ನವದೆಹಲಿ: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಪ್ಯಾಲೆಸ್ತೇನಿ ಗ್ರೂಪ್ ಗೆ ವೀಕ್ಷಕ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಬಲುಅಪರೂಪದ ಸನ್ನಿವೇಶವೊಂದರಲ್ಲಿ, ಪ್ಯಾಲೆಸ್ತೇನಿನ ಸರ್ಕಾರೇತರ ಸಂಸ್ಥೆ ‘ಶಹೀದ್’ಗೆ ವೀಕ್ಷಕ ಸ್ಥಾನಮಾನವನ್ನು ನೀಡುವುದರ ವಿರುದ್ಧ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಮತ ಚಲಾವಣೆ ಮಾಡಿದೆ. ಈ ಸಂಸ್ಥೆ ಹಮಸ್ ನೊಂದಿಗಿನ ತನ್ನ ಸಂಬಂಧದ ಬಗ್ಗೆ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ ಎಂದು ಇಸ್ರೇಲ್ ಹೇಳಿದ ಹಿನ್ನಲೆಯಲ್ಲಿ ಭಾರತ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಜೂನ್ 6ರಂದು ಭಾರತ ಪ್ಯಾಲೆಸ್ತೇನ್ ಗುಂಪಿನ ವಿರುದ್ಧ ಮತ ಚಲಾಯಿಸಿತ್ತು, ಅದಾದ ವಾರಗಳ ಬಳಿಕ ಟ್ವಿಟ್ ಮಾಡಿರುವ ನೆತನ್ಯಾಹು, “ವಿಶ್ವಸ್ಥಂಸ್ಥೆಯಲ್ಲಿ ಇಸ್ರೇಲ್ ಪರ ನಿಂತಿದ್ದಕ್ಕೆ ಧನ್ಯವಾದ ನರೇಂದ್ರ ಮೋದಿಯವರೆ, ಧನ್ಯವಾದ ಭಾರತ” ಎಂದಿದ್ದಾರೆ.
ಇಸ್ರೇಲ್ ಪರವಾಗಿ ವಿಶ್ವಸಂಸ್ಥೆಯಲ್ಲಿನ ನಿರ್ಣಯವೊಂದಕ್ಕೆ ಇದೇ ಮೊದಲ ಬಾರಿಗೆ ಭಾರತ ಮತ ಚಲಾಯಿಸಿದೆ.
ಪ್ಯಾಲೆಸ್ತೇನ್ ಸರ್ಕಾರೇತರ ಸಂಸ್ಥೆಯು ವಿಶ್ವಸಂಸ್ಥೆಯಲ್ಲಿ ವೀಕ್ಷಕನಾಗಲು ಮಾಡಿದ ಪ್ರಸ್ತಾವಣೆ 24-14 ಮತಗಳ ಮೂಲಕ ತಿರಸ್ಕೃತಗೊಂಡಿದೆ.
ಶಹೀದ್ ಸಂಘಟನೆಯು ಹೆಝ್ಬೊಲ್ಲಾ ಮತ್ತು ಪ್ಯಾಲೇಸ್ತೇನ್ ಇಸ್ಲಾಮಿಕ್ ಜಿಹಾದ್ ಎಂಬ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಎಂಬುದು ಇಸ್ರೇಲ್ ನ ಬಲವಾದ ಆರೋಪವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.