ಎಡ ಪ್ರಗತಿಪರ ಲಾಬಿಯ ಬೆಂಬಲಿಗನೆಂದು ಪರಿಗಣಿಸಲ್ಪಟ್ಟಿರುವ ಬಿಬಿಸಿ, 2014ರಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ ವಿಷಯದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಶೇ.89ರಷ್ಟು ಸ್ಟ್ರೈಕ್ ರೇಟ್ ನೀಡಿದೆ! ನಿಜಕ್ಕೂ ಇದು ನಿರ್ಲಕ್ಷ್ಯ ಮಾಡಲಾಗದಂತಹ ವಿಷಯವೇ ಆಗಿದೆ.
ಮೋದಿ ಸರ್ಕಾರ ಮತ್ತು ಅದರ ನಿಯಮಗಳನ್ನು ಟೀಕಿಸುವ ಯಾವ ಅವಕಾಶವನ್ನೂ ಬಿಬಿಸಿ ಮಿಸ್ ಮಾಡಿಕೊಂಡಿಲ್ಲ. ಆದರೆ ಯಾವಾಗ ಬಿಬಿಸಿ ಹಿಂದಿಯು ಮೋದಿ ಸರ್ಕಾರದ ಸಾಧನೆಗಳ ಮೇಲೆ ಬೆಳಕು ಚೆಲ್ಲಿತೋ ಅಲ್ಲಿ ಟೀಕೆಯನ್ನು ಮಾಡಲಾಯಿತಾದರೂ, ಸಕಾರಾತ್ಮಕತೆ ಎದ್ದು ಕಾಣುತ್ತಿತ್ತು. ಮೋದಿ ಸರ್ಕಾರದ ನೀತಿಗಳನ್ನು ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನ ನಡೆಸಿತಾದರೂ, ಅದರ ವರದಿ ಓದಲೇ ಬೇಕು ಎನ್ನುವಂತಿತ್ತು.
2014 ಚುನಾವಣಾ ಪ್ರಣಾಳಿಕೆಯ ಸಮಯದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಡಿಎ) ಜನರಿಗೆ 346 ಭರವಸೆಗಳನ್ನು ನೀಡಿತ್ತು. ಬಿಬಿಸಿ ಹಿಂದಿ ಅಂದಾಜು ವರದಿಯು, ಈ ಭರವಸೆಗಳ ಈಡೇರುವಿಕೆಯ ಮೇಲೆ ಕೆಲಸ ಮಾಡಿದ್ದಕ್ಕಾಗಿ ಮೋದಿ ಸರ್ಕಾರಕ್ಕೆ ಶೇ. 89ರಷ್ಟು ಸ್ಟ್ರೈಕ್ ದರವನ್ನು ನೀಡಿದೆ. ಭಾರತದಂತಹ ದೇಶಗಳಲ್ಲಿ ನೂರಾರು ವಿವಿಧ ಗುಂಪುಗಳು ಸರ್ಕಾರಿ ಕಾರ್ಯಕ್ರಮಗಳಿಗೆ ಅಡಚಣೆಗಳನ್ನು ಮಾಡಲು ಪ್ರಯತ್ನಿಸುತ್ತಾ ಇರುತ್ತವೆ. ಪರಿಸರ ಹೋರಾಟಗಾರರು, ಮಾನವ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ನಾಗರಿಕ ಸಮಾಜದ ಗುಂಪುಗಳು ಸೇರಿದಂತೆ ಮುಂತಾದವುಗಳು ಸರ್ಕಾರದ ಯೋಜನೆಗಳಿಗೆ ಅಡ್ಡಿಪಡಿಸುತ್ತಲೇ ಇರುತ್ತವೆ. ವಿವಿಧ ಯೋಜನೆಗಳ ಮೇಲೆ ಸರ್ಕಾರದ ಕಾರ್ಯಗಳು ಸುಗಮವಾಗಿ ನಡೆಯದಂತೆ ಮಾಡುವುದು ಏಕೈಕ ಉದ್ದೇಶ. ಸರ್ಕಾರದ ಯೋಜನೆಗಳಿಗೆ ತೊಂದರೆಯನ್ನುಂಟು ಮಾಡುವ ಅಂತಹ ಸರ್ಕಾರೇತರ ಸಂಸ್ಥೆಗಳಿಗೆ ಮೆಧಾ ಪಾಟ್ಕರ್ ಮತ್ತು ಅವರ ನರ್ಮದಾ ಬಚಾವ್ ಅಂದೋಲನ್ ಅತ್ಯುತ್ತಮ ಉದಾಹರಣೆಯಾಗಿದೆ.
ಅಂತಹ ಅಡಚಣೆಗಳಿಂದ ಹೊರಬರಲು ದೇಶಕ್ಕೆ ಬಲವಾದ ರಾಜಕೀಯ ಇಚ್ಛೆಯನ್ನು ಹೊಂದಿರುವ ಸರ್ಕಾರದ ಅಗತ್ಯವಿದೆ. ಬಿಬಿಸಿ ವರದಿಯ ಪ್ರಕಾರ, ಭಾರತವು ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಬಲವಾದ ಸರ್ಕಾರವನ್ನು ಹೊಂದಲು ಹೆಚ್ಚು ಅದೃಷ್ಟಶಾಲಿಯಾಗಿದೆ, ಎಲ್ಲಾ ಅಡಚಣೆಗಳನ್ನೂ ಮೀರಿ ತನ್ನ ಅಭಿವೃದ್ಧಿ ಕಾರ್ಯಸೂಚಿಯನ್ನು ಮುಗಿಸಲು ದೃಢ ಬದ್ಧತೆಯನ್ನು ಮತ್ತು ರಾಜಕೀಯ ಇಚ್ಛೆಯನ್ನು ಅದು ತೋರಿಸಿದೆ. ಮೋದಿ ಸರಕಾರವು ಹಲವು ಅಡೆತಡೆಗಳನ್ನು ನಿವಾರಿಸಿ ಹಲವಾರು ಕಾರ್ಯಗಳನ್ನು ಪೂರ್ಣಗೊಳಿಸಿದೆ. ಸಂಸತ್ತಿನ ಮೇಲ್ಮನೆಯಲ್ಲಿ ಮೋದಿ ಸರಕಾರವು ಬಹುಮತವನ್ನು ಪಡೆದಿಲ್ಲವಾದ್ದರಿಂದ, ಭೂಮಿ ಸ್ವಾಧೀನಪಡಿಸುವಿಕೆ ಸೇರಿದಂತೆ ಇತರ ಮುಖ್ಯ ಮಸೂದೆಗಳು ಇನ್ನೂ ಮಂಡನೆಗೆ ಬಾಕಿ ಉಳಿದಿವೆ. ಆದರೆ ಈ ನಡುವೆಯೂ, ಮೋದಿ ಸರ್ಕಾರವು ಸಾಧಿಸಿದ ಗುರಿಗಳು ಆಶ್ಚರ್ಯಕರವೆಂದು ಬಿಬಿಸಿ ವರದಿ ಹೇಳಿದೆ.
ಈ ವರದಿಯು, ಮೋದಿ ಸರ್ಕಾರದ ಭರವಸೆಗಳನ್ನು ಪೂರ್ಣಗೊಂಡ ಕಾರ್ಯಗಳು, ನಡೆಯುತ್ತಿರುವ ಕಾರ್ಯಗಳು ಮತ್ತು ನಡೆಯದ ಕಾರ್ಯ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿದೆ. 346 ಭರವಸೆಗಳ ಪೈಕಿ, ಮೋದಿ ಸರ್ಕಾರವು 117 ಭರವಸೆಗಳನ್ನು ಪೂರ್ಣಗೊಳಿಸಿದೆ, 190 ಕಾರ್ಯಕ್ರಮಗಳು ನಡೆಯುತ್ತಿದೆ ಮತ್ತು 39 ಭರವಸೆಗಳು ಮಾತ್ರ ಬಾಕಿ ಉಳಿದಿವೆ.
ಭಾರತದಲ್ಲಿ ಸ್ವಾತಂತ್ರ್ಯದ ನಂತರದಿಂದಲೂ ಯಾವ ಸರ್ಕಾರವೂ ಚುನಾವಣೆಗೂ ಮುನ್ನ ಮತದಾರರಿಗೆ ತನ್ನ ರಿಪೋರ್ಟ್ ಕಾರ್ಡ್ ನೀಡಿಲ್ಲ. ಆದರೆ ಮೋದಿ ಸರಕಾರವು ಈ ನಿಟ್ಟಿನಲ್ಲಿ ಹೊಸ ಸಂಪ್ರದಾಯವನ್ನು ಆರಂಭಿಸಿದೆ, ಪಕ್ಷದ ಬಹುತೇಕ ಸಂಸದರು ತಮ್ಮ ರಿಪೋರ್ಟ್ ಕಾರ್ಡ್ ಅನ್ನು ಪ್ರಸ್ತುತಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಇತರ ಜಾತ್ಯತೀತ ಪಕ್ಷಗಳಿಂದ ಎದುರಾಗುತ್ತಿರುವ ತೀವ್ರ ವಿರೋಧವನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಬಿಜೆಪಿ ತನ್ನ ಕಾರ್ಯಕ್ಷಮತೆಯನ್ನು ನಿರಂತರವಾಗಿ ತೋರಿಸುತ್ತಾ ಬಂದಿದೆ.
ಇನ್ನೊಂದೆಡೆ ಯಾವುದೇ ಪಕ್ಷವು, ಈ ದೇಶವನ್ನು ಐದು ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆ ಮತ್ತು ಈಡೇರಿಸಿದ ಭರವಸೆಗಳ ಬಗ್ಗೆ ರಿಪೋರ್ಟ್ ಕಾರ್ಡ್ ಅನ್ನು ಕೇಳುವ ಧೈರ್ಯ ಮಾಡಿಲ್ಲ.
ಈ ಹಿನ್ನೆಲೆಯಲ್ಲಿ ನಾವು ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಬೇಕಾಗಿದೆ.
ಮೋದಿ ಸರಕಾರದ ಕಾರ್ಯಕ್ಷಮತೆಯ ವಿಮರ್ಶೆ ಹೀಗಿದೆ
ಕ್ರ.ಸಂ. | ಕ್ಷೇತ್ರ | ಪೂರ್ಣಗೊಂಡ ಕೆಲಸಗಳು | ಪ್ರಗತಿಯಲ್ಲಿರುವ ಕೆಲಸಗಳು | ಪ್ರಾರಂಭಿಸಬೇಕಾದ ಕೆಲಸಗಳು |
1. | ಕೃಷಿ | 5 | 10 | 2 |
2. | ವಿಜ್ಞಾನ ಮತ್ತು ರಕ್ಷಣಾ ಕ್ಷೇತ್ರ | 10 | 24 | 4 |
3. | ಕೌಶಲ್ಯ ಮತ್ತು ಸಾಮಾಜಿಕ ಅಭಿವೃದ್ಧಿ | 15 | 19 | 1 |
4. | ಆರ್ಥಿಕತೆ | 11 | 05 | 3 |
5. | ಮಹಿಳಾ ಸಂಬಂಧಿತ | 11 | 04 | 5 |
6. | ಪರಿಸರ ಮತ್ತು ಶಕ್ತಿ | 08 | 09 | 2 |
7. | ಆರೋಗ್ಯ ಮತ್ತು ಶಿಕ್ಷಣ | 10 | 34 | 1 |
8. | ವ್ಯಾಪಾರ ಮತ್ತು ಉದ್ಯಮ | 11 | 32 | 7 |
9. | ಆಡಳಿತ | 30 | 49 | 8 |
10. | ಅಲ್ಪಸಂಖ್ಯಾತ ವ್ಯವಹಾರ | 06 | 04 | 2 |
ಕೇಂದ್ರ ಸರ್ಕಾರದ ಅಧಿಕೃತ ಮೂಲಗಳನ್ನು ಬಳಸಿಕೊಂಡು ಬಿಬಿಸಿ ಅಂತಿಮ ವರದಿ ಮಾಡಿದೆ. ಬಿಜೆಪಿ ಪಕ್ಷವು 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರಿಗೆ ನೀಡಿದ 346 ಭರವಸೆಗಳ ಪೈಕಿ 117 ಭರವಸೆಗಳನ್ನು ಪೂರೈಸಿದೆ ಮತ್ತು 190 ಭರವಸೆಗಳನ್ನು ಶೀಘ್ರದಲ್ಲೇ ಈಡೇರಿಸಲಿದೆ ಎಂದು ವರದಿಯು ಹೇಳಿದೆ. ಇದು ಸರ್ಕಾರದ ಕಾರ್ಯಕ್ಷಮತೆಯ ಸ್ಟ್ರೈಕ್ ರೇಟ್ ಅನ್ನು ಶೇ.89ಕ್ಕೆ ಏರಿಸಿದೆ. ಯಾವುದೇ ಭರವಸೆಯನ್ನು ಮಾನದಂಡದ ಮೂಲಕ ಪೂರೈಸಲು ಸಾಧ್ಯವಾಗುವುದಿಲ್ಲ ಮತ್ತು ಮೋದಿಯ ಬಳಿ ಯಾವ ಮಂತ್ರ ದಂಡವೂ ಇಲ್ಲ. ಆದರೆ ಅವರು ನಿರಂತರ ಪ್ರಕ್ರಿಯೆಯ ಮೂಲಕ ಜನರಿಗೆ ನೀಡಿದ ಭರವಸೆಯನ್ನು ಪೂರೈಸಲು ಶ್ರಮಿಸುತ್ತಿದ್ದಾರೆ.
ಕ್ಲಸ್ಟರ್ ಆಧಾರಿತ ಶೇಖರಣಾ ಸೌಲಭ್ಯದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈ ಸೌಲಭ್ಯಕ್ಕಾಗಿ ಮೋದಿ ಸರ್ಕಾರವು 2016 ರಿಂದ 2020 ರ ತನಕ 6000 ಕೋಟಿ ರೂ. ಅನುದಾನ ಒದಗಿಸಿದೆ. ಈ ಅನುದಾನದಲ್ಲಿ ಈಗಾಗಲೇ 100 ಕ್ಲಸ್ಟರ್ ಸಂಗ್ರಹಣಾ ಸೌಲಭ್ಯಗಳು ಅನಾವರಣಗೊಂಡಿದೆ. ಅಂತೆಯೇ, ಇಂತಹ 190 ಯೋಜನೆಗಳು ಪೂರ್ಣಗೊಳ್ಳುವ ಹಾದಿಯಲ್ಲಿವೆ, 117 ಭರವಸೆಗಳು ಪೂರ್ಣಗೊಂಡಿದೆ.
ಮೋದಿ ಸರಕಾರದ ಸಾಧನೆಯ ಬಿಬಿಸಿ ಮೌಲ್ಯಮಾಪನ ವರದಿಯು, ಮೋದಿ ಸರಕಾರವನ್ನು ಸದಾ ವಿರೋಧಿಸುತ್ತಿದ್ದ, ಅದರ ಸಾಧನೆಯ ಬಗ್ಗೆ ಟೀಕೆ ಮಾಡುತ್ತಿದ್ದ ವಿರೋಧ ಪಕ್ಷಗಳ ಷಡ್ಯಂತ್ರವನ್ನು ಬಹಿರಂಗಪಡಿಸಿದೆ. ಮೋದಿ ಸರಕಾರವು ಈ ದೇಶದಲ್ಲಿ ಒಂದು ಹೊಸ ಕೆಲಸದ ಸಂಸ್ಕೃತಿಯನ್ನು ತಂದಿದೆ ಎಂಬುದು ಖಚಿತ. ಹಿಂದಿನ ಸರ್ಕಾರದ ಕೆಲಸದ ದರಕ್ಕೆ ಮೋದಿ ಸರ್ಕಾರದ ಕೆಲಸದ ದರವನ್ನು ಹೋಲಿಸಿದಾಗ, ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಾಗಿ ಜನರು ವಿರೋಧ ಪಕ್ಷಗಳ ಋಣಾತ್ಮಕ ಪ್ರಚಾರದಿಂದ ಯಾವುದೇ ರೀತಿಯಲ್ಲಿ ಗೊಂದಲಕ್ಕೀಡಾಗುವುದಿಲ್ಲ ಎಂಬುದು ಸ್ಪಷ್ಟ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.