ನವದೆಹಲಿ: ಸ್ವಾತಂತ್ರ್ಯ ಪಡೆದ ಬಳಿಕ ಪ್ರಾದೇಶಿಕ ಏಷ್ಯಾ ಶಕ್ತಿಯಾಗಿ ಭಾರತವು ವಿಶ್ವಸಂಸ್ಥೆಗೆ ನೀಡಿದ ಕೊಡುಗೆ ಅತ್ಯಂತ ಮಹತ್ವವಾದುದಾಗಿದೆ. ಕಳೆದ ಒಂದು ದಶಕಗಳಿಂದ ವಿಶ್ವದಾದ್ಯಂತದ ವಿಶ್ವಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಭಾರತ ಸಕ್ರಿಯವಾಗಿ ಭಾಗಿಯಾಗಿದೆ. ಇದೀಗ ಜಗತ್ತು ಭಾರತದ ಕೊಡುಗೆಗೆ ಗೌರವ ಸಲ್ಲಿಸಿದ್ದು, ಯುಎನ್-ಹ್ಯಾಬಿಟೇಟ್ ಅಸೆಂಬ್ಲಿಯ ಎಕ್ಸಿಕ್ಯೂಟಿವ್ ಬೋರ್ಡ್ಗೆ ಭಾರತವನ್ನು ಆಯ್ಕೆ ಮಾಡಿದೆ.
ಈ ಆಯ್ಕೆಯನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ. “ಜಾಗತಿಕವಾಗಿ ನಮ್ಮ ದೇಶದ ಪ್ರಭಾವ ಮಹತ್ವಪೂರ್ಣವಾಗಿ ಮುಂದುವರೆಯುತ್ತಲೇ ಇದೆ. ನೈರೋಬಿಯಲ್ಲಿ ನಡೆದ ಅಸೆಂಬ್ಲಿಯ ಪ್ಲೇನರಿ ಸೆಷನ್ನಲ್ಲಿ ಭಾರತವು ಯುಎನ್ ಹ್ಯಾಬಿಟೇಟ್ ಅಸೆಂಬ್ಲಿಯ ಎಕ್ಸಿಕ್ಯೂಟಿವ್ ಬೋರ್ಡ್ಗೆ ಆಯ್ಕೆಗೊಂಡಿದ್ದು ಹೆಮ್ಮೆಯ ವಿಷಯವಾಗಿದೆ” ಎಂದು ಟ್ವಿಟರ್ನಲ್ಲಿ ತಿಳಿಸಿದೆ.
The nation’s global clout continues to grow significantly.
In an extremely proud development, India has been elected today to the Executive Board of the first UN Habitat Assembly at the Plenary Session of the Assembly being held in Nairobi. pic.twitter.com/4x3EPl5Cr5— MoHUA (@MoHUA_India) May 27, 2019
India was elected as member of the Executive Board of UN-Habitat today during the First Session of the UN-Habitat Assembly in Nairobi. pic.twitter.com/o3vRQIODi9
— India in Kenya (@IndiainKenya) May 27, 2019
ಯುಎನ್ ಹ್ಯಾಬಿಟೇಟ್ ಅಸೆಂಬ್ಲಿಯ ಮೊದಲ ಸೆಷನ್ ಮೇ 27 ರಿಂದ ನೈರೋಬಿಯ ಯುಎನ್ ಹ್ಯಾಬಿಟೇಟ್ ಕೇಂದ್ರ ಕಛೇರಿಯಲ್ಲಿ ಆರಂಭಗೊಂಡಿದ್ದು, ಮೇ 30 ರ ವರೆಗೆ ಮುಂದುವರೆಯಲಿದೆ.
“ನಗರ ಮತ್ತು ಸಮುದಾಯಗಳಲ್ಲಿ ಉತ್ತಮ ಗುಣಮಟ್ಟದ ಜೀವನಕ್ಕಾಗಿ ಆವಿಷ್ಕಾರ” ಎಂಬುದು ಈ ಬಾರಿಯ ಯುಎನ್ ಹ್ಯಾಬಿಟೇಟ್ ಅಸೆಂಬ್ಲಿಯ ವಿಶೇಷ ಥೀಮ್ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.