ಇತ್ತೀಚಿನ ವರ್ಷಗಳಲ್ಲಿ ಕೆಲವು ಹಿಂದೂ ಬರಹಗಾರರು, ಹಿಂದುತ್ವದ ಹೆಸರಿನಲ್ಲಿ ಸಂಪೂರ್ಣ ನಾಸ್ತಿಕತೆಯ ದೃಷ್ಟಿಕೋನವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಅವರ ಚಿಂತನೆಗಳು ಸಂಪೂರ್ಣವಾಗಿ ರಾಧಾಕೃಷ್ಣನ್, ಮಾಕ್ಸ್ ಮುಲ್ಲರ್ ಮೊದಲಾದವರಿಂದ ಪ್ರೇರಿತಗೊಂಡದ್ದಾಗಿದೆ. ಅವರು ಪ್ರಸ್ತುತಪಡಿಸುವ ಶೈಲಿಗಳು ಸಾಧು-ಸಂತರ ಮತ್ತು ಭೂಮಿ ಮೇಲೆ ದೇವರ ಅಸ್ತಿತ್ವದ ಬಗ್ಗೆ ಭಿನ್ನಾಭಿಪ್ರಾಯ ಮೂಡಿಸುವಂತಹುಗಳು. ಅವರ ಬರಹಗಳು ಸಂಪೂರ್ಣ ದೇವ ರಹಿತವಾಗಿವೆ. ಯಾಕೆಂದರೇ ಅವರುಗಳು ದೇವರ ಅಗಾಧ ಶಕ್ತಿ, ಪ್ರೇಮ, ಕರುಣೆ, ಸೌಂದರ್ಯಗಳ ಮೇಲೆ ನಂಬಿಕೆಯನ್ನು ಇಟ್ಟಿಲ್ಲ. ಅವರಿಗೆ ದೇವರು ಕೇವಲ ಆತ್ಮ, ನಿರಾಕಾರ ಸ್ಪೂರ್ತಿ.
ಆದರೆ ಕೆಲವೊಮ್ಮೆ ಇಂತಹ ಬರಹಗಾರರು ಮ್ಯಾಕ್ಸ್ ಮುಲ್ಲರ್ ಮಾಂಸಾಹಾರ ಸೇವನೆಯ ಬಗ್ಗೆ ಹೇಳಿರುವಂತಹ ಅಪಮಾನಕರ ಹೇಳಿಕೆಯನ್ನು ನಿರ್ಲಕ್ಷ ಮಾಡುತ್ತಾರೆ. ಆದರೆ ಅವರ ಉಳಿದಂತಹ ಹಿಂದೂ ನಂಬಿಕೆಗಳ ಬಗೆಗಿನ ಅವಹೇಳನಕಾರಿ ಅಭಿಪ್ರಾಯಗಳನ್ನು ಬಳಸಿಕೊಳ್ಳುತ್ತಾರೆ. ಉದಾಹರಣೆಗೆ, ಮ್ಯಾಕ್ಸ್ ಮುಲ್ಲರ್ ತನ್ನ ಬರಹಗಳಲ್ಲಿ ನಿರಂತರವಾಗಿ ಸರ್ವೋಚ್ಚ ದೇವನೆಂದರೆ ಮಾತು, ಅಂತರಂಗ, ಸರ್ವೋಚ್ಚ ಆತ್ಮ, ಹಿರಿಯ ವ್ಯಕ್ತಿ ಎಂದು ಪ್ರತಿಪಾದಿಸಿದ್ದಾನೆ, ದೇವರ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಖಂಡನೆ ಮಾಡಿದ್ದಾನೆ. ರಾಧಾಕೃಷ್ಣ ಮತ್ತು ಇತರರು ಒಂದು ಹೆಜ್ಜೆ ಮುಂದೆ ಹೋಗಿ ದೇವರನ್ನು ಸ್ಪೂರ್ತಿ(ಬೈಬಲ್ ನಲ್ಲಿ ಉಲ್ಲೇಖಿಸಿರುವಂತೆ) ಎಂದು ಕರೆದಿದ್ದಾರೆ. ಇವರುಗಳು ಭಗವಾನ್ ಶ್ರೀರಾಮ ಮತ್ತು ಶ್ರೀ ಕೃಷ್ಣನ ದೈವತ್ವವನ್ನು ಅಲ್ಲಗೆಳೆದಿದ್ದಾರೆ. ಆದರೆ ಭಗವಾನ್ ಬುದ್ದನನ್ನು ಮತ್ತು ಆತನ ಶೂನ್ಯವಾದವನ್ನು ಪ್ರಶಂಸಿದ್ದಾರೆ.
ಡಾರ್ವಿನ್ ಸೇರಿದಂತೆ ಇತರ ಕೆಲವರು ಪರಿಚಯಿಸಿದ ವಿಕಾಸವಾದವು, ಮಾನವನು ಪ್ರಾಣಿಯ ರೂಪದಿಂದ ವಿಕಸನಗೊಂಡು ಮನುಷ್ಯ ರೂಪಕ್ಕೆ ಬಂದ ಎಂಬುದನ್ನು ವಾದಿಸುತ್ತದೆ. ಹುಳ ಮೀನಾಯಿತು, ಮೀನು ಬಳಿಕ ಕಪ್ಪೆಯಾಯಿತು, ಬಳಿಕ ಸರಿಸೃಪ ಆಯಿತು, ಬಳಿಕ ಡೈನೋಸರ್ ಆಯಿತು, ಬಳಿಕ ಮಂಗ, ಮಂಗ ಬಳಿಕ ಮನುಷ್ಯ ಆದ ಎಂಬುದನ್ನು ಇದು ವಾದಿಸುತ್ತದೆ. ಈ ಅವಾಸ್ತವಿಕ ಮತ್ತು ಅವೈಜ್ಞಾನಿಕ ಥಿಯರಿಯ ಬಗ್ಗೆ ಕಲಂ 44ರಲ್ಲಿ ಚರ್ಚೆ ಮಾಡಲಾಗಿದೆ. ಕೆಲವು ಹಿಂದೂ ಬರಹಗಾರರು ಈ ಅವೈಜ್ಞಾನಿಕ ಥಿಯರಿಯನ್ನು ದೇವರ ಅವತಾರಗಳಿಗೆ ಹೋಲಿಸಿ, ಲಿಂಕ್ ಮಾಡುತ್ತಾರೆ.
ಇದಕ್ಕೆ ಒಂದು ಉದಾಹರಣೆ ಎಂದರೆ, ಯಾವುದೇ ಮನುಷ್ಯರಿಂದ, ಪ್ರಾಣಿಗಳಿಂದ ಸಾವಿಗೀಡಾಗದಂತಹವರವನ್ನು ಪಡೆದುಕೊಂಡಿದ್ದ ರಾಕ್ಷಸ ಹಿರಣ್ಯಕಶಿಪುವನ್ನು ಕೊಂದು, ತನ್ನ ಭಕ್ತನಾದ ಪ್ರಹ್ಲಾದನನ್ನು ರಕ್ಷಣೆ ಮಾಡಲು ಉಗ್ರ ನರಸಿಂಹ ದೇವರು ಅರ್ಧ ಪ್ರಾಣಿ ಮತ್ತು ಅರ್ಧ ಮಾನವನ ಅವತಾರವನ್ನು ತೊಟ್ಟರು. ಅದೇ ರೀತಿ ದೇವರ ವಿವಿಧ ಅವತಾರಗಳಾದ ಮತ್ಸ್ಯಾವತಾರ, ವರಹಾವತಾರ, ಕಚಪ ಅವತಾರಗಳಿಗೆ ಅದರದೇ ಆದ ಆಧ್ಯಾತ್ಮಿಕ ಕಾರಣಗಳಿವೆ. ಇನ್ನು ಕೆಲವು ದೇವರ ಅವತಾರಗಳು ಭಗವಾನ್ ಶ್ರೀರಾಮ, ಶ್ರೀ ಕೃಷ್ಣನಂತಹ ಮಾನವ ರೂಪದಲ್ಲಿ ಇದೆ. ಈ ಅವತಾರಗಳು ದೇವರೆಡೆಗಿನ ನಿಜವಾದ ಪಥವನ್ನು ತೋರಿಸಿಕೊಟ್ಟಿವೆ ಮತ್ತು ಭಕ್ತಿಯನ್ನು ಸ್ಪುರಣಗೊಳಿಸಿವೆ.
ರಾಮ ಮತ್ತು ಕೃಷ್ಣನಿಗೆ ಹೊರತುಪಡಿಸಿದ ಅವತಾರಗಳು ನಿರ್ದಿಷ್ಟ ಆಧ್ಯಾತ್ಮಿಕ ಕಾರಣಗಳನ್ನು ಹೊಂದಿವೆ. ಆದರೆ ಬುದ್ಧನ ಅವತಾರ ಕರುಣೆ ಮತ್ತು ತ್ಯಾಗಗಳ ಕಡೆಗೆ ಹಾದಿಯನ್ನು ತೋರಿಸುತ್ತದೆಯೇ ಹೊರತು ದೇವರೆಡೆಗೆ ಅಲ್ಲ. ಬುದ್ಧನ ತತ್ವಗಳು ದೇವರಹಿತವಾಗಿದೆ. ಆಧ್ಯಾತ್ಮಿಕತೆಯ ಯಾವುದೇ ಅಂಶ ಅದರಲ್ಲಿ ಉಲ್ಲೇಖಿತವಾಗಿಲ್ಲ. ದೇವರ ಅಸ್ತಿತ್ವವನ್ನು ಅದು ಪ್ರತಿಪಾದಿಸುವುದಿಲ್ಲ. ಆತನ ತತ್ವಜ್ಞಾನ ಮನುಷ್ಯನಿಗೆ ಮಾತ್ರ ಸೀಮಿತವಾಗಿದೆ. ಶೂನ್ಯವಾದ ವಾದವನ್ನು ಅದು ಪ್ರತಿಪಾದಿಸುತ್ತದೆ .
ಆಧುನಿಕ ಕಾಲದ ಬರಹಗಾರರು ಅವೈಜ್ಞಾನಿಕ ವಿಕಾಸವಾದದ ಥಿಯರಿಯನ್ನು ದೇವರುಗಳ ದೈವಿಕ ಅವತಾರಗಳಿಗೆ ಹೋಲಿಕೆ ಮಾಡುತ್ತಾರೆ. ಮತ್ತೊಂದೆಡೆ ಶೂನ್ಯವಾದವನ್ನು ಪ್ರತಿಪಾದಿಸಿದ ಬುದ್ಧನನ್ನು ವೈಭವೀಕರಿಸುತ್ತಾರೆ. ಆದರೆ ಶಿವನ ಹೃದಯವನ್ನೇ ಗೆದ್ದ ರಾಮ ಮತ್ತು ಕೃಷ್ಣನ ದೈವಿಕತೆಯನ್ನು ಸಂಪೂರ್ಣ ಕಡೆಗಣಿಸುತ್ತಾರೆ. ಆದರೆ ಕೊನೆಯಲ್ಲಿ ತಾವು ಸನಾತನ ಧರ್ಮದ ಸಂರಕ್ಷಕರು ಎಂದು ಇವರು ಸ್ವಯಂ ಘೋಷಣೆ ಮಾಡುತ್ತಾರೆ.
ಇಂತಹ ಧೋರಣೆಗಳನ್ನು ಧಾರ್ಮಿಕ ಉಲ್ಲಂಘನೆಗಳು ಎಂದು ಕರೆಯಲಾಗುತ್ತದೆ. ಈ ಧೋರಣೆಗಳು ಉಪನಿಷದ್ಗಳ ತತ್ವಗಳನ್ನು ಬುದ್ಧನ ತತ್ವಗಳೊಂದಿಗೆ ಮಿಲಿತಗೊಳಿಸುತ್ತವೆ. ಮೋಕ್ಷದಂತಹ ದೈವೀಕ ಮುಕ್ತಿಯನ್ನು ಶೂನ್ಯವಾದ ಅಥವಾ ನಿರ್ವಾಣದೊಂದಿಗೆ ಸಮಾನಾಂತರಗೊಳಿಸುತ್ತದೆ.
ಈ ಹಿಂದೂ ಬರಹಗಾರರು ಸನಾತನ ಧರ್ಮ ಮತ್ತು ಹಿಂದುತ್ವದ ಹೆಸರಿನಲ್ಲಿ ಹಿಂದೂ ಧರ್ಮವನ್ನು ಅಪಮಾನ ಮಾಡುತ್ತಿದ್ದಾರೆ. ದೇವರು ಸರ್ವೋಚ್ಚ ಆತ್ಮ ಮತ್ತು ಸ್ಪೂರ್ತಿ ಎಂದು ಹೇಳುವ ಮೂಲಕ ದೇವರ ವೈಯಕ್ತಿಕ ಸಂರಚನೆಯ ಶ್ರೇಷ್ಠತೆಯನ್ನು ಕಡೆಗಣಿಸುತ್ತಿದ್ದಾರೆ. ಇವರುಗಳು ವೇದಿಕ ಋಷಿಗಳಿಗೆ, ಸಾಧುಗಳಿಗೆ ಮತ್ತು ಸಂತರಿಗೆ ಸಮರ್ಪಕವಾದ ಗೌರವವನ್ನು ನೀಡುವುದಿಲ್ಲ. ದೈವೀಕತೆಯನ್ನು ಉಸಿರಾಗಿಸಿಕೊಂಡಿರುವ ಆಚಾರ್ಯರ, ಜಗದ್ಗುರುಗಳ ಬೋಧನೆಗಳನ್ನು ಇವರುಗಳು ಸಂಪೂರ್ಣ ನಿರ್ಲಕ್ಷ ಮಾಡುತ್ತಾರೆ. ಭಗವಾನ್ ರಾಮ ಮತ್ತು ಶ್ರೀ ಕೃಷ್ಣರು ಕೇವಲ ಭಾರತದ ದಕ್ಷಿಣ ಭಾಗದಿಂದ ಹಿಡಿದು ಉತ್ತರ ಭಾರತದವರೆಗೂ ಹಿಂದೂ ನಾಗರಿಕತೆಯನ್ನು ವಿಸ್ತರಿಸಿದ ಇತಿಹಾಸದ ನಾಯಕರುಗಳು ಎಂದಷ್ಟೇ ಇವರುಗಳು ಪರಿಗಣಿಸುತ್ತಾರೆ.
ಇದೆಲ್ಲವೂ ಇಂಗ್ಲೀಷ್ ಆಡಳಿತದ ವೇಳೆ ಹಿಂದೂ ಮನಸ್ಸುಗಳನ್ನು ಬೌದ್ಧಿಕ ದಿವಾಳಿತನದೆಡೆಗೆ ಕೊಂಡೊಯ್ದ ಪಾಶ್ಚಿಮಾತ್ಯ ಬರಹಗಾರರ ಪ್ರಭಾವಗಳಿಂದ ಆಗಿರುವ ದುರಂತಗಳು. ಈ ಪಾಶ್ಚಿಮಾತ್ಯ ಬರಹಗಾರರು ಹಿಂದುತ್ವದ ಮುಖವನ್ನು ತಮ್ಮದೇ ಬೌದ್ಧಿಕ ಶೈಲಿಯಲ್ಲಿ ಪ್ರಸ್ತುತಪಡಿಸಲು ಪ್ರಯತ್ನಗಳನ್ನು ನಡೆಸಿದ್ದಾರೆ. ಇಲ್ಲವಾಗಿದ್ದರೆ, ನಿಜವಾದ ಹಿಂದೂ ಆಗಿದ್ದವನು ಭಗವಾನ್ ರಾಮ ಮತ್ತು ಶ್ರೀ ಕೃಷ್ಣ ಶ್ರೇಷ್ಠತೆಯನ್ನು, ಜಗತ್ತನ್ನು ಸೃಷ್ಟಿಸಿದ ಮಹಾವಿಷ್ಣುವಿನ ಅಗಾಧ ದೈವೀಕ ಶಕ್ತಿಯನ್ನು ಕಡೆಗಣಿಸಲು ಸಾಧ್ಯವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.