ನವದೆಹಲಿ: ಈ ವರ್ಷ ದಾಖಲೆಯ 2 ಲಕ್ಷ ಭಾರತೀಯ ಮುಸ್ಲಿಂರು ಯಾವುದೇ ಸಬ್ಸಿಡಿ ಇಲ್ಲದೇಯೇ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
21 ನಿರ್ಗಮನ ಸ್ಥಳಗಳಿಂದ 500 ವಿಮಾನಗಳ ಮೂಲಕ 2 ಲಕ್ಷ ಮಂದಿ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.
1.40 ಲಕ್ಷ ಮಂದಿಯು ಹಜ್ ಕಮಿಟಿ ಆಫ್ ಇಂಡಿಯಾ ವತಿಯಿಂದ ಹೋಗಲಿದ್ದಾರೆ, ಉಳಿದ 60 ಸಾವಿರ ಮಂದಿ ಪಿಟಿಓ ಸಹಾಯದಿಂದ ತೆರಳಲಿದ್ದಾರೆ. ಸುಮಾರು 725 ಪಿಟಿಓಗಳು ಸೌದಿ ಅರೇಬಿಯಾಗೆ ಹಜ್ ಯಾತ್ರಾರ್ಥಿಗಳನ್ನು ಕರೆದೊಯ್ಯಲಿದ್ದಾರೆ. ಈ ಪಿಟಿಓಗಳು ಭಾರತೀಯ ಹಜ್ ಕಮಿಟಿ ನಿಗದಿಪಡಿಸಿದಂತೆ ಯಾತ್ರಿಕರಿಂದ ತಲಾ ರೂ.10 ಸಾವಿರವನ್ನು ಪಡೆದುಕೊಳ್ಳಲಿದ್ದಾರೆ.
ಗಂಭೀರ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ವರ್ಷ 3 ಪಿಟಿಓಗಳನ್ನು ಬ್ಲಾಕ್ಲಿಸ್ಟ್ಗೆ ಹಾಕಲಾಗಿದೆ.
ಪುರುಷ ಸಂಗಾತಿ ಇಲ್ಲದೆ ಈ ಬಾರಿ 2,340ಮಂದಿ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳುತ್ತಿರುವುದು ಈ ಬಾರಿಯ ಮತ್ತೊಂದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.