ನವದೆಹಲಿ: ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಸಮಾಜವಾದಿ ಪಕ್ಷದಲ್ಲಿದ್ದ ಅವರು, 2004 ಮತ್ತು 2009 ರಲ್ಲಿ ರಾಂಪುರ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ್ದರು. ಬಳಿಕ ಸಮಾಜವಾದಿಯಿಂದ ಅವರು ಉಚ್ಛಾಟನೆಗೊಂಡಿದ್ದರು. ಇದೀಗ ಬಿಜೆಪಿಯನ್ನು ಸೇರುವ ಮೂಲಕ, ರಾಜಕೀಯದಲ್ಲಿ ಹೊಸ ಹಾದಿಯನ್ನು ಹಿಡಿದಿದ್ದಾರೆ.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ಅವರು, ‘ಸಿನಿಮಾವಾಗಲಿ ಅಥವಾ ರಾಜಕೀಯವಾಗಲಿ, ಅತ್ಯುತ್ತಮವಾದುದನ್ನು ನಾನು ನೀಡಿದ್ದೇನೆ. ಬಿಜೆಪಿ ನನಗೆ ಅಭೂತಪೂರ್ವವಾದ ಸ್ವಾಗತ ನೀಡಿದ್ದಕ್ಕೆ ಅಭಿನಂದನೆಗಳು. ಹಿಂದೆ ಟಿಡಿಪಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ, ಬಳಿಕ ಸಮಾಜವಾದಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ನಾಯಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪಕ್ಷಕ್ಕೆ ಮತ್ತು ದೇಶಕ್ಕೆ ಸಮರ್ಪಿತಗೊಂಡು ಕೆಲಸ ಮಾಡುತ್ತೇನೆ’ ಎಂದರು.
ರಾಂಪುರಿಂದ ಎರಡು ಬಾರಿ ಸಂಸದರಾಗಿರುವ ಜಯಪ್ರದಾ ಅವರು, ಈ ಬಾರಿ ಬಿಜೆಪಿ ಟಿಕೆಟ್ ನೀಡಿದರೆ ಅಲ್ಲಿಂದಲೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಸಮಾಜವಾದಿಯ ವಿವಾದಿತ ನಾಯಕ ಅಜಂ ಖಾನ್ ಅವರನ್ನು ಎದುರಿಸುವ ನಿರೀಕ್ಷೆ ಇದೆ. 2014ರಲ್ಲಿ ಆರ್ ಎಲ್ ಡಿ ಪಕ್ಷದಿಂದ ಇಲ್ಲಿ ಕಣಕ್ಕಿಳಿದು ಜಯಪ್ರಧಾ ಸೋತಿದ್ದರು.
ಎಪ್ರಿಲ್ 23ರಂದು ರಾಂಪುರದಲ್ಲಿ ಚುನಾವಣೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.