ನವದೆಹಲಿ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ)ಭಾರತಕ್ಕೆ 50 ಹೆರೋನ್ ಮಾನವರಹಿತ ವಾಯು ವಾಹಕ (Unmanned Aerial Vehicles) ಗಳನ್ನು ಪೂರೈಸಲು ಒಪ್ಪಿಗೆ ಸೂಚಿಸಿದೆ. 500 ಮಿಲಿಯನ್ ಡಾಲರ್ ಒಪ್ಪಂದ ಇದಾಗಿದೆ.
HERON ಎಂಬುದು ಮೀಡಿಯಂ ಅಲ್ಟಿಟ್ಯೂಡ್ ಲಾಂಗ್ ಎಂಡ್ಯುರನ್ಸ್ (MALE) ರಿಮೋಟ್ ಚಾಲಿತ ಏರಿಯಲ್ ಸಿಸ್ಟಮ್ ಆಗಿದೆ. ಕಾರ್ಯತಾಂತ್ರಿಕ ಮತ್ತು ಯುದ್ಧ ತಾಂತ್ರಿಕ ಕಾರ್ಯಾಚರಣೆಗಳಿಗೆ ಇದು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸುಲಭ ಕಾರ್ಯಾಚರಣೆ ಇದರ ವಿಶೇಷತೆಯಾಗಿದೆ.
35,೦೦೦ ಅಡಿ ಎತ್ತರದಲ್ಲಿ ನಿರಂತರ 52 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ನಡೆಸುವ ಸಾಮರ್ಥ್ಯ ಇದಕ್ಕಿದೆ.
ಫೆ.26ರಂದು ಪಾಕಿಸ್ಥಾನದೊಳಗೆ ನುಗ್ಗಿ ವೈಮಾನಿಕ ದಾಳಿಯನ್ನು ನಡೆಸಿದ್ದ ಭಾರತ, ಇದಕ್ಕಾಗಿ ಹೆರೋನ್ ಡ್ರೋನ್ಗಳನ್ನು ಬಳಕೆ ಮಾಡಿತ್ತು.
ಟರ್ಕಿ ಮತ್ತು ಇಸ್ರೇಲ್ ವಾಯುಸೇನೆಗಳು ಅತೀ ಎತ್ತರದಲ್ಲಿ ಭೂ ಕಣ್ಗಾವಲು ಮತ್ತು ಸಮುದ್ರ ಕಣ್ಗಾವಲನ್ನು ಇರಿಸಲು ಹೆರೋನ್ ಡ್ರೋನ್ಗಳನ್ನು ಬಳಕೆ ಮಾಡುತ್ತವೆ. ಆಸ್ಟ್ರೇಲಿಯಾದ ವಾಯುಸೇನೆ ಅಫ್ಘಾನಿಸ್ಥಾನದಲ್ಲಿ ನನ್ಕೀನ್ ಯೋಜನೆಯಡಿ ಕಣ್ಗಾವಲು ಇರಿಸಲು ಇವುಗಳನ್ನು ಬಳಸುತ್ತದೆ.
ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, 40 ವರ್ಷಗಳ ಅನುಭವ ಮತ್ತು 15,00,000 ಕ್ರಿಯಾತ್ಮಕ ಗಂಟೆಗಳ ಹಾರಾಟಗಳೊಂದಿಗೆ, ವಿಶ್ವದಾದ್ಯಂತ ವಿಮರ್ಶಾತ್ಮಕ ಮಿಲಿಟರಿ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಗುಪ್ತಚರ ಸಂಗ್ರಹಣೆ ಮತ್ತು ಗುರಿಗಳನ್ನು ನಿರ್ವಹಿಸುವ ಮೂಲಕ RPAS ನ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಜಾಗತಿಕ ನಾಯಕ ಎನಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.