ಪಾಟ್ನಾ: ಭಾರತದ ಪ್ರಜಾಪ್ರಭುತ್ವ ಜಾತಿ, ಜನಾಂಗ, ಶಿಕ್ಷಣ, ಸಿರಿತನ, ದೈಹಿಕ ಆರೋಗ್ಯ ಇದಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕನ್ನು ಕಲ್ಪಿಸುತ್ತದೆ. ಭಾನುವಾರ ಪಾಟ್ನಾದಲ್ಲಿ ಸಯಾಮಿ ಸಹೋದರಿಯರಾದ ಸಬಾ ಮತ್ತು ಫರಾ ತಮ್ಮ ಮತದಾನದ ಹಕ್ಕನ್ನು ಪ್ರತ್ಯೇಕವಾಗಿ ಚಲಾಯಿಸಿದರು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ತಲೆ ಪರಸ್ಪರ ಜೋಡಿಸಲ್ಪಟ್ಟ ಸಯಾಮಿ ಸಹೋದರಿಯರು ಲೋಕಸಭಾ ಚುನಾವಣೆಗೆ ಪ್ರತ್ಯೇಕ ಮತ ಹಾಕಿರುವುದು ಇದೇ ಮೊದಲು, ಇದು ನಿಜಕ್ಕೂ ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬವಾಗಿದೆ.
ಪಾಟ್ನಾದ ಸಮನ್ಪುರದವರಾದ ಸಬಾ ಶಕೀಲ್ ಮತ್ತು ಫರಾ ಶಕೀಲ್ ತಲೆ ಪರಸ್ಪರ ಜೋಡಿಸಲ್ಪಟ್ಟಿದೆ. ಪ್ರತ್ಯೇಕವಾಗಲು ಇವರು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ, ಆದರೆ ಅದು ಸಾಧ್ಯವಾಗಿಲ್ಲ. ಕೊನೆಗೆ ಇವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ, 18 ವರ್ಷದವರೆಗೆ ಇವರನ್ನು ಪ್ರತ್ಯೇಕಿಸುವುದು ಬೇಡ ಎಂದು ಹೇಳಿತ್ತು, ಅಲ್ಲದೇ ಇವರಿಗೆ ಮಾಸಿಕ 5 ಸಾವಿರ ರೂ ನೀಡುವಂತೆ ಬಿಹಾರ ಸರ್ಕಾರಕ್ಕೆ ಆದೇಶ ನೀಡಿತ್ತು.
A victory for democracy!
Saba & Farah, the conjoined sisters of #Patna cast their vote as separate individuals with independent voting rights for the first time.#GotInked #GoVote #LokSabhaElections2019 #Phase7 pic.twitter.com/gTYF66jr0K— Election Commission #DeshKaMahatyohar (@ECISVEEP) May 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.