ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಮಂಗಳೂರು ಶ್ರಮದಾನದ 5ನೇ ಹಂತದ 25ನೇ ವಾರದ ಶ್ರಮದಾನವನ್ನು ದಿನಾಂಕ 26-5-2019 ರಂದು ತಣ್ಣಿರುಬಾವಿ ಕಡಲ ಕಿನಾರೆ ಹಾಗೂ ಅದರ ಸುತ್ತಮುತ್ತ ಹಮ್ಮಿಕೊಳ್ಳಲಾಯಿತು. ಓ.ಎಂ.ಪಿ.ಎಲ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್ ಎಸ್ ನಾಯಕ್ ಹಾಗೂ ನವೀನ್ ಸುವರ್ಣ ಅಧ್ಯಕ್ಷರು, ಯೂಥ್ ಸ್ಪೋಟ್ಸ್ ಕ್ಲಬ್ ತಣ್ಣೀರಬಾವಿ ಇವರುಗಳು ಜಂಟಿಯಾಗಿ ತಣ್ಣೀರುಬಾವಿ ಕಡಲತೀರದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಓ.ಎಂ.ಪಿ.ಎಲ್ ಅಧಿಕಾರಿಗಳಾದ ಪಿ ಪಿ ಚೈನುಲು, ಕೇಶವ ಪಿ, ಮನಪಾ ಸ್ಥಳಿಯ ಸದಸ್ಯ ರಘುವೀರ್, ಸತ್ಯನಾರಾಯಣ್ ಕೆ ವಿ, ಪ್ರಶಾಂತ ಉಬರಂಗಳ, ಮಲ್ಲಿಕಾರ್ಜುನ ಕೋಟಿವಾಲೆ, ಸುರೇಂದ್ರ ನಾಯಕ್, ಶ್ರೀಲತಾ ಯು. ಎ, ಶುಭಕರ ಶೆಟ್ಟಿ, ವೀಣಾ ಮಂಗಳಾ, ಶುಭಾ ಭಟ್, ಕಿರಣ ರೈ, ಪ್ರಶಾಂತ್ ಯಕ್ಕೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಕಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು.
ಮುಖ್ಯ ಅತಿಥಿಯಾಗಿದ್ದ ಎಸ್ ಎಸ್ ನಾಯಕ್ ಮಾತನಾಡಿ ಪ್ರತಿಯೊಬ್ಬರು ಜವಾಬ್ದಾರಿಯನ್ನು ಅರಿತು ಸ್ವಚ್ಛತೆಯನ್ನು ಮೈಗೂಡಿಸಿಕೊಳ್ಳಬೇಕು ಹಾಗಾದಾಗ ಮಾತ್ರ ದೇಶ ಸ್ವಚ್ಛವಾಗುತ್ತದೆ. ಅಂತಹ ಸ್ವಚ್ಛತೆಯನ್ನು ಮೈಗೂಡಿಸಿಕೊಳ್ಳಲು ಇಂತಹ ಶ್ರಮದಾನಗಳು ಅತ್ಯಂತ ಸಹಾಯಕಾರಿ. ನಮ್ಮ ನಮ್ಮ ಪರಿಸರವನ್ನು ನಾವು ಆಗಾಗ ಶ್ರಮದಾನದ ಮೂಲಕ ಶುಚಿಗೊಳಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಜನರು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾದಾಗ ಸ್ವಚ್ಛತೆಯ ಕನಸು ಸಾಕಾರಗೊಳ್ಳುವುದು.’ ಎಂದು ತಿಳಿಸಿದರು. ಮತ್ತೊಬ್ಬ ಅತಿಥಿ ಜಯದೀಪ್ ಘೋಷ್ (ಮುಖ್ಯಸ್ಥರು ಎಚ್.ಆರ್ ಓಎಂಪಿಎಲ್) ಮಾತನಾಡಿ ಶ್ರಮದಾನ ಮಾಡುವುದರಿಂದ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣವಾಗುವುದರ ಜೊತೆಗೆ ಇದು ನನ್ನ ದೇಶ ನನ್ನ ಭೂಮಿ ಎನ್ನುವ ಭಾವ ಜಾಗೃತಿಯಾಗುತ್ತದೆ. ಈ ಭೂಮಿ ನಮ್ಮೆಲ್ಲರಿಗೆ ಸಕಲವನ್ನೂ ಒದಗಿಸಿಕೊಟ್ಟಿದೆ ಆದ್ದರಿಂದ ಇದನ್ನು ರಕ್ಷಿಸುವುದು ನಮ್ಮ ಆದ್ಯಕರ್ತವ್ಯವಾಗಬೇಕು. ಪ್ರಧಾನಿಯವರ ಕನಸಿನಂತೆ ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಶನ್ ಕಾರ್ಯಕರರ್ತರ ಶ್ರಮ ಅದ್ವಿತೀಯವಾದುದು. ಎಂದು ತಿಳಿಸಿ ಶುಭಹಾರೈಸಿದರು.
ಕಡಲಕಿನಾರೆಯ ಸ್ವಚ್ಛತೆ
ಶ್ರಮದಾನಕ್ಕೆ ಚಾಲನೆ ದೊರಕಿದ ಬಳಿಕ ಸುಮಾರು ಇನ್ನೂರೈವತ್ತು ಕಾರ್ಯಕರ್ತರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ನಿರ್ದೇಶನದಂತೆ ಕಡಲಕಿನಾರೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಸ್ವಚ್ಛ ಮಂಗಳೂರು ಪರಿವಾರದ ಹಿರಿಯ ಸದಸ್ಯರಾದ ಮೋಹನ್ ಭಟ್, ವಿಠಲದಾಸ್ ಪ್ರಭು, ಕೋಡಂಗೆ ಬಾಲಕೃಷ್ಣ ನಾಕ್, ಪಿ ಎನ್ ಭಟ್, ಕಮಲಾಕ್ಷ ಪೈ ಇವರುಗಳ ಮಾರ್ಗದರ್ಶನದಲ್ಲಿ ಸಹ್ಯಾದ್ರಿ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಕೆ.ಎಂ.ಸಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿವೃಂದ ಕಡಲತೀರದಲ್ಲಿದ್ದ ಪ್ಲಾಸ್ಟಿಕ್, ಪೇಪರ್ ಹಾಗೂ ಕಸವನ್ನು ತೆಗೆದು ಸ್ವಚ್ಛಗೊಳಿಸಿದರು. ಓಎಂಪಿಎಲ್ ಹಾಗೂ ಎಂಆರ್ಪಿಎಲ್ನಿಂದ ಅನೇಕ ಸಿಬ್ಬಂದಿಗಳು ಸಿ.ಇ.ಓ ಎಸ್ ಎಸ್ ನಾಯಕ್ ನೇತೃತ್ವದಲ್ಲಿ ಬೀಚ್ನಲ್ಲಿದ್ದ ತ್ಯಾಜ್ಯ ರಾಶಿಗಳನ್ನು ತೆಗೆದು ಟಿಪ್ಪರಿಗೆ ತುಂಬಿಸಿ ಸ್ವಚ್ಛಗೊಳಿಸಿದರು. ಶಿವು ಪುತ್ತೂರು, ಪುನೀತ್ ಪೂಜಾರಿ ಹಾಗೂ ಯುವ ಕಾರ್ಯಕರ್ತರು ತ್ಯಾಜ್ಯ ರಾಶಿಯಿಂದ ತುಂಬಿದ್ದ ಮೂರು ಸ್ಥಳಗಳನ್ನು ಹಲವಾರು ಕಾರ್ಯಕರ್ತರೊಂದಿಗೆ ಸೇರಿ ತ್ಯಾಜ್ಯ ತೆರವುಗೊಳಿಸಿ ಶುಚಿ ಮಾಡಿದರು. ಪ್ಲೋರಿಕ್ ಲೋಬೊ ನೇತೃತ್ವದಲ್ಲಿ ರೋಟರಿ ಕ್ಲಬ್ ಸದಸ್ಯರು ಶ್ರಮದಾನದಲ್ಲಿ ಸಹಕರಿಸಿದರು. ಸುಭೋದಯ ಆಳ್ವ ಶ್ರಮದಾನದ ಉಸ್ತುವಾರಿ ವಹಿಸಿದ್ದರು.
5 ಲೋಡ್ಗಳಷ್ಟು ತ್ಯಾಜ್ಯ ತೆರವು
ಒಂದೆಡೆ ಕಡಲ ತೀರದಲ್ಲಿ ಸ್ವಚ್ಛತೆ ನಡೆಯುತ್ತಿದ್ದರೆ ಮತ್ತೊಂದೆಡೆ ಅಭಿಯಾನದ ಪ್ರಮುಖ ದಿಲ್ರಾಜ್ ಆಳ್ವ ನೇತೃತ್ವದಲ್ಲಿ ಬೀಚ್ಗೆ ಬರುವ ಪ್ರಮುಖ ರಸ್ತೆಗಳ ಬದಿಗಳಲ್ಲಿ ಅನೇಕ ದಿನಗಳಿಂದ ಬಿದ್ದುಕೊಂಡಿದ್ದ ತ್ಯಾಜ್ಯ ಸಹಿತ ಕಲ್ಲು ಮಣ್ಣುಗಳ ರಾಶಿಯನ್ನು ಜೆಸಿಬಿ ಸಹಾಯ ಪಡೆದುಕೊಂಡು ಸ್ವಚ್ಛ ಮಾಡಲಾಯಿತು. ಸತೀಶ್ ಕೆಂಕನಾಜೆ, ರವಿ ಕೆ ಆರ್, ವಿಜಯ್ ಶೆಟ್ಟಿ, ವಿಖ್ಯಾತ್ ಮತ್ತಿತರರು ಕಸ ತೆರವು ಮಾಡಲು ನೆರವಾದರು. ಕಡಲತೀರ ಹಾಗೂ ರಸ್ತೆಯ ಬದಿಗಳನ್ನು ಈ ವಾರದ ಶ್ರಮದಾನದಲ್ಲಿ ಸ್ವಚ್ಛಮಾಡಿ ಒಟ್ಟು ಸುಮಾರು ಐದು ಲೋಡ್ಗಳಷ್ಟು ತ್ಯಾಜ್ಯವನ್ನು ಹೆಕ್ಕಿ ತೆಗೆದು ಟಿಪ್ಪರಿಗೆ ಹಾಕಿ ತಣ್ಣಿರುಬಾವಿ ಪರಿಸರವನ್ನು ಶುದ್ಧಗೊಳಿಸಲಾಯಿತು.
ಲಾರಿ ಚಾಲಕರಿಗೆ ವಿಶೇಷ ಜಾಗೃತಿ ಕಾರ್ಯಕ್ರಮ
ರಾಮಕೃಷ್ಣ ಮಿಶನ್ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಹಯೋಗದಲ್ಲಿ ಲಾರಿ ಚಾಲಕ ಮತ್ತು ನಿರ್ವಾಹಕರಿಗಾಗಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಸಲುವಾಗಿ 25-5-2019 ರಂದು ವಿಶೇಷ ಕಾರ್ಯಕ್ರಮವನ್ನು ಐ.ಒ.ಸಿ.ಎಲ್ ಟರ್ಮಿನಲ್ನಲ್ಲಿ ಹಮ್ಮಿಕೊಳ್ಳಲಾಯಿತು. ಉಪಮಹಾಪ್ರಭಂದಕ ಅಜಯ ಸಿಂಗ್, ಆನಿಟ್ ಮೋಂಟೆರಿಯೊ, ವೀರಾ ಸಿಕ್ವೇರಾ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸ್ವಚ್ಛತಾ ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಸಾಮುದಾಯಿಕ ಸ್ವಚ್ಛತೆ ಹಾಗೂ ವೈಯಕ್ತಿಕ ಸ್ವಚ್ಛತೆ ಎಂಬ ವಿಷಯದ ಕುರಿತು ಮಾತನಾಡಿದರು ಹಾಗೂ ಸುರೇಶ್ ಶೆಟ್ಟಿ ಇವರು ರಾಷ್ಟ್ರ ನಿರ್ಮಾಣದಲ್ಲಿ ವ್ಯಕ್ತಿಯ ಪಾತ್ರ ಹಾಗೂ ಕರ್ತವ್ಯಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು. ಸಭಾ ಕಾರ್ಯಕ್ರಮದ ಬಳಿಕ ಲಾರಿ ಚಾಲಕರು ಹಾಗೂ ನಿರ್ವಾಹಕರಿಂದ ಸುಮಾರು ಒಂದು ಗಂಟೆಗಳ ಕಾಲ ಶ್ರಮದಾನ ಜರುಗಿತು. ಭರತ್ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು. ಈ ಸ್ವಚ್ಛತಾ ಅಭಿಯಾನದ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.