ನವದೆಹಲಿ: ವಿಶ್ವದ ಅತಿದೊಡ್ಡ ನೈರ್ಮಲ್ಯ ಕಾರ್ಯಕ್ರಮ ಸ್ವಚ್ಛ ಭಾರತದಡಿಯಲ್ಲಿ ಶೇಕಡಾ 96 ರಷ್ಟು ಶೌಚಾಲಯಗಳ ಬಳಕೆಯನ್ನು ಮಾಡಲಾಗುತ್ತಿದೆ ಎಂದು ಸ್ವತಂತ್ರ ಪರಿಶೀಲನಾ ಏಜೆನ್ಸಿ ಖಚಿತಪಡಿಸಿದೆ.
ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸಮೀಕ್ಷೆಯನ್ನು ಸ್ವತಂತ್ರ ಪರಿಶೀಲನಾ ಏಜೆನ್ಸಿಯು ವಿಶ್ವಬ್ಯಾಂಕ್ ಬೆಂಬಲದೊಂದಿಗೆ ನಡೆಸಿದ್ದು, ಈ ಸಮೀಕ್ಷೆ ಸ್ವಚ್ಛ ಭಾರತ ಗ್ರಾಮೀಣ ದಡಿಯಲ್ಲಿ ಗ್ರಾಮೀಣ ಭಾರತದ ಶೇಕಡಾ 96.5ರಷ್ಟು ಮನೆಗಳಲ್ಲಿ ಶೌಚಾಲಯದ ಬಳಕೆಯಾಗುತ್ತಿದೆ ಎಂದು ತಿಳಿಸಿದೆ.
ಈಗಾಗಲೇ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳು ಬಯಲು ಶೌಚಮುಕ್ತ ಎಂದು ಘೋಷಣೆ ಮಾಡಿರುವ ಗ್ರಾಮಗಳಲ್ಲಿ ಶೇಕಡಾ 90.7 ರಷ್ಟು ಶೌಚಾಲಯದ ಬಳಕೆ ನಡೆಯುತ್ತಿದೆ ಎಂದು ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ ಮತ್ತೊಮ್ಮೆ ಖಚಿತಪಡಿಸಿದೆ.
ಸಮೀಕ್ಷೆಯನ್ನು 2018 ರ ನವೆಂಬರ್ ಮತ್ತು 2019 ರ ಫೆಬ್ರವರಿಯ ನಡುವೆ ನಡೆಸಲಾಗಿದ್ದು, ದೇಶದ 6136 ಗ್ರಾಮಗಳ 92040 ಮನೆಗಳನ್ನು ಈ ಸಮೀಕ್ಷೆ ಒಳಗೊಂಡಿದೆ.
ಈ ಸಮೀಕ್ಷೆಯಿಂದ ತಿಳಿದುಬಂದ ಅಂಶವೆಂದರೆ ಶೇಕಡ 93.1 ಮನೆಗಳು ಶೌಚಾಲಯಗಳನ್ನು ಹೊಂದಿವೆ. ಶೌಚಾಲಯಗಳನ್ನು ಹೊಂದಿದವರ ಪೈಕಿ ಶೇಕಡಾ 96.5 ರಷ್ಟು ಜನರು ಅವುಗಳನ್ನು ಬಳಕೆ ಮಾಡುತ್ತಿದ್ದಾರೆ. ಈಗಾಗಲೇ ಬಯಲು ಶೌಚಮುಕ್ತ ಎಂದು ಘೋಷಿತಗೊಂಡಿರುವ ಶೇಕಡಾ 90.7ರಷ್ಟು ಗ್ರಾಮಗಳು ಬಯಲು ಶೌಚಮುಕ್ತವಾಗಿದೆ ಎಂಬುದನ್ನು ಸಮೀಕ್ಷೆ ಖಚಿತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.