ನವದೆಹಲಿ: 2019-20ರ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರ ಸಜ್ಜಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಬಜೆಟ್ಗೆ ಸಂಬಂಧಿಸಿದ ಸಲಹೆಗಳನ್ನು ಆಹ್ವಾನಿಸಿದೆ. ಜುಲೈ 5ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗೊಳಿಸಲಿದ್ದಾರೆ.
mygov.inಗೆ ಜೂನ್ 20ರೊಳಗೆ ಸಲಹೆಗಳನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ. ಪೋರ್ಟಲ್ ಪ್ರಕಾರ, ಹಣಕಾಸು ಸಚಿವಾಲಯವು ಕಳೆದ ಕೆಲ ವರ್ಷಗಳಿಂದ ಬಜೆಟ್ ಸಲಹೆಗಳನ್ನು ಜನರಿಂದ ಪಡೆದುಕೊಳ್ಳುತ್ತಿದ್ದು, ಈ ಬಾರಿಯೂ ಅದನ್ನು ಮುಂದುವರೆಸಿದೆ. ಈ ಪ್ರಜಾಪ್ರಭುತ್ವದ ಕಾರ್ಯದಲ್ಲಿ ಎಲ್ಲಾ ಜನರೂ ಪಾಲ್ಗೊಳ್ಳಬೇಕು ಎಂದು ಮನವಿಯನ್ನು ಮಾಡಿಕೊಳ್ಳಲಾಗಿದೆ.
Inviting Ideas and Suggestions for Union Budget 2019-2020
In order to make the Union Budget-making process participative and inclusive, the Ministry of Finance has sought inputs from citizens for the last several years. This year too, the Ministry looks forward to hearing from you on your suggestions for the Union Budget which will be presented in the Parliament in the upcoming session.
ಹೊಸದಾಗಿ ಆಯ್ಕೆಯಾಗಿರುವ 17ನೇ ಲೋಕಸಭಾದ ಮೊದಲ ಅಧಿವೇಶನ ಜೂನ್ 17ರಿಂದ ಜುಲೈ 26ರವರೆಗೆ ನಡೆಯಲಿದೆ. 2019-20ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸರ್ಕಾರ ಜುಲೈ 4ರಂದು ಮಂಡನೆಗೊಳಿಸಲಿದೆ, ಬಜೆಟ್ ಅನ್ನು ಜುಲೈ 5ರಂದು ಮಂಡನೆಗೊಳಿಸಲಿದೆ.
ಜನರು ನೀಡುವ ಉತ್ತಮ ಸಲಹೆ ಸೂಚನೆಗಳನ್ನು ಬಜೆಟ್ನಲ್ಲಿ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಉತ್ಸುಹುಕತೆಯನ್ನು ತೋರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.