ನವದೆಹಲಿ: ಹಕ್ಕಿಗಳ ಹೊಡೆತದಿಂದಾಗಿ ಎರಡು ಎಂಜಿನ್ಗಳ ಪೈಕಿ ಒಂದು ಎಂಜಿನ್ ಸ್ಥಗಿತಗೊಂಡ ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ಫೈಟರ್ ಜೆಟ್ ಅನ್ನು ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಮಯಪ್ರಜ್ಞೆ ಮತ್ತು ಸಾಹಸದಿಂದಾಗಿ ಅಂಬಾಲ ವಾಯುನೆಲೆಯ ಸಮೀಪ ವಾಸಿಸುತ್ತಿರುವ ಹಲವಾರು ನಾಗರಿಕ ಪ್ರಾಣ ಉಳಿದಿದೆ.
ಹಕ್ಕಿ ಹೊಡೆತದ 48 ಸೆಕೆಂಡ್ಗಳ ವೀಡಿಯೋವನ್ನು ವಾಯುಸೇನೆ ಬಿಡುಗಡೆಗೊಳಿಸಿದ್ದು, ಪೈಲೆಟ್ ಚಾಣಾಕ್ಷತನದಿಂದಾಗಿ ಅಂಬಾಲಾ ವಾಯುನೆಲೆ ಸಮೀಪದ ಜನರ ಪ್ರಾಣ ಉಳಿದಿದೆ ಎಂದಿದೆ.
#SavingLives: On the morning of 27 June19, an IAF Jaguar aircraft loaded with two additional fuel drop tanks & Carrier Bomb Light Stores
(CBLS) pods took off from AFS Ambala for a training
mission. Immediately after take off, the aircraft encountered a flock of
birds. pic.twitter.com/Mb0otqadVe— Indian Air Force (@IAF_MCC) June 28, 2019
ಯುವ ಪೈಲಟ್ ಗುರುವಾರ ಬೆಳಿಗ್ಗೆ 7.45 ರ ಸುಮಾರಿಗೆ ತರಬೇತಿ ಕಾರ್ಯಾಚರಣೆಗಾಗಿ ಅಂಬಾಲಾದ ವಾಯುಪಡೆಯ ನಿಲ್ದಾಣದಿಂದ ಫೈಟರ್ ಜೆಟ್ ಅನ್ನು ಹಾರಿಸಿದ್ದರು, ಟೇಕ್ ಆಫ್ ಆದ ಎರಡೇ ಸೆಕೆಂಡುಗಳಲ್ಲಿ ಹಕ್ಕಿಗಳ ಗುಂಪು ಜೆಟ್ಗೆ ಅಡ್ಡ ಬಂದು ಬಡಿದಿದೆ. ಇದರಿಂದಾಗಿ ಅದರ ಒಂದು ಎಂಜಿನ್ ಸ್ಥಗಿತಗೊಂಡಿದೆ. ವಿಮಾನಕ್ಕೆ ಬೆಂಕಿ ತಗುಲಿದೆ. ತಕ್ಷಣವೇ ಅಪಾಯವನ್ನರಿತ ಪೈಲೆಟ್ ಎರಡು ಹೆಚ್ಚುವರಿ ಇಂಧನ ಟ್ಯಾಂಕ್ಗಳನ್ನು, ಕ್ಯಾರಿಯರ್ ಬಾಂಬ್ ಲೈಟ್ ಸೋರ್ ಪಾಡ್ಗಳನ್ನು ಅಥವಾ ಪ್ರ್ಯಾಕ್ಟೀಸ್ ಬಾಂಬ್ಗಳನ್ನು ನೆಲಕ್ಕೆ ಎಸೆದಿದ್ದಾರೆ ಮತ್ತು ಸುರಕ್ಷಿತವಾದ ಸ್ಥಳಕ್ಕೆ ಹೋಗಿ ಲ್ಯಾಂಡ್ ಆಗಿದ್ದಾರೆ.
ಈ ಕಾರ್ಯ ಪೈಲೆಟ್ನ ಅದ್ಭುತ ಕಾರ್ಯಕ್ಷಮತೆ, ವೃತ್ತಿಪರತೆಯನ್ನು ತೋರಿಸಿದೆ. ವಾಯುಸೇನೆ ಈ ಯುವ ಪೈಲೆಟಿಗೆ ನೀಡಿದ ತರಬೇತಿಯ ಸಾಮರ್ಥ್ಯವನ್ನೂ ಇದು ಪ್ರದರ್ಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.