ನವದೆಹಲಿ: ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಅವರ ಮಾಲ್ಡೀವಿಯನ್ ಡೆಮೋಕ್ರಾಟಿಕ್ ಪಾರ್ಟಿ (ಎಂಡಿಪಿ) ದ್ವೀಪದ ರಾಷ್ಟ್ರದ ಸಂಸತ್ತು ಚುನಾವಣೆಯಲ್ಲಿ 2/3 ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ವರದಿಯ ಪ್ರಕಾರ, ಏಪ್ರಿಲ್ 7 ರಂದು ಎಂಡಿಪಿಯು ಮಾಲ್ಡೀವ್ಸ್ ಸಂಸತ್ತಿನ 87 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರಿಂದ ಸೊಲಿಹ್ ಮತ್ತು ಆ ದೇಶದ ಶಾಸಕಾಂಗದಲ್ಲಿ ಗೆಲುವು ಸಾಧಿಸಿರುವ ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ಅವರಿಗೆ ರಾಜಕೀಯ ಸ್ವಾತಂತ್ರ್ಯವನ್ನು ಮರುಸ್ಥಾಪಿಸಿ ಭ್ರಷ್ಟಾಚಾರವನ್ನು ನಿಭಾಯಿಸಲು ಮುಕ್ತತೆ ದೊರೆತಂತಾಗಿದೆ.
‘ಎಲ್ಲದಕ್ಕೂ ಮಿಗಿಲಾಗಿ, ಇಂದಿನ ಚುನಾವಣೆಯ ಅತಿದೊಡ್ಡ ವಿಜೇತರು ಎಂದರೆ ಮಾಲ್ಡೀವಿಯನ್ ಜನರು. ಶಾಂತಿಯುತ ಮತ್ತು ನಾಗರಿಕ ಪರಿಸ್ಥಿತಿಗಳಲ್ಲಿ ದೇಶದಾದ್ಯಂತ ಈ ಚುನಾವಣೆಯನ್ನು ನಾವು ನಡೆಸಿದ್ದೇವೆ, ಇದು ಸಮಾಜವಾಗಿ ನಮಗೆ ಸಿಕ್ಕ ಸ್ಪಷ್ಟವಾದ ಗೆಲುವು. ನಮ್ಮ ಅಭಿಯಾನವು ವಿಷಯಾಧಾರಿತವಾಗಿತ್ತೇ ಹೊರತು ದ್ವೇಷದ ಆಧಾರದ ಮೇಲೆ ಇರಲಿಲ್ಲ ಮತ್ತು ನಮ್ಮ ಯುವ ಪ್ರಜಾಪ್ರಭುತ್ವ ಇಂದು ಗೆಲುವು ಸಾಧಿಸಿವೆ’ ಎಂದು ಸೋಲಿಹ್ ಅವರು ಹೇಳಿಕೆ ನೀಡಿದ್ದಾರೆ.
ಕೇವಲ ಏಳು ಸೀಟುಗಳೊಂದಿಗೆ ಜಮ್ಹೌರೆ ಪಕ್ಷವು ಎರಡನೇ ಸ್ಥಾನ ಪಡೆದುಕೊಂಡಿದೆ. ಚೀನಾ ಪರವಾಗಿರುವ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ಪ್ರೊಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ ಕೇವಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದೆ.
ಸೊಲಿಹ್ ಮತ್ತು ನಶೀದ್ ಇಬ್ಬರೂ ಭಾರತದ ಪರವಾಗಿರುವುದರಿಂದ, ಸಂಸದೀಯ ಚುನಾವಣೆಯಲ್ಲಿ ಎಂಡಿಪಿಯ ಜಯವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತಕ್ಕೆ ಹೆಚ್ಚಿನ ಬಲವನ್ನು ತಂದುಕೊಟ್ಟಿದೆ ಎಂದೇ ಪರಿಗಣಿಸಲ್ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.