ಮುಂಬಯಿ: ಮಧ್ಯಮ ಶ್ರೇಣಿಯ ಸರ್ಫೇಸ್ ಟು ಏರ್ ಮಿಸೈಲ್ (MRSAM)ನ ಮೊದಲ ಪ್ರಾಯೋಗಿಕ ಫೈರಿಂಗ್ ಅನ್ನು ಯಶಸ್ವಿಯಾಗಿ ಮಾಡುವ ಮೂಲಕ ಆ್ಯಂಟಿ ಏರ್ ವಾರ್ಫೇರ್ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ.
ಭಾರತೀಯ ನೌಕಾಪಡೆಯ ಪತ್ರಿಕಾ ಪ್ರಕಟನೆಯ ಪ್ರಕಾರ, ”ವೆಸ್ಟರ್ನ್ ಸೀಬೋರ್ಡ್ನಲ್ಲಿ ಭಾರತೀಯ ನೌಕಾಪಡೆಗಳಾದ ಕೊಚ್ಚಿ ಮತ್ತು ಚೆನ್ನೈ ಮೂಲಕ ಫೈರಿಂಗ್ ಅನ್ನು ನಡೆಸಲಾಯಿತು. ಎರಡೂ ಹಡಗುಗಳ ಕ್ಷಿಪಣಿಗಳು ವಿಸ್ತೃತ ವ್ಯಾಪ್ತಿಯಲ್ಲಿ ವಿವಿಧ ವೈಮಾನಿಕ ಗುರಿಗಳನ್ನು ಪ್ರತಿಬಂಧಿಸುವ ಒಂದು ಹಡಗಿನಿಂದ ನಿಯಂತ್ರಿಸಲ್ಪಟ್ಟಿವೆ”.
ಈ ಪ್ರಾಯೋಗಿಕ ಫೈರಿಂಗ್ ಅನ್ನು ಭಾರತೀಯ ನೌಕಾಸೇನೆ, ಡಿಆರ್ಡಿಓ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಗಳು ಜಂಟಿಯಾಗಿ ನಡೆಸಿದೆ. ಈ ಮೂರು ಸಂಸ್ಥೆಗಳ ಅವಿರತ ಪ್ರಯತ್ನದಿಂದಾಗಿ ಪ್ರಾಯೋಗಿಕ ಫೈರಿಂಗ್ ಯಶಸ್ವಿಯಾಗಿ ನಡೆದಿದೆ.
ಡಿಆರ್ಎಲ್ಡಿ ಹೈದರಾಬಾದ್, ಡಿಆರ್ಡಿಓ ಲ್ಯಾಬ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಸಹಯೋಗದೊಂದಿಗೆ ಈ ಕ್ಷಿಪಣಿಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ.
MRSAM ಅನ್ನು ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಇಂಡಿಯಾ ನಿರ್ಮಾಣ ಮಾಡಿದೆ.
ಈ ಸರ್ಫೇಸ್ ಟು ಏರ್ ಮಿಸೈಲ್ ಅನ್ನು ಕೋಲ್ಕತಾ ಕ್ಲಾಸ್ ಡೆಸ್ಟ್ರಾಯರ್ಗಳ ಮೇಲೆ ಅಳವಡಿಸಲಾಗಿದೆ ಮತ್ತು ಭಾರತೀಯ ನೌಕಾಪಡೆಯ ಭವಿಷ್ಯದ ಎಲ್ಲಾ ಪ್ರಮುಖ ಯುದ್ಧನೌಕೆಗಳನ್ನೂ ಅಳವಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.