ನವದೆಹಲಿ: ದೇಶದ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿರುವ ರಾಜನಾಥ್ ಸಿಂಗ್ ಅವರು ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಇದು ಅಧಿಕಾರ ವಹಿಸಿಕೊಂಡ ಬಳಿಕದ ಅವರ ಮೊದಲ ರಾಜಧಾನಿಯೇತರ ಭೇಟಿಯಾಗಿದೆ. ಸಿಯಾಚಿನ್ನಲ್ಲಿ ನಿಯೋಜನೆಗೊಂಡಿರುವ ಯೋಧರೊಂದಿಗೆ ಅವರು ಮಾತುಕತೆಯನ್ನು ನಡೆಸಲಿದ್ದಾರೆ.
ಟ್ವಿಟ್ ಮಾಡಿರುವ ರಾಜನಾಥ್ ಸಿಂಗ್ ಅವರು, “ಒಂದು ದಿನದ ಜಮ್ಮು ಕಾಶ್ಮೀರ ಭೇಟಿಗಾಗಿ ಲಡಾಖ್ಗೆ ತೆರಳುತ್ತಿದ್ದೇನೆ. ಸಿಯಾಚಿನ್ನಲ್ಲಿ ನಿಯೋಜನೆಗೊಂಡಿರುವ ಪಡೆಗಳೊಂದಿಗೆ ಸಂವಾದ ನಡೆಸಲು ಎದುರು ನೋಡುತ್ತಿದ್ದೇನೆ. ಬಳಿಕ ಶ್ರೀನಗರದಲ್ಲಿನ ಭಾರತೀಯ ಸೇನಾ ಪಡೆಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಲಿದ್ದೇನೆ” ಎಂದಿದ್ದಾರೆ.
Leaving New Delhi for Ladakh on a day long visit to Jammu and Kashmir. Looking forward to interact with the troops in Siachen.
Later in the day, I would be meeting the Indian Army personnel in Srinagar.
— Rajnath Singh (@rajnathsingh) June 3, 2019
ಸಿಂಗ್ ಅವರಿಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಭೇಟಿಯ ಸಂದರ್ಭ ಸಾಥ್ ನೀಡಲಿದ್ದಾರೆ. ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಎನಿಸಿಕೊಂಡಿರುವ ಸಿಯಾಚಿನ್ ಗ್ಲೇಸಿಯರ್ಗೆ ತೆರಳಿ ಅಲ್ಲಿ ಅವರು ಭದ್ರತಾ ಪರಿಸ್ಥಿತಿಗಳ ಬಗ್ಗೆ ಅವಲೋಕನ ನಡೆಸಲಿದ್ದಾರೆ.
ಭೇಟಿಯ ಸಂದರ್ಭ ಸಿಂಗ್ ಅವರಿಗೆ ವಾಯುಸೇನೆಯೊಂದಿಗೆ ಭೂಸೇನೆಯು ನಡೆಸುತ್ತಿರುವ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಾರ್ದನ್ ಆರ್ಮಿ ಕಮಾಂಡರ್ ಲೆ.ಜನರಲ್ ಸಿಂಗ್, 14 ಕಾರ್ಪ್ಸ್ ಕಮಾಂಡರ್, ಕಾರ್ಗಿಲ್ ವಾರ್ ಹೀರೋ ಲೆ.ಜ. ವೈಕೆ ಜೋಶಿ ಮುಂತಾದವರು ಅವರಿಗೆ ಪ್ರದೇಶದ ಭದ್ರತಾ ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.