ನವದೆಹಲಿ: ಹೆಚ್ಚು ಮೌಲ್ಯದ ಹಣ ವರ್ಗಾವಣೆಯನ್ನು ಇನ್ನಷ್ಟು ಸುಲಲಿತಗೊಳಿಸುವ ಸಲುವಾಗಿ ಆರ್ಬಿಐಯು ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್ (RTGS) ಮೂಲಕ ಗ್ರಾಹಕರ ಹಣ ವರ್ಗಾವಣೆ ಅವಧಿಯನ್ನು ವಿಸ್ತರಣೆಗೊಳಿಸಿದೆ. RTGS ಮೂಲಕ ಇನ್ನು ಮುಂದೆ ಗ್ರಾಹಕರು ಸಂಜೆ 4.30 ರ ವರೆಗೆ ಮಾತ್ರ ಅಲ್ಲ, ರಾತ್ರಿ 6 ಗಂಟೆಯವರೆಗೂ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ.
ಜೂನ್ 1 ರಿಂದಲೇ ಅವಧಿ ವಿಸ್ತರಣೆ ಅನುಷ್ಠಾನಕ್ಕೆ ಬರಲಿದೆ.
RTGS ಆರ್ಬಿಐ ಬೆಂಬಲಿತ ಆನ್ಲೈನ್ ಹಣ ವರ್ಗಾವಣೆ ವ್ಯವಸ್ಥೆಯಾಗಿದೆ. ರಿಯಲ್ ಟೈಮ್ ಆಧಾರಿತದಲ್ಲಿ ಇದು ಹಣ ವರ್ಗಾವಣೆಗೆ ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಯಡಿ ಕನಿಷ್ಠ ಹಣ ವರ್ಗಾವಣೆ ರೂ. 2 ಲಕ್ಷ. ಆದರೆ ಗರಿಷ್ಠ ಮೊತ್ತ ಇಲ್ಲ. 2 ಲಕ್ಷ ರೂಪಾಯಿಯಿಂದ ಹಿಡಿದು ಎಷ್ಟು ಮೌಲ್ಯದ ಹಣವನ್ನಾದರೂ ವರ್ಗಾವಣೆ ಮಾಡಬಹುದಾಗಿದೆ.
ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಈ ವ್ಯವಸ್ಥೆಯಡಿ ಮಾಡಲಾಗುವ ಹಣ ವರ್ಗಾವಣೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಆದರೆ 11 ರಿಂದ 1 ಗಂಟೆಯವರೆಗೆ ಮಾಡಲಾಗುವ ವರ್ಗಾವಣೆ ರೂ. 2 ನ್ನು ಶುಲ್ಕವಾಗಿ ವಿಧಿಸಲಾಗುತ್ತದೆ. 1 ರಿಂದ 6 ಗಂಟೆ ಮಾಡಲಾಗುವ ವರ್ಗಾವಣೆ ರೂ. 5 ನ್ನು ವಿಧಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.