ಲಕ್ನೋ: ಗಂಗಾ ನದಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸಲುವಾಗಿ ಉತ್ತರ ಪ್ರದೇಶವು ಈ ಪವಿತ್ರ ನದಿಯ ದಡದಲ್ಲಿರುವ ಎಲ್ಲಾ 25 ಜಿಲ್ಲೆಗಳಲ್ಲಿ ಗಂಗಾ ಸಮಿತಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಗಂಗಾ ನದಿಯನ್ನು ಸ್ವಚ್ಛಗೊಳಿಸುವ ದೊಡ್ಡ ಕಾರ್ಯಕ್ರಮದ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ನೀರಿನ ಸಂರಕ್ಷಣೆ, ಬತ್ತಿದ ನದಿಗಳ ಪುನರುಜ್ಜೀವನ, ಮಳೆನೀರು ಕೊಯ್ಲು ಮತ್ತು ಗಿಡ ನೆಡುವ ಅಭಿಯಾನ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಶೇಖಾವತ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರು, ಪ್ರಸ್ತುತ ಬತ್ತಿದ 15 ನದಿಗಳ ಪಟ್ಟಿಯನ್ನು ನಮ್ಮ ಸರ್ಕಾರ ಸಿದ್ಧಪಡಿಸಿದೆ ಮತ್ತು ಕ್ರಿಯಾ ಯೋಜನೆಯಡಿ ಅದನ್ನು ಪುನಶ್ಚೇತನಗೊಳಿಸಲು ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ, ಪ್ರಮುಖ ಪವಿತ್ರ ನದಿಗಳ ತೀರದಲ್ಲಿ ಗಿಡ ನೆಡುವ ವಿಶೇಷ ಅಭಿಯಾನವನ್ನು ಆಯೋಜನೆಗೊಳಿಸಲಾಗುವುದು ಎಂದಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮಾತನಾಡಿ, ರೂ. 1185 ಕೋಟಿ ಮೌಲ್ಯದ ಕ್ಲೀನ್ ಗಂಗಾ ಮಿಷನ್ಗೆ ಸಂಬಂಧಿಸಿದ ಒಟ್ಟು 85 ಯೋಜನೆಗಳು ಯುಪಿಯಲ್ಲಿ ನಡೆಯುತ್ತಿದ್ದು, ಈ ಪೈಕಿ 15 ಯೋಜನೆಗಳು ಈವರೆಗೆ ಪೂರ್ಣಗೊಂಡಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.