಯನ್ನು ಸಾಧಿಸಬೇಕು ಎಂಬುದು ನಮ್ಮ ಗುರಿ” ಎಂದು ರಿಲಾಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.
ಡಿಜಿಟಲ್ ಉಡಾನ್ ಕಾರ್ಯಕ್ರಮವು ಪ್ರತಿ ಶನಿವಾರ ತನ್ನ ಬಳಕೆದಾರರೊಂದಿಗೆ ಬೆರೆಯುತ್ತಿದ್ದು, ಅವರಿಗೆ ಜಿಯೋಫೋನ್ ವೈಶಿಷ್ಟ್ಯಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತಿದೆ. ಫೇಸ್ ಬುಕ್ ಸೇರಿದಂತೆ ವಿವಿಧ ಅಪ್ಲಿಕೇಶನ್ಗಳ ಬಳಕೆ ಮತ್ತು ಇಂಟರ್ನೆಟ್ ಸುರಕ್ಷತೆಯನ್ನು ಅವರಿಗೆ ಹೇಳಿಕೊಡುತ್ತದೆ.
“ಫೇಸ್ಬುಕ್ ಈ ಕಾರ್ಯಕ್ರಮದ ಪಾಲುದಾರನಾಗಿದೆ. ಹೊಸ ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸುವಲ್ಲಿ ನಾವು ಜಿಯೋ ಜೊತೆ ಪಾಲುದಾರರಾಗಲು ಸಂತೋಷಪಡುತ್ತಿದ್ದೇವೆ” ಎಂದು ಫೇಸ್ಬುಕ್ ಇಂಡಿಯಾದ ವಿ.ಪಿ ಮತ್ತು ಎಂಡಿ ಅಜಿತ್ ಮೋಹನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.