ನವದೆಹಲಿ: 100 SPICE ಬಾಂಬ್ಗಳನ್ನು ಖರೀದಿ ಮಾಡುವ ಸಲುವಾಗಿ ಭಾರತೀಯ ವಾಯುಸೇನೆಯು ಇಸ್ರೇಲ್ ಸರ್ಕಾರದೊಂದಿಗೆ ರೂ.300 ಕೋಟಿ ಒಪ್ಪಂದವನ್ನು ಮಾಡಿಕೊಂಡಿದೆ. ಈ ಬಾಂಬ್ಗಳು, ಫೆ.26ರ ಬಾಲಾಕೋಟ್ ವೈಮಾನಿಕ ದಾಳಿಯ ವೇಳೆ ಭಾರತ ಬಳಸಿದ್ದ SPICE-2000 ಬಾಂಬ್ಗಳ ಸುಧಾರಿತ ಆವೃತ್ತಿಯಾಗಿದೆ.
ತುರ್ತು ಅಧಿಕಾರದಡಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಈ ಹಿನ್ನಲೆಯಲ್ಲಿ ಇನ್ನು ಮೂರು ತಿಂಗಳುಗಳಲ್ಲಿ ಇಸ್ರೇಲ್ ಸರ್ಕಾರ ಬಾಂಬ್ಗಳನ್ನು ಪೂರೈಕೆ ಮಾಡಲಿದೆ.
SPICE ಅಂದರೆ Smart, Precise Impact, Cost-Effective ಎಂದರ್ಥ, ಇದರ ಸ್ಟ್ಯಾಂಡ್ ಆಫ್ ರೇಂಜ್ 60 ಕಿಲೋಮೀಟರ್. ಆಕಾಶದಿಂದ ಭೂ ಕಾರ್ಯಾಚರಣೆಗಳಿಗೆ ಬಳಸುವ ಶಸ್ತ್ರಾಸ್ತ್ರ ಪರಿವಾರವನ್ನು ಇದು ಬಳಗೊಂಡಿದೆ. 2015 ರಿಂದ ಭಾರತ ಫ್ರೆಂಚ್ ಸುಧಾರಿತ ಫೈಟರ್ ಜೆಟ್, ಮಿರಾಜ್-2000ಗಳಲ್ಲಿ SPICE-2000 ಬಾಂಬ್ ಅನ್ನು ಬಳಕೆ ಮಾಡುತ್ತಿದೆ.
“SPICE-2000 ರಕ್ಷಣಾತ್ಮಕ ಮತ್ತು ಅಂಡರ್ ಗ್ರೌಂಡ್ ಕಮಾಂಡ್ ಸೆಂಟರ್ಗಳ ವಿರುದ್ಧ ಬಳಕೆ ಮಾಡಲು ನಿಖರವಾದ ಮಾರ್ಗದರ್ಶಿ ಬಾಂಬುಗಳನ್ನು ಹೊಂದುವುದು ವಾಯುಸೇನೆಗೆ ಅಗತ್ಯವಾಗಿದೆ. ಈ ಶಸ್ತ್ರಾಸ್ತ್ರವನ್ನು ಈಗಾಗಲೇ ಪರೀಕ್ಷಿಸಲಾಗಿದೆ ಮತ್ತು ಅದರ ಸಾಮರ್ಥ್ಯಗಳನ್ನು ವಾಯುಸೇನೆ ತನ್ನ ಫೈರಿಂಗ್ ವ್ಯಾಪ್ತಿಯಲ್ಲಿ ಮೌಲ್ಯೀಕರಿಸಲಾಗಿದೆ “ಎಂದು ರಕ್ಷಣಾ ಇಲಾಖೆಯ 2015 ತಿಳಿಸಿತ್ತು.
ದ ವೀಕ್ ಪ್ರಕಾರ, ಸ್ಪೈಸ್ ಬಾಂಬು ಕಿಟ್ ಜಡತ್ವ ಸಂಚರಣೆ, ಉಪಗ್ರಹ ಮಾರ್ಗದರ್ಶನ ಮತ್ತು ನಿಖರವಾದ ದೃಷ್ಟಿಗೆ ಸಂಬಂಧಿಸಿದ ಎಲೆಕ್ಟ್ರೋ ಆಪ್ಟಿಕಲ್ ಸಂವೇದಕಗಳನ್ನು ಹೊಂದಿರುತ್ತದೆ. ಅಲ್ಲದೇ, MK-84, APW, RAP-2000 ಮತ್ತು BLU-109 ಸೇರಿದಂತೆ ಯುದ್ಧ ಸಿಡಿತಲೆಗಳಿಗೆ ಹೆಚ್ಚುವರಿ ಕಿಟ್ ಅನ್ನು ಕೂಡಾ ಒಳಗೊಂಡಿರುತ್ತಾರೆ. ಈ ಅತ್ಯಾಧುನಿಕ ಬಾಂಬುಗಳನ್ನು ರೇಡಾರ್ಗಳಿಗೆ ಪತ್ತೆ ಹಚ್ಚುವುದು ಕಷ್ಟ. ಅವುಗಳ ಗಾತ್ರ ಸಣ್ಣದಾದ ಕಾರಣ, ಅವುಗಳನ್ನು ಬಳಸಿ ಸ್ಟ್ಯಾಂಡ್ಆಫ್ ವ್ಯಾಪ್ತಿಯಿಂದ ಗುರಿಗಳನ್ನು ನಾಶಪಡಿಸಬಹುದು. ಅಲ್ಲದೆ, ಭಾರೀ ಮೋಡ ಅಥವಾ ಕೆಟ್ಟ ಹವಾಮಾನವು ಅದರ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.