ನವದೆಹಲಿ : ದಕ್ಷಿಣ ಕೊರಿಯದ ಎಲೆಕ್ಟ್ರಾನಿಕ್ ಉತ್ಪಾದಕ ಸ್ಯಾಮ್ಸಂಗ್ ಭಾರತದಲ್ಲಿ ಸುಮಾರು 2,500 ಕೋಟಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ ಮತ್ತು ಹೊಸದಾಗಿ ಎರಡು ಉತ್ಪಾದನಾ ಘಟಕಗಳನ್ನು ತೆರೆಯಲು ಯೋಜನೆಯನ್ನು ರೂಪಿಸುತ್ತಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಮೊಬೈಲ್ ಫೋನ್ ಡಿಸ್ಪ್ಲೇಗಳಿಗಾಗಿ ಸ್ಯಾಮ್ಸಂಗ್ ಡಿಸ್ಪ್ಲೇ ಕೋ ಮತ್ತು ಬ್ಯಾಟರಿಗಳಿಗಾಗಿ ಸ್ಯಾಮ್ಸಂಗ್ SBI ಇಂಡಿಯಾ ಕಂಪನಿಗಳನ್ನು ಸ್ಥಾಪನೆ ಮಾಡಲು ಸ್ಯಾಮ್ಸಂಗ್ ನಿರ್ಧರಿಸಿದೆ. ಈ ಕಂಪೋನೆಂಟ್ ಕಂಪನಿಗಳು, ಸ್ಯಾಮ್ಸಂಗ್ ಇಂಡಿಯಾ ಮತ್ತು ಇತರ ಸ್ಮಾರ್ಟ್ಫೋನ್ ಉದ್ದಿಮೆದಾರರಿಗೆ ಪ್ರೊಡಕ್ಟ್ ಗಳನ್ನು ಪೂರೈಕೆ ಮಾಡಲಿದೆ.
ಪ್ರಧಾನಿ ನರೇಂದ್ರ ಮೋದಿ ಸರಕಾರವು ಮೇಕ್ ಇನ್ ಇಂಡಿಯಾ ಯೋಜನೆಗೆ ಅತಿ ಹೆಚ್ಚಿನ ಒತ್ತನ್ನು ನೀಡುತ್ತಿರುವ, ಆಮದುಗೊಂಡ ಸ್ಮಾರ್ಟ್ಫೋನ್ ಬಿಡಿ ಭಾಗಗಳಿಗೆ, ಕಂಸ್ಯೂಮರ್ ಎಲೆಕ್ಟ್ರಾನಿಕ್ ಗಳಿಗೆ ತೆರಿಗೆ ದರ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯ ಎಂಬುದನ್ನು ಮನಗಂಡು ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದಾಗಿ ಸ್ಯಾಮ್ಸಂಗ್ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
2018ರಲ್ಲಿ ಸ್ಯಾಮ್ಸಂಗ್ ಸಂಸ್ಥೆಯು 4915 ಕೋಟಿ ರೂಪಾಯಿ ಮೊತ್ತದಲ್ಲಿ ಭಾರತದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕವನ್ನು ಉದ್ಘಾಟನೆಗೊಳಿಸಿದೆ, 2020ರ ವೇಳೆಗೆ ಇದು ಕಾರ್ಯಾರಂಭ ಆರಂಭ ಮಾಡುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.