ಇತ್ತೀಚಿಗೆ ಯುಪಿಎ ಮುಖ್ಯಸ್ಥೆ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಈ ಚುನಾವಣೆಯನ್ನು ಸಾಮಾನ್ಯ ಚುನಾವಣೆಯಲ್ಲ ಎಂದಿದ್ದರು. ಚುನಾವಣೆಗಳು ಹಲವಾರು ಬಾರಿ ನಡೆಯುತ್ತವೆ. ಆದರೆ ಈ ಚುನಾವಣೆ ಸಾಮಾನ್ಯವಾದುದಲ್ಲ ಎಂದು ಹೇಳಿದ್ದರು. ಈ ಚುನಾವಣೆ ಸಂವಿಧಾನವನ್ನು ನಾಶಪಡಿಸಿದವರು ಆಡಳಿತಕ್ಕೆ ಬರಬೇಕೇ ಅಥವಾ ಸಂವಿಧಾನದ ಘನತೆಯನ್ನು ಉಳಿಸಿದವರು ಆಡಳಿತಕ್ಕೆ ಬರಬೇಕೇ ಎಂಬುದನ್ನು ನಿರ್ಧರಿಸುತ್ತದೆ ಎಂದಿದ್ದರು. ಕಾಂಗ್ರೆಸ್ ಪಕ್ಷ ಸಂವಿಧಾನದ ಮೂಲ ಆಶಯಗಳನ್ನು ಉಳಿಸಿಕೊಳ್ಳಲು ತನ್ನ ಹೋರಾಟವನ್ನು ಮುಂದುವರಿಸುತ್ತದೆ ಎಂದು ಹೇಳಿಕೊಂಡಿದ್ದರು. ಸಮಾಜವನ್ನು ಒಡೆಯುತ್ತಿರುವವರು ಆಡಳಿತ ನಡೆಸಬೇಕೇ ಅಥವಾ ದೇಶವನ್ನು ಸರಿಯಾದ ಪಥದಲ್ಲಿ ಮುನ್ನಡೆಸಿದವರು ಅಧಿಕಾರಕ್ಕೆ ಬರಬೇಕೇ ಎಂಬುದು ಈ ಚುನಾವಣೆಯಲ್ಲಿ ನಿರ್ಧರಿತವಾಗುತ್ತದೆ ಎಂದಿದ್ದರು.
ಮೇಡಂ ಸೋನಿಯಾ ಜೀ ಅವರು ಸರಿಯಾದುದನ್ನೇ ಹೇಳಿದ್ದಾರೆ. ಅವರು 2019ರ ಚುನಾವಣಾ ವಿಶಿಷ್ಟತೆಯನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಈ ಚುನಾವಣೆ ನಿಜಕ್ಕೂ ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ. ಒಂದು ಸಿದ್ಧಾಂತ, ಈ ದೇಶ 1947 ರ ಆಗಸ್ಟ್ 15 ರಂದು ಜನ್ಮ ತಾಳಿತು ಎಂಬುದನ್ನು ನಂಬುತ್ತದೆ. ಮತ್ತೊಂದು ಸಿದ್ಧಾಂತ ದೇಶದ ಪ್ರಾಚೀನತೆ, ಶ್ರೀಮಂತ ಪರಂಪರೆ, ಮಾನವೀಯ ಸಂಸ್ಕೃತಿಯನ್ನು ನಂಬುತ್ತದೆ. ‘ವಸುದೈವ ಕುಟುಂಬಕಂ’, ‘ಸರ್ವೇಪಿ ಸುಖಿನಃ ಸಂತು’, ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ಎಂಬ ಸಿದ್ಧಾಂತವನ್ನು ಬಲವಾಗಿ ನಂಬುತ್ತದೆ.
ಸೋನಿಯಾ ಮತ್ತು ಅವರ ಪಕ್ಷ ಈ ದೇಶವನ್ನು ಲಘುವಾಗಿ ಪರಿಗಣಿಸಿದರೆ ಮತ್ತು ತನ್ನ ಕುಟುಂಬವನ್ನು ಅಧಿಕಾರದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಾಗಿ ನಂಬಿತ್ತು. ಆದರೆ ಈ ವಿಶ್ವದಲ್ಲಿ ಯಾವುದು ಶಾಶ್ವತ ಅಲ್ಲ, 2014ರಲ್ಲಿ ಈ ದೇಶದ ಬುದ್ಧಿವಂತ ಪ್ರಜೆಗಳು ಕಾಂಗ್ರೆಸ್ ಮತ್ತು ಸೋನಿಯಾ ಕುಟುಂಬಕ್ಕೆ ಈ ನಿಟ್ಟಿನಲ್ಲಿ ಕಟುವಾದ ಸಂದೇಶವನ್ನೇ ನೀಡಿದ್ದಾರೆ. ಆದರೆ ಸತ್ಯವನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸುತ್ತಿದ್ದಾರೆ. 2019ರಲ್ಲಿ ದೇಶದ ಪ್ರಜೆಗಳು, 130 ವರ್ಷ ಹಳೆಯ ನಿಮ್ಮ ಪಕ್ಷಕ್ಕೆ ಮತ್ತೊಮ್ಮೆ ಕಟು ಸಂದೇಶವನ್ನು ನೀಡಲಿದ್ದಾರೆ. ಮಹಾತ್ಮ ಗಾಂಧೀಜಿಯವರ ಕೊನೆಯ ಆಸೆಯೂ ಇದೇ ಆಗಿತ್ತು ಅಲ್ಲವೇ? ಅವರ ಆಸೆಯನ್ನು ಪೂರೈಸುವ ಕಾಲ ಈಗ ಸಮೀಪವಾಗಿದೆ, ಇದೇ ಕಾರಣಕ್ಕೆ ಈ ಬಾರಿಯ ಚುನಾವಣೆ ಅಸಾಮಾನ್ಯವಾದುದಾಗಿದೆ. ಆರು ದಶಕಗಳ ಕಾಲ ಈ ದೇಶದ ಅಧಿಕಾರವನ್ನು ಅಡೆತಡೆಯಿಲ್ಲದೆ ಅನುಭವಿಸಿದ ಕಾಂಗ್ರೆಸ್ ಪಕ್ಷ ಈಗ ರಾಜಕೀಯವಾಗಿ ಯಾರಿಗೂ ಬೇಡವಾಗಿ ಹೋಗಿದೆ. ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ಹಿಂದೆ ಬೀಳುತ್ತಿದ್ದ ಕೆಲವೊಂದು ಪಕ್ಷಗಳೂ ಈಗ ಕಾಂಗ್ರೆಸ್ಸಿಗೆ ನಂಬರ್ ಒನ್ ಸ್ಥಾನ ನೀಡಲು ನಿರಾಕರಿಸುತ್ತಿವೆ. ಒಂದು ಬಾರಿ ಉತ್ತರ ಪ್ರದೇಶವನ್ನು ಆಳಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಎರಡು ಸ್ಥಾನಗಳನ್ನು ನೀಡುವಷ್ಟು ಧೈರ್ಯವನ್ನು ಅದರ ಮೈತ್ರಿ ಪಕ್ಷಗಳು ಮಾಡಿ ಮಾಡುತ್ತಿದೆ. ಇದಕ್ಕಿಂತಲೂ ದುರಾದೃಷ್ಟಕರವಾದುದು ಆ ಪಕ್ಷಕ್ಕೆ ಬೇರೇನಿದೆ? ಟಿಎಂಸಿ, ಬಿಎಸ್ಪಿ, ಎಸ್ಪಿ, ಆರ್ಜೆಡಿ ಮುಂತಾದ ಪ್ರಾದೇಶಿಕ ಪಕ್ಷಗಳು, ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರನ್ನು ಮೂಲೆಗುಂಪು ಮಾಡುತ್ತಿವೆ. ಇಂಥಹ ಸನ್ನಿವೇಶ ಈಗ ಹಾಸದಲ್ಲೇ ಮೊದಲ ಬಾರಿಗೆ ಕಾಣಿಸುತ್ತಿದೆ. ಕಾಂಗ್ರೆಸ್ ಪಕ್ಷವು ಇಂತಹ ಸಮಾನ ಮನಸ್ಕ ಪಕ್ಷಗಳನ್ನು ಒಳಗೊಂಡ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಾಯನ್ಸ್ (ಯುಪಿಎ) ಅನ್ನು ದಶಕಗಳಿಗಿಂತಲೂ ಹೆಚ್ಚು ಕಾಲ ಮುನ್ನಡೆಸಿತ್ತು, ಅಂತಹ ಕಾಂಗ್ರೆಸ್ ಪಕ್ಷಕ್ಕೆ ಈಗ ಮಹಾಘಟಬಂಧನ ಅಥವಾ ಪ್ರಧಾನಿ ನರೇಂದ್ರ ಮೋದಿ ಹೇಳುವಂತೆ ಮಹಾ ಮಿಲಾವಟ್ನಲ್ಲಿ ಯಾವುದೇ ಗೌರವಾನ್ವಿತ ಸ್ಥಾನವಿಲ್ಲದಂತಾಗಿದೆ. ಇದು ಈ ಬಾರಿಯ ಚುನಾವಣೆಯನ್ನು ಅಸಾಮಾನ್ಯವಾಗಿಸಿದೆಯಲ್ಲವೇ ಸೋನಿಯಾ ಜಿ ಅವರೇ?
ನೀವು ಈ ಚುನಾವಣೆ ಸಂವಿಧಾನವನ್ನು ಧ್ವಂಸ ಮಾಡಿದವರು ಅಥವಾ ಮಾಡುತ್ತಿರುವವರ ಮತ್ತು ಅದರ ಘನತೆಯನ್ನು ಸಂರಕ್ಷಿಸಿದವರ ನಡುವಿನ ಸೈದ್ಧಾಂತಿಕ ಹೋರಾಟ ಎಂದಿದ್ದೀರಿ, ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಆದರೆ ಪ್ರಶ್ನೆ ಎಂದರೆ, ಸಂವಿಧಾನವನ್ನು ಧ್ವಂಸ ಮಾಡಿದವರು ಯಾರು ಮತ್ತು ಅದನ್ನು ಸಂರಕ್ಷಿಸುತ್ತಿರುವ ಯಾರು? ಎಂಬುದು. 1976 ರ ತುರ್ತುಪರಿಸ್ಥಿತಿಯ ಸಂದರ್ಭ ಸಂವಿಧಾನ ಮತ್ತು ಅದರ ಪ್ರಿಯಾಂಬಲ್ಗೆ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಿ ಮತ್ತು ಅದನ್ನು ಯಾರು ಮಾಡಿದರು ಎಂಬುದನ್ನು ತಿಳಿದುಕೊಳ್ಳಿ. ಈ ದೇಶಕ್ಕೆ ಆ ಬಗ್ಗೆ ಗೊತ್ತಿದೆ ಆದರೆ ನಿಮಗೆ ಅದನ್ನು ನೆನಪಿಸಿಕೊಳ್ಳಲು ಇಷ್ಟವಿಲ್ಲ ಎಂದೆನಿಸುತ್ತದೆ. ನಿಮ್ಮ ಅತ್ತೆ ಇಂದಿರಾ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರಿಯಾಂಬಲ್ಗೆ ಸೆಕ್ಯುಲರ್ ಮತ್ತು ಸೋಶಿಯಲಿಸ್ಟ್ ಎಂಬ ಶಬ್ದಗಳನ್ನು ಸೇರಿಸಿ ಅದನ್ನು ಧ್ವಂಸ ಮಾಡಿತು. ತಮ್ಮ ಅಧಿಕಾರವನ್ನು ಉಳಿಸುವುದಕೋಸ್ಕರ ಸಂವಿಧಾನವನ್ನು ಉಲ್ಲಂಘಿಸಿ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಸಾವಿರಾರು ಜನರನ್ನು ಜೈಲು ಕಂಬಿಗಳ ಹಿಂದೆ ಇಡಲಾಯಿತು. ಮತ್ತೊಮ್ಮೆ ನಿಮ್ಮ ಪತಿ ಆದ ರಾಜೀವ್ ಗಾಂಧಿಯವರು ತಮ್ಮ ಮುಸ್ಲಿಂ ವೋಟ್ ಬ್ಯಾಂಕ್ ಅನ್ನು ಉಳಿಸಿಕೊಳ್ಳುವುದಕ್ಕಾಗಿ ಶಹ ಭಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ತಿರಸ್ಕರಿಸಿ ಭಾರತದಲ್ಲಿನ ಮುಸ್ಲಿಂ ಮಹಿಳೆಯರ ಹಕ್ಕನ್ನು ಕಿತ್ತುಕೊಳ್ಳಲು ಸಂವಿಧಾನವನ್ನು ಧ್ವಂಸ ಮಾಡಿದರು. ಸೋನಿಯಾ ಜೀ ಅವರೇ, ನೀವು ನಿಮ್ಮ ನೆನಪನ್ನು ಮತ್ತೊಮ್ಮೆ ತಾಜಾಗೊಳಿಸಿಕೊಳ್ಳುವ ಅವಶ್ಯಕತೆ ಇದೆ. 2011ರಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವ ಸಲುವಾಗಿ ಕೋಮು ಹಿಂಸಾಚಾರ ಮಸೂದೆಯನ್ನು ತರಲು ರಾಷ್ಟ್ರೀಯ ಸಲಹಾ ಸಮಿತಿಯನ್ನು ಸಂವಿಧಾನದ ಮಿತಿಯನ್ನು ಮೀರಿ ರಚನೆ ಮಾಡಲು ಹೊರಟಿರಿ, ಕಾನೂನುಗಳನ್ನು ರಚಿಸುವುದು ಶಾಸಕಾಂಗದ ಕೆಲಸವಾಗಿರುತ್ತದೆ. ರಾಷ್ಟ್ರೀಯ ಸಲಹಾ ಸಮಿತಿಗೆ ಕಾನೂನು ರಚಿಸಲು ಯಾವುದೇ ಹಕ್ಕುಗಳು ಇರುವುದಿಲ್ಲ, ಆದರೆ ನಿಮ್ಮ ಮುಂದಾಳತ್ವದಲ್ಲಿ ಇಂತಹ ಪ್ರಯತ್ನವನ್ನು ನಡೆಸಲಾಯಿತು. ಹಿಂದೂ ಸಮಾಜವನ್ನು ಗುರಿಯಾಗಿರಿಸಿಕೊಂಡ ಮಸೂದೆ ತರಲು ಯುಪಿಎ ತುದಿಗಾಲಲ್ಲಿ ನಿಂತಿತ್ತು, ಆದರೆ ತೀವ್ರ ವಿರೋಧಧ ಕಾರಣದಿಂದಾಗಿ ಮಸೂದೆಯು ಕಾಯ್ದೆ ಆಗಿ ಪರಿವರ್ತನೆ ಆಗಲಿಲ್ಲ. ಆದರೆ ನೀವು ಮಾಡಿದ್ದು ಸಂವಿಧಾನದ ಉಲ್ಲಂಘನೆಯಲ್ಲವೇ ಮೇಡಂ ಸೋನಿಯಾ ಜೀ ಅವರೇ, ಆದರೂ ನೀವು ನಿಮ್ಮನ್ನು ಸಂವಿಧಾನದ ಸಂರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಿದ್ದೀರಾ ಮತ್ತು ಬಿಜೆಪಿ ಸಂವಿಧಾನವನ್ನು ನಾಶ ಮಾಡುತ್ತದೆ ಎಂದು ಹೇಳಿಕೊಂಡು ತಿರುಗುತ್ತಿದ್ದೀರ. ಈಗ ಹೇಳಿ ನೀವು ಯಾವ ಆಧಾರದ ಮೇಲೆ ಸಂವಿಧಾನದ ಸಂರಕ್ಷಕರು ಎಂದು?
ಮಹಾಘಟಬಂಧನದ ಎಲ್ಲಾ ಪಕ್ಷಗಳು ನಮಗೆ ಅಧಿಕಾರಕ್ಕೆ ಏರುವ ಯಾವುದೇ ಅವಕಾಶವಿಲ್ಲ ಎಂಬುದನ್ನು ಮೂರು ಹಂತದ ಚುನಾವಣೆ ಮುಕ್ತಾಯವಾದಾಗಲೇ ಖಚಿತಪಡಿಸಿಕೊಂಡಿವೆ. ಈಗ ಅವುಗಳು ತಮ್ಮ ಕಳಪೆ ಪ್ರದರ್ಶನಕ್ಕೆ ಏನು ಸಮರ್ಥನೆ ಕೊಡಬೇಕು ಎಂಬ ಬಗ್ಗೆ ಚಿಂತನೆ ಆರಂಭಿಸಿವೆ. ಸಂವಿಧಾನ ಸಂರಕ್ಷಣೆ, ಇವಿಎಂ ಮೇಲೆ ದೋಷಾರೋಪಣೆ ಮಾಡುವುದು ಇದೆಲ್ಲವೂ ಅವರ ಸಮರ್ಥನೆಗೆ ಇರುವ ದಾರಿಗಳು. ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೂ ಸೋಲನ್ನು ಸ್ವೀಕರಿಸದೆ ಬೇರೆ ದಾರಿ ಇಲ್ಲ. ಈಗಾಗಲೇ ಮಹಾಘಟಬಂಧನ ಪ್ರಮುಖ ನಾಯಕರುಗಳು ಮತಯಂತ್ರಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ತಮ್ಮ ಹಿಂದಿನ ಪೇಪರ್ ಬ್ಯಾಲೆಟ್ ಬಳಕೆಯ ಬೇಡಿಕೆಯನ್ನು ಮತ್ತೆ ನವೀಕರಿಸಿದ್ದಾರೆ.
ಪ್ರಮುಖ ಅಂಶವೆಂದರೆ ಸಂವಿಧಾನವನ್ನು ಬಿಜೆಪಿ ಗೌರವಿಸಿದಷ್ಟು ಯಾರೂ ಗೌರವಿಸಿಲ್ಲ. ಪ್ರಧಾನಿಯವರು ಅಧಿಕಾರಕ್ಕೆ ಏರಿದ ಮೊದಲ ದಿನವೇ, ಸಂವಿಧಾನ ನನಗೆ ಅತ್ಯಂತ ಪವಿತ್ರವಾಗಿದ್ದು, ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ ಎಂದಿದ್ದರು. ಸಂವಿಧಾನದ ಬಗೆಗಿನ ಅವರ ಕಾಳಜಿಯಲ್ಲಿ ಯಾವುದೇ ಅನುಮಾನಗಳಿಲ್ಲ, ಅವರ ಐದು ವರ್ಷಗಳ ಆಡಳಿತದಲ್ಲಿ ಇದು ಖಚಿತಗೊಂಡಿದೆ. ಬಿಜೆಪಿ ಈ ಬಾರಿ ಅತ್ಯಧಿಕ ಸಂಖ್ಯೆಯ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ, ಇದರ ಅರ್ಥ ಅದು ಸರ್ಕಾರ ರಚನೆಯ ಹಾದಿಯಲ್ಲಿದೆ ಎಂದು. ಕಾಂಗ್ರೆಸ್ ಸೇರಿದಂತೆ ಬೇರೆ ಯಾವ ಪಕ್ಷಗಳಿಗೂ ಸರಕಾರ ರಚನೆಗೆ ಬೇಕಾದ ಸ್ಥಾನಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ದುರಾದೃಷ್ಟವೆಂದರೆ, 20-23 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಪಕ್ಷಗಳು ಕೂಡ ಪ್ರಧಾನ ಮಂತ್ರಿಯ ಹುದ್ದೆ ಮೇಲೆ ಕಣ್ಣಿಟ್ಟಿರುವುದು. ಅಲ್ಪಸಂಖ್ಯಾತ ಸರಕಾರದ ತೊಂದರೆಗಳ ಬಗ್ಗೆ ಈ ದೇಶದ ಜನರಿಗೆ ಅನುಭವವಿದೆ, ಅಂತಹ ಸರ್ಕಾರ ಎಷ್ಟರ ಮಟ್ಟಿಗೆ ಸಂವಿಧಾನ ರಕ್ಷಿಸುತ್ತದೆ ಎಂಬುದರ ಬಗ್ಗೆಯೂ ತಿಳಿದಿದೆ. ಅಂತಹ ಕೆಟ್ಟ ಅನುಭವವನ್ನು ಮರಳಿ ಪಡೆಯುವ ಯಾವ ಮೂಡ್ ಕೂಡ ಜನರಿಗಿಲ್ಲ. ಅದಕ್ಕಾಗಿಯೇ ಅವರು 2014ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಮತ ಚಲಾಯಿಸಿದರು, 2019 ರಲ್ಲೂ ಅದನ್ನೇ ಪುನರಾವರ್ತನೆಗೊಳಿಸಲಿದ್ದಾರೆ.
ಈ ಎಲ್ಲಾ ಅಂಶಗಳು ಈ ಬಾರಿಯ ಚುನಾವಣೆಯನ್ನು ವಿಭಿನ್ನವಾಗಿಸಿದೆ. ಸೋನಿಯಾ ಜೀ ಯವರೇ ಆದಷ್ಟು ಬೇಗ ಇದನ್ನು ಅರ್ಥ ಮಾಡಿಕೊಳ್ಳಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.