ವಾಷಿಂಗ್ಟನ್: ಚುನಾವಣೆಯಲ್ಲಿ ಬಿಜೆಪಿ ಬಳಸಿದ್ದ ಜನಪ್ರಿಯ “ಮೋದಿ ಇದ್ದರೆ ಎಲ್ಲವೂ ಸಾಧ್ಯ” ಎಂಬ ಘೋಷವಾಕ್ಯವನ್ನು ಉಚ್ಛರಿಸಿರುವ ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು, ಭಾರತದ ದ್ವಿಪಕ್ಷೀಯ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಉತ್ಸುಕತೆಯನ್ನು ತೋರಿಸಿದ್ದಾರೆ ಮತ್ತು ಮೋದಿ ಮತ್ತು ಟ್ರಂಪ್ ಆಡಳಿತಕ್ಕೆ ಇದನ್ನು ಸಾಕಾರಗೊಳಿಸುವ ‘ವಿಭಿನ್ನ ಅವಕಾಶ’ ಇದೆ ಎಂದಿದ್ದಾರೆ.
ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಆಯೋಜನೆಗೊಳಿಸಿದ್ದ ಇಂಡಿಯಾ ಐಡಿಯಾಸ್ ಸಮಿತ್ನಲ್ಲಿ ಭಾಗವಹಿಸಿದ ಪೊಂಪಿಯೋ ಅವರು “ಮೋದಿಯವರ ಇತ್ತೀಚಿನ ಚುನಾವಣೆಯ “ಮೋದಿ ಹೇ ತೊ ಮುಮ್ಕಿನ್ ಹೈ” ಅಭಿಯಾನದಂತೆ, ನಾನು ಉಭಯ ದೇಶಗಳ ಜನರ ನಡುವೆ ಏನು ಸಾಧ್ಯವೋ ಅದನ್ನು ಮಾಡುವ ನಿಟ್ಟಿನಲ್ಲಿ ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಆಗಮಿಸಲಿರುವ ಪೊಂಪಿಯೋ ಅವರು, ಪ್ರಧಾನಿ ಮೋದಿಯವರೊಂದಿಗೆ ಸಭೆ ನಡೆಸಲಿದ್ದಾರೆ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ. ಮಾತ್ರವಲ್ಲದೇ, ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ದೊಡ್ಡ ಯೋಜನೆ ಮತ್ತು ಅವಕಾಶಗಳ ಪಟ್ಟಿಯನ್ನು ಈಗಾಗಲೇ ಅವರು ತಯಾರಿಸಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ಜನರ ಒಳಿತಿಗಾಗಿ, ಇಂಡೋ-ಪೆಸಿಫಿಕ್ ಪ್ರದೇಶದ ಒಳಿತಿಗಾಗಿ ಭಾರತ ಮತ್ತು ಅಮೆರಿಕಾ ಒಟ್ಟೊಟ್ಟಿಗೆ ಸಾಗಲು ವಿಭಿನ್ನ ಅವಕಾಶಗಳಿವೆ ಎಂಬುದನ್ನು ತಾನು ನಂಬಿರುವುದಾಗಿ ಪೊಂಪಿಯೋ ಹೇಳಿಕೊಂಡಿದ್ದಾರೆ.
ಜೂನ್ 24ರಿಂದ 30ರವರೆಗೆ ಪೊಂಪಿಯೋ ಅವರು, ಭಾರತ, ಶ್ರೀಲಂಕಾ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಅಮೆರಿಕಾದ ಪಾಲುದಾರಿಕೆಯನ್ನು ಉತ್ತೇಜಿಸುವುದು ಅವರ ಈ ಪ್ರವಾಸದ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.