ನವದೆಹಲಿ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮತ್ತು ಉಗ್ರ ಪೀಡಿತ ಜಮ್ಮು ಕಾಶ್ಮೀರದಲ್ಲಿ ಸೇನಾ ಪಡೆಗಳ ಸುರಕ್ಷಿತ ಕಾರ್ಯಾಚರಣೆಗೆ ಅನುವು ಮಾಡಿಕೊಡುವ ಸಲುವಾಗಿ, ಕೇಂದ್ರ ಸಶಸ್ತ್ರ ಪೋಲಿಸ್ ಪಡೆಗಳಿಗೆ (ಸಿಎಪಿಎಫ್) ಶೀಘ್ರದಲ್ಲೇ ನೆಲ ಬಾಂಬ್ ನಿರೋಧಕ ವಾಹನಗಳನ್ನು (MPVs) ಸರ್ಕಾರ ನೀಡಲಿದೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.
ಇದೇ ಮೊದಲ ಬಾರಿಗೆ, ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್ಜಿ), ಇಲೈಟ್ ಆ್ಯಂಟಿ ಟೆರರ್ ಫೋರ್ಸ್ಗಳಿಗೆ ರಿಮೋಟ್ ಚಾಲಿತ ವಾಹನಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಇಂತಹ 7 ವಾಹನಗಳನ್ನು ಖರೀದಿಸಲು 17 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ.
ಹೆಚ್ಚುವರಿ ನೆಲ ಬಾಂಬ್ ನಿರೋಧಕ ವಾಹನಗಳು, ಬುಲೆಟ್ ಪ್ರೂಫ್ ಜಾಕೆಟ್ಗಳು, ಅಂಬ್ಯುಲೆನ್ಸ್ ಇತ್ಯಾದಿಗಳನ್ನು ಖರೀದಿಸಲು CAPF ಗಳಾದ CRPF ಮತ್ತು BSF ಗಳಿಗೆ 624 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ರಿಮೋಟ್ ಚಾಲಿತ ವಾಹನಗಳು ಎನ್ಎಸ್ಜಿ ಪಡೆಗಳಿಗೆ ಕಟ್ಟಡಗಳೊಳಗೆ, ಬಸ್, ರೈಲ್ವೇ ಸ್ಟೇಶನ್ಗಳೊಳಗೆ ಕಣ್ಗಾವಲು ಇರಿಸಲು ನೆರವಾಗುತ್ತದೆ. ಸ್ಥಳವನ್ನು ಪತ್ತೆ ಹಚ್ಚಿ, ಐಇಡಿಗಳನ್ನು ಮಾನವನ ಮಧ್ಯಪ್ರವೇಶ ಇಲ್ಲದೆಯೇ ನಿಷ್ಕ್ರಿಯಗೊಳಿಸಲು ಇದು ನೆರವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.