ಇಟನಗರ್: ಭಾರತೀಯ ಸೇನೆಯ ಮಹಿಳಾ ವೈದ್ಯಾಧಿಕಾರಿಯೊಬ್ಬರು ಅರುಣಾಚಲ ಪ್ರದೇಶದ ಹಿಮಾಲಯದ ತುದಿಯಲ್ಲಿನ ವಾಸ್ತವ ಗಡಿ ರೇಖೆಯ ಸಮೀಪ ನಿಯೋಜನೆಗೊಂಡಿರುವ ಸೈನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಅತ್ಯಂತ ಕಠಿಣ ಭೂಪ್ರದೇಶದಲ್ಲಿ ಸಂಚರಿಸಿದ್ದಾರೆ. ವೈದ್ಯರ ತಂಡದ ನೇತೃತ್ವವನ್ನು ವಹಿಸಿರುವ ಅವರು, ಸೈನಿಕರಿಗೆ ಬೇಕಾದ ಅಗತ್ಯ ಸೇವೆಯನ್ನು ಒದಗಿಸಿದ್ದಾರೆ.
ಭಾರತೀಯ ಸೇನೆಯ ಈಸ್ಟರ್ ಕಮಾಂಡೋ ಈ ಬಗ್ಗೆ ಟ್ವೀಟ್ ಮಾಡಿದ್ದು, “ಭಾರತೀಯ ಸೇನೆಯ ಯುವ ವೈದ್ಯಕೀಯ ಅಧಿಕಾರಿ ಕ್ಯಾಪ್ಟನ್ ಕಲ್ಪನಾ ಖುಂಡು ಅವರು 20 ಜೂನ್ 2019 ರಂದು ಅರುಣಾಚಲ ಪ್ರದೇಶದ ಪ್ರಬಲ ಹಿಮಾಲಯದಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಕಠಿಣವಾದ ಎತ್ತರ ಪ್ರದೇಶದಲ್ಲಿ ಸಂಚರಿಸಿದರು” ಎಂದಿದೆ.
#WomenInUniform
Capt Kalpana Kundu, Medical Officer of #IndianArmy undertook an arduous high altitude Patrol in the mighty Himalayas in Arunachal Pradesh on 20 June to provide medical cover to her brethren deployed along #LAC #WomenEmpowerment@adgpi @SpokespersonMoD pic.twitter.com/lqLEOUNseD— EasternCommand_IA (@easterncomd) June 22, 2019
ಕ್ಯಾಪ್ಟನ್ ಖುಂಡು ಅವರು ಕಟ್ಟಲೆಗಳನ್ನು ಮುರಿಯುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಭಾರತೀಯ ಸೇನೆಯ ಕಾರ್ಯಪಡೆಯಲ್ಲಿ ಶೇಕಡಾ 3.80 ರಷ್ಟು ಮಾತ್ರ ಇರುವ ಮಹಿಳೆಯರು ಏನನ್ನೂ ಬೇಕಾದರೂ ಸಾಧಿಸಬಲ್ಲರು ಎಂಬುದಕ್ಕೆ ನಿಜವಾದ ಉದಾಹರಣೆ ಎನಿಸಿಕೊಂಡಿದ್ದಾರೆ.
ಎಲ್ಲಾ ತೊಡಕುಗಳನ್ನು ಮುರಿದು, ಜುಲೈ 2017 ರ ವೇಳೆಗಾಗಲೇ ಭಾರತೀಯ ಸೇನೆಯು 1,548 (ವೈದ್ಯಕೀಯ, ದಂತ ಮತ್ತು ನರ್ಸಿಂಗ್ ಹೊರತುಪಡಿಸಿ) ಮಹಿಳಾ ಅಧಿಕಾರಿಗಳನ್ನು ಹೊಂದಿದೆ. 2018 ರಲ್ಲಿ ಸಂಸತ್ತಿನಲ್ಲಿ ರಕ್ಷಣಾ ಸಚಿವಾಲಯ ಒದಗಿಸಿದ ಅಂಕಿ ಅಂಶಗಳ ಪ್ರಕಾರ, 2018ರ ಜನವರಿಯಲ್ಲಿ, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ ಮಹಿಳಾ ಅಧಿಕಾರಿಗಳ ಶಕ್ತಿ 3,730 ಕ್ಕೆ ಏರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.