ಸೂರತ್ : 2014ರ ಲೋಕಸಭಾ ಚುನಾವಣೆಯ ವೇಳೆ ಜನರನ್ನು ಬಹುವಾಗಿ ಆಕರ್ಷಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಹೋಲುವ ಸೂರತ್ ಮೂಲದ ಪ್ರಶಾಂತ್ ಸೇತಿ ಎಂಬ ವ್ಯಕ್ತಿ, ಇದೀಗ ರಾಹುಲ್ರಂತೆ ಕಾಣಲು ಇಚ್ಚಿಸದೆ ತಮ್ಮ ಮುಖಲಕ್ಷಣವನ್ನು ಬದಲಾಯಿಸಿಕೊಂಡಿದ್ದಲ್ಲದೇ 20 ಕೆ.ಜಿ. ತೂಕವನ್ನು ಏರಿಸಿಕೊಂಡಿದ್ದಾರೆ.
ಬಿಜೆಪಿ ಬೆಂಬಲಿಗನಾಗಿರುವ 30 ವರ್ಷದ ಪ್ರಶಾಂತ್, ರಾಹುಲ್ ಗಾಂಧಿಯಂತೆ ಕಾಣುವುದು ಇಷ್ಟವಿಲ್ಲದ ಕಾರಣ ತಮ್ಮ ದೇಹವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. 20 ಕೆ.ಜಿ. ತೂಕವನ್ನು ಹೆಚ್ಚಿಸಿಕೊಂಡು, ತಮ್ಮ ಕೇಶ ವಿನ್ಯಾಸವನ್ನು ಬದಲಾಯಿಸಿಕೊಂಡಿದ್ದಾರೆ.
ಪ್ರಶಾಂತ್ಗೆ ಬಾಲಿವುಡ್ನ ಬಹುಬಜೆಟ್ ಸಿನಿಮಾ ’ಪಿಎಂ ನರೇಂದ್ರ ಮೋದಿ’ ಯಲ್ಲಿ ರಾಹುಲ್ ಗಾಂಧಿಯ ಪಾತ್ರಧಾರಿಯಾಗಿ ನಟಿಸಲು ಆಫರ್ ಬಂದಿತ್ತು. ಆದರೆ ರಾಹುಲ್ ಗಾಂಧಿಯಂತೆ ಕಾಣಲು ಇಷ್ಟ ಪಡದೆ ಆಫರ್ ನಿರಾಕರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್, ‘ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕ, ನನಗೆ ಅವರ ಮೇಲೆ ಗೌರವಿದೆ. ಆದರೆ ನಾನು ಬಿಜೆಪಿ ಬೆಂಬಲಿಗ, ನರೇಂದ್ರ ಮೋದಿಯನ್ನು ಬೆಂಬಲಿಸುತ್ತೇನೆ. ಮತ್ತು ರಾಹುಲ್ ಗಾಂಧಿ ಅವರು ತಮ್ಮ ನಿರೀಕ್ಷೇಗಳನ್ನು ಪೂರೈಸುವಲ್ಲಿ ವಿಫಲರಾದ ಕಾರಣ ಅವರೊಂದಿಗೆ ಗುರುತಿಸುಕೊಳ್ಳಲು ಬಯಸುವುದಿಲ್ಲ.’ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.