ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು, ಸಂಸದೆಯಾಗಿರುವುದಕ್ಕೆ ಸಿಗುವ ವೇತನವನ್ನು ನಾನು ಬಳಕೆ ಮಾಡುವುದಿಲ್ಲ, ಅದನ್ನು ದೇಶಕ್ಕಾಗಿ ಮತ್ತು ಅಗತ್ಯವಿರುವವರಿಗಾಗಿ ಮಾತ್ರ ವಿನಿಯೋಗಿಸುತ್ತೇನೆ ಎಂದು ಹೇಳಿದ್ದಾರೆ.
ಮಂಗಳವಾರ ಘಾಜಿಯಾಬಾದಿನಲ್ಲಿ ನಡೆದ ಸಾವರ್ಕರ್ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದೆ ಯಾವ ರೀತಿ ನನ್ನ ಜೀವನ ಪಯಣವಿತ್ತೋ ಇನ್ನು ಮುಂದೆಯೂ ಹಾಗೆಯೇ ಇರಲಿದೆ. ಜೀವನ ವಿಧಾನದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಭಿಕ್ಷಾ ರೂಪದಲ್ಲಿ ಸಿಕ್ಕ ಭೋಜನ ಮತ್ತು ವಸ್ತ್ರವನ್ನು ಬಳಕೆ ಮಾಡುತ್ತೇನೆ. ಸಂಸದೆಯಾಗಿರುವುದಕ್ಕೆ ಸಿಗುವ ವೇತನವನ್ನು ನಾನು ಸ್ವಂತಕ್ಕಾಗಿ ಬಳಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್ ದೇವ್ ಹೇಳಿರುವ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ವಿಷಯವನ್ನು ಸಂವಿಧಾನಕ್ಕೆ ಅನುಸಾರವಾಗಿ ಮುಂದೆ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದಿದ್ದಾರೆ.
ಜೈಲಿನಲ್ಲಿ ನನಗೆ ದೊರೆತ ಕಷ್ಟ ದೇಶಕ್ಕೆ ಬಲಿದಾನ ಮಾಡಿದ ವೀರ-ವೀರಾಂಗಣೆಯರು ಅನುಭವಿಸಿದ ಕಷ್ಟಕ್ಕಿಂತ ಕಡಿಮೆಯಾದುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.