ನವದೆಹಲಿ: ಭಾರತೀಯ ಸೇನೆಯು 7,399 ಅಧಿಕಾರಿಗಳ ಮತ್ತು 38,235 ಇತರ ಶ್ರೇಣಿಯ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪ್ರಕಾರ, 2019ರ ಜನವರಿ ವೇಳೆಗೆ ಭಾರತೀಯ ಸೇನೆಯು 45,634 ಖಾಲಿ ಹುದ್ದೆಯನ್ನು ಹೊಂದಿದ್ದು, ಅದರಲ್ಲಿ 7,399 ಹುದ್ದೆಗಳು ಎರಡನೇ ಲೆಫ್ಟಿನೆಂಟ್ ಹುದ್ದೆಗಿಂತ ಮೇಲಿನ ಶ್ರೇಣಿಯ ಹುದ್ದೆಗಳಾಗಿವೆ.
2018ರ ಆಗಸ್ಟ್ ತಿಂಗಳಿನಲ್ಲಿ ಆಗಿನ ರಕ್ಷಣಾ ಖಾತೆಯ ರಾಜ್ಯ ಸಚಿವ ಸುಭಾಷ್ ಭಮ್ರೆ ಅವರು, ” 2018 ರ ಜನವರಿ 1 ರ ವೇಳೆಯಲ್ಲಿ ಸೇನೆಯಲ್ಲಿನ ಒಟ್ಟು ಅಧಿಕಾರಿಗಳ ಅಧಿಕೃತ ಸಾಮರ್ಥ್ಯ 49,933 ಆಗಿದೆ, ಆದರೆ ಇರುವ ಅಧಿಕಾರಿಗಳ ಸಂಖ್ಯೆ 42,635 ಆಗಿದೆ. 7,298 ಅಧಿಕಾರಿಗಳ ಕೊರತೆ ಇದೆ” ಎಂದಿದ್ದರು.
ಪಾಕಿಸ್ಥಾನ ಮತ್ತು ಚೀನಾದಂತಹ ಪ್ರತಿಕೂಲ ನೆರೆಹೊರೆಯವರೊಂದಿಗೆ ಭಾರತವು ಗಡಿಗಳನ್ನು ಹಂಚಿಕೊಳ್ಳುವುದರಿಂದ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳು ಆತಂಕದ ಸ್ಥಿತಿಯಾಗಿದೆ. ಪ್ರತಿಕೂಲ ನೆರೆಹೊರೆಯವರಲ್ಲದೆ, ಜಮ್ಮು ಮತ್ತು ಕಾಶ್ಮೀರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಭಾರತವು ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ. ಈ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಸೇನೆ ಹೊಂದಿದೆ.
ರಾಜ್ಯಸಭಾ ಸಂಸದ ರಾಕೇಶ್ ಸಿನ್ಹಾ ಅವರಿಗೆ ಲಿಖಿತ ಉತ್ತರವನ್ನು ನೀಡಿರುವ ರಾಜನಾಥ್ ಸಿಂಗ್ ಅವರು, ಸೇನಾ ಖಾಲಿ ಹುದ್ದೆಗಳ ಬಗೆಗಿನ ಕಳವಳವನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ. ” ಸಶಸ್ತ್ರ ಪಡೆಗಳಲ್ಲಿ ನೇಮಕಾತಿ ನಿರಂತರ ಪ್ರಕ್ರಿಯೆ ಮತ್ತು ಕಾಲಕಾಲಕ್ಕೆ ಹುದ್ದೆಗಳ ಹೆಚ್ಚಳವಾಗುವುದು ಮುಂತಾದ ವಿವಿಧ ಕಾರಣಗಳಿಂದ ಖಾಲಿ ಹುದ್ದೆಗಳು ಹುಟ್ಟುತ್ತವೆ, ಕಠಿಣ ಆಯ್ಕೆ ಕಾರ್ಯವಿಧಾನಗಳು, ಕಷ್ಟಕರವಾದ ಸೇವಾ ಪರಿಸ್ಥಿತಿಗಳು ಮತ್ತು ಸೇವಾ ವೃತ್ತಿಜೀವನದಲ್ಲಿ ಹೆಚ್ಚಿನ ಮಟ್ಟದ ಅಪಾಯಗಳು ಇದಕ್ಕೆ ಕಾರಣವಾಗುತ್ತದೆ. ತರಬೇತಿಯ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ತರಬೇತಿ ನೀಡಬಹುದಾದ ಮಿತಿಯೂ ಕೂಡ ಸೇನೆಯಲ್ಲಿನ ಖಾಲಿ ಹುದ್ದೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ” ಎಂದಿದ್ದಾರೆ.
ತರಬೇತಿಯನ್ನು ಪೂರ್ಣಗೊಳಿಸಿದವರನ್ನು ನೇಮಕಾತಿ ಮಾಡುವ ಮೂಲಕ ಸೇನೆಯಲ್ಲಿನ ಖಾಲಿ ಹುದ್ದೆಗಳನ್ನು ಹಂತಹಂತವಾಗಿ ತುಂಬಲಾಗುತ್ತದೆ ಎಂದು ಸಿಂಗ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.