ರಾಂಚಿ: ಇಂದು ವಿಶ್ವ ಯೋಗ ದಿನ. ಪ್ರಧಾನಿ ನರೇಂದ್ರ ಮೋದಿಯವರು ಝಾರ್ಖಾಂಡಿನ ರಾಂಚಿಯಲ್ಲಿ ನಡೆದ ಬೃಹತ್ ಯೋಗ ಸಮಾರಂಭದ ನೇತೃತ್ವವನ್ನು ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಯೋಗವು ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಎಂದು ಪ್ರತಿಪಾದಿಸಿದರು.
ರಾಂಚಿಯ ಪ್ರಭಾತ್ ತಾರ ಗ್ರೌಂಡ್ನಲ್ಲಿ ಜರುಗಿದ ಈ ಬೃಹತ್ ಯೋಗ ಸಮಾರಂಭದಲ್ಲಿ 30 ಸಾವಿರ ಜನರು ಭಾಗಿಯಾಗಿದ್ದು, ಇವರೊಂದಿಗೆ ಮೋದಿಯವರೂ ಯೋಗವನ್ನು ಮಾಡಿ ಜಗತ್ತಿಗೆ ಯೋಗದ ಮಹತ್ವವನ್ನು ಸಾರಿದರು. ಈ ಬಾರಿ 5ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದೆ.
“ಯೋಗವು ಸದಾ ಕಾಲ ಶಾಂತಿ ಮತ್ತು ಸೌಹಾರ್ದದೊಂದಿಗೆ ಬೆಸೆದುಕೊಂಡಿದೆ. ಯೋಗವನ್ನು ಸ್ವೀಕಾರ ಮಾಡಿದ ಜನರಿಗೆ ನನ್ನ ಧನ್ಯವಾದಗಳು. ಯೋಗವನ್ನು ಅಪ್ಪಿಕೊಳ್ಳಿ ಎಂದು ಜನರಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ” ಎಂದರು.
“ನಮಗೆಲ್ಲರಿಗೂ ಯೋಗದ ಪ್ರಾಮುಖ್ಯತೆಯ ಬಗ್ಗೆ ತಿಳಿದಿದೆ. ಅದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಶವೂ ಆಗಿದೆ, ಆದರೆ ಇಂದು ಯೋಗಾಭ್ಯಾಸ ಉನ್ನತ ಮಟ್ಟವನ್ನು ತಲುಪಿದೆ” ಎಂದರು.
ಯೋಗ ಸಮಾರಂಭಗಳಲ್ಲಿ ಭಾಗಿಯಾಗುತ್ತಿರುವ ವಿಶ್ವದಾದ್ಯಂತದ ಜನರಿಗೆ ಮೋದಿ ಧನ್ಯವಾದಗಳನ್ನು ತಿಳಿಸಿದರು.
“ಯೋಗ ದಿನದ ಸಮಾರಂಭದಲ್ಲಿ ಭಾಗಿಯಾಗುತ್ತಿರುವ ವಿಶ್ವದಾದ್ಯಂತದ ಜನರಿಗೆ ನನ್ನ ಧನ್ಯವಾದಗಳು, ಯೋಗ ನಿರತರು ಇಂದು ಸೂರ್ಯನ ಮೊದಲ ಕಿರಣವನ್ನು ಸ್ವಾಗತಿಸಿದರು, ನಿಜಕ್ಕೂ ಅದು ಸುಂದರ ಸನ್ನಿವೇಶ. ಎಲ್ಲರೂ ಯೋಗವನ್ನು ಅಪ್ಪಿಕೊಳ್ಳಬೇಕು ಮತ್ತು ಅದನ್ನು ತಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ನಾನು ವಿನಂತಿಸಿಕೊಳ್ಳುತ್ತೇನೆ” ಎಂದರು.
“ಯೋಗವು ಜಾತಿ, ಧರ್ಮ, ಪ್ರದೇಶ, ಗಡಿಗಳನ್ನು ಮೀರಿದ್ದು. ಯೋಗದಲ್ಲಿ ಕುಡಿತದ ಚಟಕ್ಕೆ, ಸಕ್ಕರೆ ಕಾಯಿಲೆಗೆ ಮೋಕ್ಷವಿದೆ” ಎಂದರು.
ಯೋಗದ ಬಗ್ಗೆ ಇನ್ನೊಷ್ಟು ಸಂಶೋಧನೆಗಳು ನಡೆದರೆ ಮಾತ್ರ ಅದರ ಪ್ರಯೋಜನಗಳ ಬಗ್ಗೆ ಜಗತ್ತಿಗೆ ಹೆಚ್ಚು ಮನವರಿಕೆಯಾಗುತ್ತದೆ ಎಂದ ಅವರು, ದೇಶದ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ರೋಗಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಯೋಗ ಸಮಾರಂಭದಲ್ಲಿ ಭಾಗಿಯಾದ ಯೋಗಾಸಕ್ತರೊಂದಿಗೆ ಪ್ರಧಾನಿಗಳು ಸಂವಾದವನ್ನು ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.