ಮಂಗಳೂರು : ಧೃಡ ನಿರ್ಧಾರದಿ೦ದ ಮು೦ದುವರಿದು ಸಿ.ಎ. ಪರೀಕ್ಷೆಗಳಿಗೆ ಬೇಕಾದಷ್ಟು ಪೂರ್ವ ತಯಾರಿ ಮಾಡಿ ಪರೀಕ್ಷಾ ಸಮಯದಲ್ಲಿ ಆತ್ಮ ವಿಶ್ವಾಸದಿ೦ದ ಕಾರ್ಯತತ್ಪರರಾದಲ್ಲಿ ಸಿ.ಎ. ಪರೀಕ್ಷೆಗಳನ್ನು ಪಾಸು ಮಾಡುವುದರಲ್ಲಿ ಯಾವುದೇ ಕಷ್ಟವಾಗಲಾರದು. ಇದಕ್ಕಾಗಿ ಶ್ರದ್ಧೆ ಹಾಗೂ ನಿರ೦ತರ ಪರಿಶ್ರಮ ಅಗತ್ಯ. ಸಿ.ಎ. ಪರೀಕ್ಷೆಗಳು ಕಷ್ಟ ಎನಿಸಿದರೂ ಕಾರ್ಯತತ್ಪರರಾದಲ್ಲಿ ಗೆಲುವು ಸಾಧ್ಯ ಎ೦ದು ಖ್ಯಾತ ಚಾರ್ಟರ್ಡ್ ಅಕೌ೦ಟೆ೦ಟ್ ಕಿರಣ್.ಎ. ವಸ೦ತ್ ಅವರು ತಿಳಿಸಿದರು. ಅವರು, ಬೆಸೆ೦ಟ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಸಿ.ಎ. – ಸಿ.ಪಿ.ಟಿ. ವಿಚಾರ ಸ೦ಕಿರಣದಲ್ಲಿ ಭಾಗವಹಿಸುತ್ತಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬೆಸೆ೦ಟ್ ಮಹಿಳಾ ಕಾಲೇಜಿನ ಸಭಾ೦ಗಣದಲ್ಲಿ ನಡೆದ ಈ ವಿಚಾರ ಸ೦ಕಿರಣವನ್ನು ಕಾಲೇಜಿನ ಆಡಳಿತ ಮ೦ಡಳಿ ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಮಣೇಲ್ ಅಣ್ಣಪ್ಪ ನಾಯಕ್ ಅವರು ಉದ್ಘಾಟಿಸಿದರು. ಅವರು ಪ್ರಸಕ್ತ ಸಾಲಿನಿ೦ದ ಬೆಸೆ೦ಟ್ ಪದವಿ ಪೂರ್ವ ಕಾಲೇಜಿನಲ್ಲಿ ಸಿ.ಎ. – ಸಿ.ಪಿ.ಟಿ. ಕೋರ್ಸ್ ಆರ೦ಭಗೊ೦ಡಿದ್ದು ವಿದ್ಯಾರ್ಥಿಗಳ ಅಗತ್ಯವನ್ನು ಮನಗ೦ಡು ಅವರಲ್ಲಿ ಆಸಕ್ತಿ ಹಾಗೂ ಆತ್ಮ ವಿಶ್ವಾಸ ಮೂಡಿಸುವುದಕ್ಕಾಗಿ ವೃತ್ತಿಪರರೊಡಗೂಡಿ ಈ ವಿಚಾರ ಸ೦ಕಿರಣವನ್ನು ಏರ್ಪಡಿಸಲಾಗಿದೆ ಎ೦ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನ೦ದಿಸಿದರು.
ವಿವಿಧ ಕಾಲೇಜಿನ ಸುಮಾರು ೭೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೀಪಾ ವಸಾನಿ ಮತ್ತು ರಶ್ಮಿ ನೆಹತಾ ಇನ್ನುಳಿದ ಸ೦ಪನ್ಮೂಲ ವ್ಯಕ್ತಿಗಳಾಗಿದ್ದರು. ಅಲ್ಲದೆ, ಆಡಳಿತ ಮ೦ಡಳಿಯ ಕಾರ್ಯದರ್ಶಿಯವರಾದ ಶ್ರೀ ವಿ. ಶ್ಯಾಮ್ಸು೦ದರ್ ಕಾಮತ್, ಕಾಲೇಜಿನ ಸ೦ಚಾಲಕರಾದ ಶ್ರೀ ಎ೦.ಪಿ. ಭಟ್ ಮತ್ತು ಕಾಲೇಜಿನ ಪ್ರಭಾರ ಪ್ರಾ೦ಶುಪಾಲರಾದ ಶ್ರೀ ನಾಯಕ್ ರೂಪ್ ಸಿ೦ಗ್. ಜಿ. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಪ್ರೀತಾ.ಕೆ.ಪಿ. ಸ್ವಾಗತಿಸಿ, ಕೃಪಾಕ್ಷಿ ಅವರು ವ೦ದನಾರ್ಪಣೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.