ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೇದಾರನಾಥ ದೇಗುಲಕ್ಕೆ ತೆರಳುವ ಮೂಲಕ ತಮ್ಮ ಎರಡು ದಿನಗಳ ಉತ್ತರಾಖಂಡ ಪ್ರವಾಸವನ್ನು ಆರಂಭಿಸಿದ್ದಾರೆ. ನಾಳೆ ಅವರು ಬದ್ರೀನಾಥಕ್ಕೆ ತೆರಳಲಿದ್ದಾರೆ.
ಮೋದಿ ಅವರ ಆಗಮನದ ಹಿನ್ನಲೆಯಲ್ಲಿ ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ದೇಗುಲ ಪರಿಸರದಲ್ಲಿ ಮೋದಿ ಆಗಮನದ ಹಿನ್ನಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿದೆ.
ಹಿಮಾಲಯದಲ್ಲಿರುವ ಕೇದಾರನಾಥಕ್ಕೆ ಹಲವಾರು ಬಾರಿ ಮೋದಿ ಭೇಟಿಯನ್ನು ನೀಡಿದ್ದಾರೆ. ಕಳೆದ ನವೆಂಬರ್ನಲ್ಲಿ ದೀಪಾವಳಿಯ ಸಂದರ್ಭದಲ್ಲಿ ಮೋದಿ ಅಲ್ಲಿಗೆ ತೆರಳಿದ್ದರು. 2017ರಲ್ಲಿ ಎರಡು ಬಾರಿ ತೆರಳಿದ್ದರು. ಈ ಕ್ಷೇತ್ರ ಮೋದಿಯವರ ಭಕ್ತಿಯ ಶ್ರದ್ಧಾ ಕೇಂದ್ರ ಎನಿಸಿಕೊಂಡಿದೆ.
ಸುಮಾರು ಎರಡು ತಿಂಗಳುಗಳ ಕಾಲ ಲೋಕಸಭಾ ಚುನಾವಣೆಗಾಗಿ ಸಕ್ರಿಯ ಪ್ರಚಾರ ಸಮಾವೇಶಗಳನ್ನು ನಡೆಸಿದ್ದ ಮೋದಿಯವರು ಈಗ ತುಸು ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಹೀಗಾಗಿ ಹಿಮಾಲಯ ರಾಜ್ಯಕ್ಕೆ ತೆರಳಿ ದೇವರ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ.
ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ ಕೆಲ ಕಾಲ ಧ್ಯಾನಸ್ಥರಾಗಿದ್ದು, ಬಳಿಕ ವಿಶೇಷ ಪೂಜೆ ಸಲ್ಲಿಸಿದರು ಎನ್ನಲಾಗಿದೆ. ನಾಳೆ ಬದರಿನಾಥಕ್ಕೆ ತೆರಳಿ ಅಲ್ಲಿ ಕೂಡಾ ವಿಶೇಷ ಪೂಜೆಯನ್ನು ಸಲ್ಲಿಸಲಿದ್ದಾರೆ ಎಂದು ವರದಿ ತಿಳಿಸಿದೆ.
Prime Minister Narendra Modi offers prayers at Kedarnath temple. #Uttarakhand pic.twitter.com/uIm1TGLMEK
— ANI (@ANI) May 18, 2019
Visuals of Prime Minister Narendra Modi offering prayers at Kedarnath temple. #Uttarakhand pic.twitter.com/9dtnL0rX6I
— ANI (@ANI) May 18, 2019
ದೇಗುಲ ಭೇಟಿ ಬಳಿಕ, ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕೇದಾರನಾಥ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪ್ರಧಾನಿ ಮೋದಿ ಪರಿಶೀಲಿಸಿದರು.
Prime Minister Narendra Modi reviews redevelopment projects in Kedarnath. #Uttarakhand pic.twitter.com/Jh0m5DwiKM
— ANI (@ANI) May 18, 2019
ನಾಳೆ ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ನಿನ್ನೆ ಬಹಿರಂಗ ಪ್ರಚಾರ ಕಾರ್ಯ ಸ್ಥಗಿತಗೊಂಡಿದೆ. 59 ಲೋಕಸಭಾ ಕ್ಷೇತ್ರಗಳು ನಾಳೆ ಚುನಾವಣೆ ಎದುರಿಸಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.