ನವದೆಹಲಿ: ಪರ್ಯಾಯ ಉತ್ಪಾದನಾ ನೆಲೆಯನ್ನು ಹುಡುಕುತ್ತಿರುವ ಸುಮಾರು 200 ಅಮೆರಿಕನ್ ಕಂಪನಿಗಳು, ಲೋಕಸಭಾ ಚುನಾವಣೆಯ ಬಳಿಕ ಚೀನಾದಿಂದ ಭಾರತಕ್ಕೆ ತಮ್ಮ ಉತ್ಪಾದನಾ ಸೌಲಭ್ಯವನ್ನು ವರ್ಗಾವಣೆ ಮಾಡಲು ಸಜ್ಜಾಗುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಸ್ಟ್ರ್ಯಾಟಜಿಕ್ ಆಂಡ್ ಪಾಟ್ನರ್ಶಿಪ್ ಫೋರಂ(USISPF) ಅಧ್ಯಕ್ಷ ಮುಕೇಶ್ ಅಘಿ ಹೇಳಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
USISPFನೊಂದಿಗೆ ಮಾತುಕತೆಯಲ್ಲಿ ಸುಮಾರು 200 ಕಂಪನಿಗಳು ತೊಡಗಿಕೊಂಡಿದ್ದು, ಚೀನಾಗೆ ಪರ್ಯಾಯವಾಗಿ ಭಾರತದಲ್ಲಿ ಹೂಡಿಕೆ ಮಾಡಲು ಸಹಕಾರ ನೀಡುವಂತೆ ಮನವಿ ಮಾಡುತ್ತಿವೆ. ಭಾರತದಲ್ಲಿ ಮಾರುಕಟ್ಟೆ ಮತ್ತು ದೂರದೃಷ್ಟಿಗೆ ಸಂಬಂಧಿಸಿದಂತೆ ಅದ್ಭುತ ಅವಕಾಶಗಳು ಇವೆ ಎಂಬುದನ್ನು ಈ ಕಂಪನಿಗಳು ಅರ್ಥ ಮಾಡಿಕೊಂಡಿವೆ ಎಂದು ಅಘಿ ಹೇಳಿದ್ದಾರೆ.
ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಸುಧಾರಣೆಗಳನ್ನು ತರಲು USISPF ಹೊಸದಾಗಿ ರಚನೆಯಾಗುವ ಭಾರತದ ಸರ್ಕಾರಕ್ಕೆ ಶಿಪಾರಸ್ಸನ್ನು ಮಾಡುತ್ತದೆ ಎಂದಿದ್ದಾರೆ. ಅಲ್ಲದೇ, ಅಮೆರಿಕಾ ಮತ್ತು ಭಾರತದ ನಡುವಣ ಮುಕ್ತ ವ್ಯಾಪಾರ ಒಪ್ಪಂದವನ್ನು ಅವರು ಬೆಂಬಲಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ USISPF ಸದಸ್ಯ ರಾಷ್ಟ್ರಗಳು ಭಾರತದಲ್ಲಿ 50 ಬಿಲಿಯನ್ ಡಾಲರ್ ಅನ್ನು ಹೂಡಿಕೆ ಮಾಡಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.