ನವದೆಹಲಿ: ಯೋಗ ದಿನಾಚರಣೆಯ ಬಗ್ಗೆ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಮಾಡಿರುವ ಟ್ವೀಟ್ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿಯನ್ನು ಸೃಷ್ಟಿಸಿದೆ.
ಮಾಜಿ ಪ್ರಧಾನಿ ಪಂಡಿತ್ ಜವಹಾರ್ ಲಾಲ್ ಮತ್ತು ಪ್ರಧಾನಿ ನರೇಂದ್ರ ಮೊದಿ ಯೋಗ ಮಾಡುವ ಚಿತ್ರಗಳನ್ನು ಹಾಕಿರುವ ಲಾಲೂ, ಇದು ಬೋಧಕ ಮತ್ತು ಯೋಗಾಭ್ಯಾಸಕನಿಗೆ, ಸ್ವಂತಿಕೆ ಹಾಗೂ ಸ್ವಂತಿಕೆ ಹೀನತೆಗೆ ಇರುವ ವ್ಯತ್ಯಾಸ ಎಂದು ಬರೆದಿದ್ದಾರೆ.
ಅಲ್ಲದೇ ಕೆಲವು ಬಿಜೆಪಿ ಮುಖಂಡರು ಮತ್ತು ಆರ್ಎಸ್ಎಸ್ ಮುಖಂಡರ ಚಿತ್ರವನ್ನು ಹಾಕಿ, ಅವರ ಹೊಟ್ಟೆಯ ಬಗ್ಗೆ ಲೇವಡಿ ಮಾಡಿದ್ದಾರೆ. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಬಿಜೆಪಿಯ ಗಿರಿರಾಜ್ ಸಿಂಗ್, ’ಯೋಗ ಮಾಡುವವರು ಯೋಗ ದಿನಾಚರಣೆಯಂದು ಎಲ್ಲೋ ಬಚ್ಚಿಟ್ಟು ಕೂತಿದ್ದಾರೆ. ಬೋಧರು ಎಲ್ಲಾ ಕಡೆಯೂ ಇದ್ದಾರೆ’ ಎಂದಿದ್ದಾರೆ.
ಇನ್ನೊಬ್ಬ ಮುಖಂಡ ಮುರಳೀಧರ್ ರಾವ್ ಅವರು ‘ರಾಹುಲ್ ಎಲ್ಲಿದ್ದಾರೆ, ನೆಹರೂ ಶೀರ್ಷಾಸನ ಮಾಡಿದ್ದಾರೆ, ರಾಹುಲ್ ಅವರಿಗೆ ಕನಿಷ್ಠ ವ್ರಿಕ್ಷಾಸನವನ್ನಾದರೂ ಮಾಡಬಹುದಿತ್ತು’ ಎಂದಿದ್ದಾರೆ.
ಯೋಗದ ಮೂವ್ಮೆಂಟ್ಗಳು ನಾಯಿ ಮಾಡುವ ಮೂವ್ಮೆಂಟ್ನಂತಿದೆ ಎಂದು ಹೇಳಿದ್ದ ಸಿಪಿಎಂ ಮುಖಂಡ ಸೀತಾರಾಮ್ ಯಚೂರಿಯವರನ್ನೂ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಕಮ್ಯೂನಿಸ್ಟ್ ಸಿದ್ಧಾಂತಗಳು ಔಟ್ ಡೇಟೆಡ್ ಆಗಿವೆ. ಅವರು ಪ್ರಸ್ತುತ ಜನಾಂಗದ ನಿರೀಕ್ಷೆಗಳನ್ನು ಅರ್ಥೈಸಿಕೊಳ್ಳಲಾರರು. ಯೆಚೂರಿ ಹೇಳಿಕೆಯೇ ಇದನ್ನು ಸೂಚಿಸುತ್ತದೆ ಎಂದು ಮುರಳೀಧರ್ ರಾವ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.