ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರವು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ. ಸಾರ್ವಜನಿಕ ಸಾರಿಗೆ, ಹೆದ್ದಾರಿ ನಿರ್ಮಾಣ, ರೈಲ್ವೆ, ಜಲ ಸಾರಿಗೆ ಮತ್ತು ವಾಯು ಸಂಪರ್ಕದಲ್ಲಿ ಗಮನಾರ್ಹ ಹೂಡಿಕೆಯನ್ನು ಕೇಂದ್ರ ಮಾಡಿದೆ. ಆರಂಭಿಕ ವರ್ಷಗಳಲ್ಲಿ ಸರ್ಕಾರವ್ಯು ಕಚ್ಛಾ ತೈಲ ಬೆಲೆ ಇಳಿಕೆಯಿಂದ ಪಡೆದುಕೊಂಡ ತೈಲ ಕೊಡುಗೆಗಳು ದೊಡ್ಡ ಮಟ್ಟದ ಸಾರ್ವಜನಿಕ ಮೂಲಸೌಕರ್ಯಗಳ ಹೂಡಿಕೆಯನ್ನು ಬೆಂಬಲಿಸಿತು. ಯುಪಿಎ ಸರ್ಕಾರದ ಅವಧಿಯಲ್ಲಿ ರಸ್ತೆ ವಲಯಗಳಲ್ಲಿ ಅತ್ಯಂತ ಕಡಿಮೆ ಬಂಡವಾಳ ಹೂಡಿಕೆ ಮಾಡಲಾಗಿದೆ. MGNREGAದಂತಹ ಹಲವಾರು ಯೋಜನೆಗಳು ಆ ಸರ್ಕಾರವನ್ನು ಮೂಲಭೂತ ಸೌಕರ್ಯ ವಲಯದಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡದಂತೆ ನಿರ್ಬಂಧಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ ರಸ್ತೆ ಅಭಿವೃದ್ಧಿಗೆ ಉತ್ತೇಜನವನ್ನು ನೀಡಿದ ಕೊನೆಯ ಸರ್ಕಾರ. ಬಳಿಕ 10 ವರ್ಷದಲ್ಲಿ ಈ ವಲಯದಲ್ಲಿ ಮಹತ್ವದ ಬೆಳವಣಿಗೆ ನಡೆಯಲೇ ಇಲ್ಲ. ಎರಡು ದೊಡ್ಡ ಮೂಲಸೌಕರ್ಯ ಯೋಜನೆಗಳಾದ- ಗೋಲ್ಡನ್ ಕ್ವಾಡ್ರಿಲ್ಯಾಟರಲ್ ನೆಟ್ವರ್ಕ್ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ (PMGSY)ಗಳು ಅಟಲ್ ಅವರ ಅವಧಿಯಲ್ಲಿ ಆರಂಭಗೊಂಡಿತ್ತು.
ಮೋದಿ ನೇತೃತ್ವದ NDA ಸರ್ಕಾರ ಕೂಡ ವಾಜಪೇಯಿ ನೇತೃತ್ವದ NDA ಸರ್ಕಾರದಂತೆ ಮೂಲಭೂತ ಸೌಕರ್ಯಗಳ ಮೇಲಿನ ವ್ಯಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ನಾಲ್ಕೂವರೆ ವರ್ಷಗಳು ಪೂರೈಸುತ್ತಿದ್ದಂತೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಯ ಕ್ಷೇತ್ರದಲ್ಲಿ ಅಗಾಧ ಯಶಸ್ಸನ್ನು ಗಳಿಸಿದೆ. 33,361 ಕಿಮೀ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವನ್ನು ಪ್ರಧಾನಿ ಮೋದಿಯ ನೇತೃತ್ವದಲ್ಲಿ ಸಾಧಿಸಲಾಗುತ್ತಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಭಾರತ್ಮಾಲಾ ಯೋಜನೆಯಡಿ ಹೆದ್ದಾರಿಗಳ ನಿರ್ಮಾಣವನ್ನು ವೇಗಗೊಳಿಸಲು ತಂತ್ರದಲ್ಲಿ ಬದಲಾವಣೆಯನ್ನು ತರಲು ನಿರ್ಧರಿಸಿದೆ. ಕನಿಷ್ಠ ಭೂ ಸ್ವಾಧೀನದ ಅಗತ್ಯವನ್ನು ಹೊಂದಿರುವ ಯೋಜನೆಯನ್ನು ಮಾತ್ರ ಇದು ಪರಿಗಣನೆಗೆ ತೆಗದುಕೊಳ್ಳಲಿದೆ
“ಕಡಿಮೆ ಭೂಮಿಯ ಅವಶ್ಯಕತೆ ಇರುವ ಯೋಜನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಉತ್ತಮ ಪರಿಹಾರವನ್ನು ನೀಡಲು ಸಹಾಯ ಆಗುತ್ತದೆ. ಹಣಕಾಸು ಕಾರ್ಯಸಾಧ್ಯತೆ ಇರುವ ಯೋಜನೆಗಳನ್ನು ಪರಿಗಣಿಸಲಾಗುತ್ತದೆ” ಎಂದು ಹಿರಿಯ ಎನ್ಎಚ್ಎಐ ಅಧಿಕಾರಿ ತಿಳಿಸಿದ್ದಾರೆ. ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿ ಕಾಯಿದೆ 2013 (LARR) ರ ಅಡಿಯಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕ ದರದ ಹಕ್ಕುಗಳ ಕಾರಣ ಭೂಮಿ ವೆಚ್ಚ ಏರಿದೆ. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಭೂಮಾಲೀಕರ ಮತಗಳನ್ನು ಪಡೆಯುವ ಆಸೆಯಿಂದ ಯುಪಿಎ ಸರಕಾರ ಈ ಕಾಯ್ದೆಯನ್ನು ಜಾರಿಗೆ ತಂದಿತು. ಆದರೂ, ಇದು ರಸ್ತೆ ನಿರ್ಮಾಣದ ಪ್ರಕ್ರಿಯೆಯನ್ನು ನಿಧಾನಗೊಳಿಸಿತು ಮತ್ತು ಈಗ ಇದೇ ಕಾರಣದಿಂದಾಗಿ NHAI ಭೂ ಸ್ವಾಧೀನದಲ್ಲಿ ಸಮಸ್ಯೆಯನ್ನು ಎದುರಿಸುತ್ತಿದೆ, ವೆಚ್ಚವು ಶೇ.30-40 ರಷ್ಟು ಹೆಚ್ಚಾಗಿದೆ.
ಭಾರತ್ಮಾಲಾ ಯೋಜನೆ ಅಡಿಯಲ್ಲಿ, ಭೂ ಸ್ವಾಧೀನ ಮತ್ತು ಯೋಜನೆಯ ಅನುಮೋದನೆಯು 6,500 ಕಿ.ಮೀ ರಸ್ತೆಗಳಿಗೆ ಪೂರ್ಣಗೊಂಡಿದೆ. 2017ರ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾದ ಭಾರತ್ ಮಾಲಾ ಯೋಜನೆಯಡಿ 7 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ರಸ್ತೆ ಸಾರಿಗೆ ಸಚಿವಾಲಯವು ನಿರ್ಧರಿಸಿದೆ. ಈ ಯೋಜನೆಗೆ ಹಣವು ಮಾರುಕಟ್ಟೆ, ಖಾಸಗಿ ಬಂಡವಾಳ, ಕೇಂದ್ರ ರಸ್ತೆ ನಿಧಿ (ಟೋಲ್ ಸಂಗ್ರಹ) ಮತ್ತು ಭಾರತ್ ಮಾಲಾ ಟ್ಯಾಕ್ಸಬಲ್ ಬಾಂಡ್ಗಳಿಂದ ಬರಲಿದೆ. ಭಾರತ್ ಮಾಲಾ ಯೋಜನೆಯಡಿ 65,000 ಕಿ.ಮೀ ಹೆದ್ದಾರಿಯನ್ನು ನಿರ್ಮಿಸಲು ಸಚಿವಾಲಯ ಉದ್ದೇಶಿಸಿದೆ.
ಮೂಲಭೂತ ಸೌಕರ್ಯಗಳ ವಲಯದಲ್ಲಿ ಮೋದಿ ಸರಕಾರದ ಕಾರ್ಯಕ್ಷಮತೆ ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯುತ್ತಮವಾಗಿದೆ. ಇದೀಗ ಮೋದಿ ಸರ್ಕಾರ ಅಧಿಕಾರಕ್ಕೆ ಮರಳಿ ಬರುವ ಸಾಧ್ಯತೆಗಳು ಗೋಚರಿಸುತ್ತಿರುವ ಹಿನ್ನಲೆಯಲ್ಲಿ ಈ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೆಚ್ಚುತ್ತಿದೆ. 2019 ರ ಸಾರ್ವತ್ರಿಕ ಚುನಾವಣೆಯ ನಂತರ ಮೋದಿ ಸರಕಾರ ಅಧಿಕಾರಕ್ಕೆ ಬಂದರೆ ಮೂಲಭೂತ ಸೌಕರ್ಯ ವಲಯದಲ್ಲಿ ಬೃಹತ್ ಬೆಳವಣಿಗೆಯಾಗಬಹುದೆಂದು ಖಾಸಗಿ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಐದು ವರ್ಷಗಳಲ್ಲಿ ರೂ. 144 ಲಕ್ಷ ಕೋಟಿಗಳನ್ನು ಹೂಡಿಕೆ ಮಾಡುವುದಾಗಿ ಬಿಜೆಪಿ ಭರವಸೆಯನ್ನು ನೀಡಿದೆ. ಸರ್ಕಾರದ ವ್ಯಾಪ್ತಿ ಸೀಮಿತವಾಗಿರುವುದರಿಂದ, ಖಾಸಗಿ ವಲಯದವರಿಂದಲೂ ಹಣವನ್ನು ಪಡೆಯಲಾಗುತ್ತದೆ ಮತ್ತು ಇದು ಹಣಕಾಸು ಒದಗಿಸುವವರ ವಿಶ್ವಾಸವನ್ನೂ ಹೆಚ್ಚಿಸುತ್ತದೆ. ಮಾರ್ಚ್ ತ್ರೈಮಾಸಿಕದಲ್ಲಿ, ಮೂಲಸೌಕರ್ಯ ಯೋಜನೆಗಳಿಗೆ ನೀಡಲಾದ ಒಟ್ಟು ಸಾಲ ರೂ.52000 ಕೋಟಿಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದರ ಮೊತ್ತ ಕೇವಲ ರೂ. 14400 ಕೋಟಿ ರೂಪಾಯಿ. ಖಾಸಗಿ ವಲಯದವರು ಮೂಲಸೌಕರ್ಯ ಯೋಜನೆಗಳಿಂದ ಮಿತವಾದ ಲಾಭವನ್ನು ನಿರೀಕ್ಷೆ ಮಾಡುತ್ತಿದ್ದಾರೆ, ಆದರೆ ಸರ್ಕಾರದ ಬೆಂಬಲ ಇರುವುದರಿಂದ ಹಣ ಭದ್ರವಾಗಿದೆ ಎಂಬುದನ್ನು ಅವರು ಅರಿತುಕೊಂಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಎನ್ಡಿಎ ಸರಕಾರಕ್ಕೆ ಮೂಲಸೌಕರ್ಯವು ದೊಡ್ಡ ಮಟ್ಟದ ಆದ್ಯತೆಯಾಗಿತ್ತು. ಇದು ಸಾರ್ವಜನಿಕ ಸಾರಿಗೆ, ಹೆದ್ದಾರಿ ನಿರ್ಮಾಣ, ರೈಲುಮಾರ್ಗಗಳು, ಜಲ ಸಾರಿಗೆ ಮತ್ತು ವಾಯು ಸಂಪರ್ಕದಲ್ಲಿ ಮಹತ್ತರವಾದ ಬಂಡವಾಳವನ್ನು ಹೂಡಿಕೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.