ಚಂದೌಲಿ: ಕೊನೆಯ ಹಂತದ ಚುನಾವಣೆಗಾಗಿ ಉತ್ತರಪ್ರದೇಶದ ಚಂದೌಲಿಯಲ್ಲಿ ಪ್ರಚಾರ ಸಮಾವೇಶವನ್ನು ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಈ ಚುನಾವಣೆಯಲ್ಲಿ ಬಿಜೆಪಿ ವಿಜಯಿಯಾಗಿ ಹೊರಹೊಮ್ಮಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುತ್ತಿದೆ ಎಂದಿದ್ದಾರೆ.
ಬಿಜೆಪಿ ಪಕ್ಷಕ್ಕೆ ಬಹುಮತ ನೀಡುವುದನ್ನು ಈಗಾಗಲೇ ಮತದಾರರು ಖಚಿತಪಡಿಸಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಅವರು, ಕನಿಷ್ಠ ಸ್ಥಾನಗಳನ್ನು ಹೊಂದಿರುವವರು ಕೂಡ ಪ್ರಧಾನ ಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ.
“8 ಸ್ಥಾನ, 10 ಸ್ಥಾನ, 20-22 ಸ್ಥಾನ, 30-35 ಸ್ಥಾನ ಪಡೆಯುವವರೆಲ್ಲಾ ಪ್ರಧಾನಿಗಳಾಗುವ ಕನಸು ಕಾಣುತ್ತಿದ್ದಾರೆ. ಆದರೆ ದೇಶ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುತ್ತಿದೆ ಎಂದಿದ್ದಾರೆ.
ಬಿಜೆಪಿ ಮಾತ್ರ ತಮ್ಮ ಕನಸುಗಳನ್ನು ಈಡೇರಿಸಬಲ್ಲದು ಎಂಬುದನ್ನು ದೇಶದ ಯುವ ಮತದಾರರು ಅರ್ಥ ಮಾಡಿಕೊಂಡಿದ್ದಾರೆ. ಬಡವರೂ ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಇವರು ದೇಶವನ್ನು ಮತ್ತೆ 2014ಕ್ಕಿಂತ ಮುಂಚಿನ ಸ್ಥಿತಿಗೆ ದೂಡಲು ಬಯಸುವುದಿಲ್ಲ. 2014ಕ್ಕಿಂತ ಮೊದಲು ಜನರು ಸುದ್ದಿ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ವಿಷಯಗಳನ್ನೇ ಹೆಚ್ಚು ಓದುತ್ತಿದ್ದರು, ಹಣದುಬ್ಬರ ಉತ್ತುಂಗದಲ್ಲಿತ್ತು, ಭಯೋತ್ಪಾದನಾ ಕೃತ್ಯಗಳು ಪದೇ ಪದೇ ನಡೆಯುತ್ತಿತ್ತು ಎಂದಿದ್ದಾರೆ.
ಅಂತಹ ಪರಿಸ್ಥಿತಿಯಿಂದ ಹೊರ ಬರಲೆಂದೇ ದೇಶದ ಜನ ನಮ್ಮನ್ನು ಆಯ್ಕೆ ಮಾಡಿಕೊಂಡರು. ಆದರೆ ಮತ್ತೆ ಆ ಸಮಯಕ್ಕೆ ಹೋಗಲು ಅವರು ಬಯಸಲಾರರು. ಸ್ಥಿರ ಮತ್ತು ದೃಢ ಸರ್ಕಾರಕ್ಕಾಗಿ ಉತ್ತರಪ್ರದೇಶದ ಚಂದೌಲಿ ಜನತೆ ಬಿಜೆಪಿ ಮತ ನೀಡಲಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.