ಪ್ರಜಾಪ್ರಭುತ್ವದ ವೈವಿಧ್ಯತೆಯ ನಡುವೆ, ಭಾರತೀಯ ಯುವ ಜನತೆಯನ್ನು ಕೇಂದ್ರೀಕರಿಸುವ ಭರಾಟೆಯಲ್ಲಿ ನಾವು ನಮ್ಮ ಹಿರಿಯ ನಾಗರಿಕರನ್ನು ಮತ್ತು ಅವರ ಸಮಸ್ಯೆಗಳನ್ನು ಎಂದಿಗೂ ಮರೆಯುವಂತಿಲ್ಲ. 2001 ಮತ್ತು 2011 ರ ನಡುವೆ ಹಿರಿಯ ನಾಗರಿಕರ ಜನಸಂಖ್ಯೆಯಲ್ಲಿ ಶೇಕಡಾ 35 ರಷ್ಟು ಏರಿಕೆ ಕಂಡರೂ ಆ ವರ್ಗದತ್ತ ಸರ್ಕಾರಗಳು ಗಮನ ಹರಿಸಿದ್ದು ಕಡಿಮೆ.
ಕಳೆದ ಐದು ವರ್ಷಗಳಲ್ಲಿ ದೇಶದ ಹಿರಿಯ ನಾಗರಿಕರಿಗೆ ಉತ್ತಮವಾದ ಜೀವನವನ್ನು ನಡೆಸಲು ಯೋಗ್ಯವಾದ ಹತ್ತು ಹಲವಾರು ಯೋಜನೆಗಳನ್ನು ನರೇಂದ್ರ ಮೋದಿ ಅವರ ಸರ್ಕಾರ ಹಮ್ಮಿಕೊಂಡಿದೆ.
ಪಿಂಚಣಿ ಮತ್ತು ಜೀವವಿಮೆ ಹಿರಿಯ ನಾಗರಿಕರ ಎರಡು ಅತಿ ದೊಡ್ಡ ಅಗತ್ಯಗಳಾಗಿವೆ. 2019-20 ರ ಬಜೆಟ್ನಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯನ್ನು ಹೊರತಂದಿದೆ. ಈ ಯೋಜನೆಯಡಿ 60 ವರ್ಷ ಮೇಲ್ಪಟ್ಟ ಅಸಂಘಟಿತ ವಲಯದ ಕಾರ್ಮಿಕರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿಗಳ ಮಾಸಿಕ ಪಿಂಚಣಿ ಬರಲಿದೆ. ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಮುಂತಾದ ಈ ಹಿಂದಿನ ಮೋದಿ ಸರಕಾರದ ಯೋಜನೆಗಳು ಹಿರಿಯ ನಾಗರಿಕರಿಗೆ ಜೀವನ ಭದ್ರತೆಯನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ.
60 ವರ್ಷ ಮೇಲ್ಪಟ್ಟ ದೇಶದ ಹಿರಿಯ ನಾಗರಿಕರಿಗೆ ಸರಕಾರವು ವಯ ವಂದನ ಯೋಜನೆಯನ್ನು ಆರಂಭಿಸಿದೆ. ಪ್ರಧಾನ ಮಂತ್ರಿ ವಯ ವಂದನ ಯೋಜನೆಯು ಭಾರತ ಸರಕಾರ ಹಿರಿಯ ನಾಗರಿಕರಿಗಾಗಿ ಘೋಷಿಸಿದ ಪಿಂಚಣಿ ಯೋಜನೆಯಾಗಿದೆ. 2017 ರ ಮಾರ್ಚ್ನಿಂದ 2020 ರ ಮಾರ್ಚ್ವರೆಗೆ ಹಿರಿಯ ನಾಗರಿಕರಿಗೆ ಈ ಯೋಜನೆ ಲಾಭವಾಗಿರಲಿದೆ. 10 ವರ್ಷಗಳ ಕಾಲ ಪಾವತಿಸಿದ ಹಣಕ್ಕೆ ಶೇಕಡ 8 ರಷ್ಟು ಬಡ್ಡಿಯನ್ನು ನೀಡಿ ಪಿಂಚಣಿಯನ್ನು ಒದಗಿಸುವ ಯೋಜನೆ ಇದಾಗಿದೆ. ಈ ಯೋಜನೆಯಿಂದ ಹಿರಿಯ ನಾಗರಿಕರಿಗೆ ಸಾಕಷ್ಟು ಆರ್ಥಿಕ ಸಹಾಯವಾಗಲಿದೆ. ಈ ಯೋಜನೆಯು ಜಿಎಎಸ್ಟಿ ಅಥವಾ ತೆರಿಗೆಯಿಂದ ವಿನಾಯಿತಿಯನ್ನು ಪಡೆದುಕೊಂಡಿದೆ. ಮಾತ್ರವಲ್ಲದೆ ಫಲಾನುಭವಿ ಹಿರಿಯ ನಾಗರಿಕರಿಗೆ ಅಥವಾ ಅವರ ಸoಗಾತಿಗಳಿಗೆ ಏನಾದರೂ ಅನಾರೋಗ್ಯಗಳು ಕಾಣಿಸಿಕೊಂಡ ಪಕ್ಷದಲ್ಲಿ ಹಣವನ್ನು ಪಡೆದುಕೊಳ್ಳುವ ಅವಕಾಶವೂ ಈ ಯೋಜನೆಯಡಿ ಇದೆ.
ಹಿರಿಯ ನಾಗರಿಕರ ಆರೋಗ್ಯ ಕಾಳಜಿಯನ್ನು ಕಾಪಾಡಿಕೊಳ್ಳುವ ಸಲುವಾಗಿಯೂ ಮೋದಿ ಸರಕಾರ ಯೋಜನೆಯನ್ನು ಆರಂಭಿಸಿದೆ. ಹಿರಿಯ ನಾಗರಿಕ ಆರೋಗ್ಯ ವಿಮಾ ಯೋಜನೆಯ ಮೂಲಕ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆಯನ್ನು ಕಲ್ಪಿಸಿಕೊಡಲಾಗಿದೆ. ಈ ಯೋಜನೆಯ ಪ್ರಕಾರ ಹಿರಿಯ ನಾಗರಿಕರು ವಿಮಾ ಕವರೇಜ್ ಅನ್ನು ಪಡೆದುಕೊಳ್ಳಲಿದ್ದಾರೆ. ಈ ಯೋಜನೆಯಡಿ ಸರಕಾರವು ಹಿರಿಯ ನಾಗರಿಕರ ವೈದ್ಯಕೀಯ ಸೇವೆಗಾಗಿ 30 ಸಾವಿರ ರೂಪಾಯಿಗಳ ಆರ್ಥಿಕ ಕವರೇಜ್ ಅನ್ನು ಒದಗಿಸಲಿದೆ. ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಈ ಯೋಜನೆಗೆ ನೋಂದಾಯಿತರಾಗಿದ್ದಾರೆ ರೂ. 60 ಸಾವಿರದವರೆಗೆ ಕವರೇಜ್ ಸಿಗಲಿದೆ. ಹಿಮಾಚಲ ಪ್ರದೇಶದ ಹಿರಿಯ ನಾಗರಿಕರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಸಲುವಾಗಿ ಹೊಸ ಯೋಜನೆಯೊಂದನ್ನು ಇತ್ತೀಚೆಗಷ್ಟೇ ಅನುಷ್ಠಾನಕ್ಕೆ ತರಲಾಗಿದೆ.
ಡಿಜಿಟಲ್ ತಂತ್ರಜ್ಞಾನವನ್ನು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಬಳಸುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ ಈ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಮಹತ್ವದ ಯೋಜನೆ ಎಂದರೆ ಜೀವನ್ ಪ್ರಮಾಣ್ ಸರ್ಟಿಫಿಕೇಟ್. ಇದು ಸುಮಾರು ಒಂದು ಕೋಟಿ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆ ಇದೆ. ಜೀವನ್ ಪ್ರಮಾಣ್ ಸರ್ಟಿಫಿಕೇಟನ್ನು ಪಡೆಯಲು ಪಿಂಚಣಿದಾರರು ಫಿಸಿಕಲ್ ಲೈಫ್ ಸರ್ಟಿಫಿಕೇಟ್ ಅನ್ನು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಸಲ್ಲಿಕೆ ಮಾಡಬೇಕು. ಪಿಂಚಣಿದಾರರ ಖಾತೆಗೆ ಹಣ ವರ್ಗಾವಣೆ ಪ್ರತಿ ವರ್ಷ ಸಕ್ರಿಯವಾಗಿ ನಡೆಯುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಈ ಸರ್ಟಿಫಿಕೇಟನ್ನು ಪ್ರತಿ ವರ್ಷ ಸಲ್ಲಿಕೆ ಮಾಡಬೇಕಾಗುತ್ತದೆ. ಕೇಂದ್ರ ಸರಕಾರದ, ರಾಜ್ಯ ಸರ್ಕಾರಗಳ, ಕೇಂದ್ರಾಡಳಿತ ಪ್ರದೇಶಗಳ ಸುಮಾರು 1.25 ಕೋಟಿ ಪಿಂಚಣಿದಾರರು ಹೊಸ ಜೀವನ ಪ್ರಮಾಣ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಉಚಿತವಾಗಿ ಈ ಸೇವೆಯನ್ನು ಒದಗಿಸುವ ಸಲುವಾಗಿ ಸರಕಾರವು ಬಯೋಮೆಟ್ರಿಕ್ ಡಿವೈಸ್ ಅನ್ನು ಪೂರೈಕೆ ಮಾಡುತ್ತಿದೆ. ಹಿರಿಯ ನಾಗರಿಕರಿಗಾಗಿ ಮತ್ತಷ್ಟು ಸಬ್ಸಿಡಿ ಮತ್ತು ಫಲಾನುಭವ ಯೋಜನೆಗಳನ್ನು ಸರಕಾರ ಆರಂಭಿಸಿದೆ ರೂಪಾಯಿ 3 ಲಕ್ಷ ಲಕ್ಷದವರೆಗಿನ ಆದಾಯವನ್ನು ತೆರಿಗೆ ವ್ಯಾಪ್ತಿಯಿಂದ ದೂರ ಇಡಲಾಗಿದೆ. ಹಿರಿಯ ನಾಗರಿಕರಿಗಾಗಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಮಾಸಿಕ 5 ಲಕ್ಷದವರೆಗಿನ ಆದಾಯವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 D ಅನ್ವಯ ಹಿರಿಯ ನಾಗರಿಕರಿಗೆ 30 ಸಾವಿರಗಳವರೆಗೆ ಆರೋಗ್ಯ ವಿಮೆಯೂ ದೊರಕುತ್ತಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಈ ಸೆಕ್ಷನ್ 80 DDB ಅಡಿ ರೂಪಾಯಿ 60 ಸಾವಿರಗಳವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇಳಿ ವಯಸ್ಸಿನವರಿಗೇ 80 ಸಾವಿರಗಳವರೆಗೆ ಈ ಮಿತಿಯನ್ನು ಹೆಚ್ಚಳ ಮಾಡಲಾಗಿದೆ.
ಇಷ್ಟು ಮಾತ್ರವಲ್ಲದೆ ಹಿರಿಯ ನಾಗರಿಕರಿಗಾಗಿ ಅತಿ ಹೆಚ್ಚು ಬಡ್ಡಿ ದರ ಮತ್ತು ವಿಶೇಷ ಯೋಜನೆಗಳು ಇವೆ. 60 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಗಳಿವೆ. ಇದರಡಿ ಅವರಿಗೆ ಶೇಕಡ 8.4 ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ಇತರರಿಗಿಂತ ಶೇ. 0.5 ರಷ್ಟು ಹೆಚ್ಚಿನ ಬಡ್ಡಿ ದರ ಸಿಗುತ್ತದೆ. ಮತ್ತು ರಾಷ್ಟ್ರೀಯ ವಿಮೆಯೂ ಇವರಿಗಾಗಿ ವರಿಷ್ಠ ಮೆಡಿಕ್ಲೈಮ್ ಪಾಲಿಸಿಯನ್ನು ಹೊರತಂದಿದೆ. 60-80 ವರ್ಷದ ಹಿರಿಯ ನಾಗರಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಆಸ್ಪತ್ರೆಗೆ ದಾಖಲಾದ ಪಕ್ಷದಲ್ಲಿ ಈ ಯೋಜನೆಯಡಿ ಹಿರಿಯ ನಾಗರಿಕರಿಗೆ ರೂಪಾಯಿ ಒಂದು ಲಕ್ಷದವರೆಗೆ ಸಿಗುತ್ತದೆ ಮತ್ತು ತೀವ್ರ ಅನಾರೋಗ್ಯವಿದ್ದ ಸಂದರ್ಭದಲ್ಲಿ ರೂಪಾಯಿ ಎರಡು ಲಕ್ಷಗಳವರೆಗೆ ಸಿಗುತ್ತದೆ. ಎಲ್ಐಸಿಯ 2017 ರ ರ ವರಿಷ್ಠ ಪಿಂಚಣಿ ವಿಮಾ ಯೋಜನೆಯು ಹಿರಿಯ ನಾಗರಿಕರಿಗೆ ಹತ್ತು ವರ್ಷಗಳ ಠೇವಣಿಗೆ ಶೇಕಡ 8 ರಷ್ಟು ಬಡ್ಡಿಯನ್ನು ನೀಡುತ್ತದೆ. ಇದರಡಿ ಗರಿಷ್ಠ 7.5 ಲಕ್ಷ ರೂ.ಗಳವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ. ಇದರಡಿಯಲ್ಲಿ ಹಿರಿಯ ನಾಗರಿಕರು ಮಾಸಿಕ, 3 ತಿಂಗಳಿಗೊಮ್ಮೆ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.