ನವದೆಹಲಿ: ಒಂದು ವೇಳೆ ಸರ್ಕಾರ ಆರ್ಥಿಕ ಸುಧಾರಣಾ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಡಿಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರವು ಶೇ.7.5 ಅನ್ನು ದಾಟಲು ಸಾಧ್ಯವಿದೆ ಎಂಬುದಾಗಿ ತಮ್ಮ ಹಣಕಾಸು ಸೇವಾ ಕಂಪೆನಿ ನಿರೀಕ್ಷಿಸಿದೆ ಎಂದು ಗೋಲ್ಡ್ಮನ್ ಸ್ಯಾಚ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ಎಂ. ಸೊಲೊಮನ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಅಭೂತಪೂರ್ವವಾದ ಜನಾದೇಶವನ್ನು ಪಡೆದುಕೊಂಡು ಮತ್ತೊಂದು ಅವಧಿಗೆ ಚುನಾಯಿತರಾಗಿ ಬಂದಿದ್ದು ಗೋಲ್ಮನ್ ಸಾಚ್ಸ್ ಹೂಡಿಕೆದಾರರ ಮತ್ತು ಬಂಡವಾಳ ಹಂಚಿಕೆದಾರರ ವಿಶ್ವಾಸವನ್ನು ವೃದ್ಧಿಸಿದೆ ಎಂದಿರುವ ಸೊಲೊಮನ್, ಸುಧಾರಣಾ ಕ್ರಮಗಳು ವೇಗವನ್ನು ಪಡೆದುಕೊಂಡಿದೆ, ಜಿಡಿಪಿ ಬೆಳವಣಿಗೆ ದರದಲ್ಲಿ ಮಹತ್ತರವಾದ ಪ್ರಗತಿಯಾಗಲಿದೆ ಎಂದಿದ್ದಾರೆ.
ಭಾರತಕ್ಕೆ ಮಹತ್ತರವಾದ ಬಂಡವಾಳ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿರುವ ಅವರು, ಈ ನಿಟ್ಟಿನಲ್ಲಿ ನಮ್ಮ ಕಂಪೆನಿಯು ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ.
ಆರ್ಥಿಕತೆ ಮತ್ತು ಸುಧಾರಣೆಗಳಲ್ಲಿ ಡಿಜಿಟಲೀಕರಣವನ್ನು ಮತ್ತಷ್ಟು ಉತ್ತೇಜಿಸುವ ಬಗ್ಗೆ ಒತ್ತಿಹೇಳಿದ ಸೊಲೊಮನ್, ” ಭಾರತದಲ್ಲಿ ಆರ್ಥಿಕತೆಯ ನಿರಂತರ ಡಿಜಿಟಲೀಕರಣದ ಬಗ್ಗೆ ಯೋಚಿಸಿದರೆ, ಅದು ಅನೇಕ ಅವಕಾಶಗಳನ್ನು ಸೃಷ್ಟಿಸಲಿದೆ” ಎಂದು ಹೇಳಿದ್ದಾರೆ.
ಹೊಸ ಸರಕಾರದ ಅಡಿಯಲ್ಲಿ ಸುಧಾರಣಾ ಪ್ರಕ್ರಿಯೆ ಮುಂದುವರಿದರೆ ಅದು ವಿದೇಶಿ ನೇರ ಹೂಡಿಕೆ ಒಳಹರಿವನ್ನು ವೃದ್ಧಿಸಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.