ವಾರಣಾಸಿ: ವಿಶ್ವದ ಅತೀದೊಡ್ಡ ಕಂಟೇನರ್ ಶಿಪ್ಪಿಂಗ್ ಕಂಪನಿ ಮೇರ್ಸ್ಕ್, ಗಂಗಾ ನದಿಯ ನ್ಯಾಷನಲ್ ವಾಟರ್ವೇ-1ರಲ್ಲಿ ವಾರಣಾಸಿಯಿಂದ ಕೋಲ್ಕತ್ತಾಗೆ 16 ಕಂಟೇನರ್ಗಳ ಸರಕುಗಳನ್ನು ಸಾಗಿಸಲು ಸಜ್ಜಾಗಿದೆ. ಇದರಿಂದ ದೇಶದ ಇನ್ಲ್ಯಾಂಡ್ ಶಿಪ್ಪಿಂಗ್ ವಲಯಕ್ಕೆ ಭಾರೀ ಉತ್ತೇಜನ ದೊರಕಲಿದೆ.
ಪೆಪ್ಸಿಕೋ, ಇಮಾಮಿ ಅಗ್ರೋಟೆಕ್, ಇಎಫ್ಎಫ್ಸಿಒ ರಾಸಾಯನಿಕ, ಡಾಬರ್ ಇಂಡಿಯಾದ ಸರಕುಗಳನ್ನು ಗಂಗಾನದಿಯಲ್ಲಿ ಯಶಸ್ವಿಯಾಗಿ ಸಾಗಾಣೆ ಮಾಡಿದ ಬಳಿಕ ಮೇರ್ಸ್ಕ್ ಸರಕು ಸಾಗಿಸಲು ಸಜ್ಜಾಗಿದೆ. ಮೇರ್ಸ್ಕ್ ಎಂಟ್ರಿಯಿಂದಾಗಿ, ಹಿಂಟರ್ಲ್ಯಾಂಡ್ ಉದ್ದಕ್ಕೂ ಸರಕು ಚಟುವಟಿಕೆಗಳು ಗರಿಗೆದರುವ ನಿರೀಕ್ಷೆ ಇದೆ. ಬಂಗಾಳ ಕೊಲ್ಲಿಯ ಮೂಲಕ ಬಾಂಗ್ಲಾದೇಶಕ್ಕೆ ಅತ್ಯಂತ ನೇರ ಮತ್ತು ಸುಲಲಿತವಾಗಿ ಸರಕು ಸಾಗಾಣೆಗೆ ಇದು ಅನುವು ಮಾಡಿಕೊಡುತ್ತದೆ.
ಮೇರ್ಸ್ಕ್, ಡ್ಯಾನಿಶ್ನ ಉದ್ಯಮ ಸಂಸ್ಥೆಯಾಗಿದ್ದು, ವಿಶ್ವದ ಅತೀದೊಡ್ಡ ಕಂಟೇನರ್ ಶಿಪ್ ಮತ್ತು ಸಪ್ಲೈ ವೆಸಲ್ ಆಪರೇಟರ್ ಇದಾಗಿದೆ, ಸುಮಾರು 12 ಮಿಲಿಯನ್ ಕಂಟೇನರ್ಗಳನ್ನು ಇದು ವಿಶ್ವದಾದ್ಯಂತ ಸಾಗಾಣೆ ಮಾಡುತ್ತದೆ. ಇದೀಗ ಈ ಸಂಸ್ಥೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಇನ್ಲ್ಯಾಂಡ್ ವಾಟರ್ ವೇ ಮೂಲಕ ಸರಕುಗಳನ್ನು ಸಾಗಾಣೆ ಮಾಡಲಿದೆ.
2018ರ ನವೆಂಬರ್ 12ರಂದು, ಪ್ರಧಾನಿ ನರೇಂದ್ರ ಮೋದಿಯವರು ಗಂಗಾನದಿಯ ನ್ಯಾಷನಲ್ ವಾಟರ್ವೇ-1ರಲ್ಲಿ ಭಾರತದ ಮೊದಲ ಮಲ್ಟಿಮಾಡೆಲ್ ಟರ್ಮಿನಲ್ನ್ನು ಲೋಕಾರ್ಪಣೆಗೊಳಿಸಿದ್ದರು. ಅದೇ ದಿನ, ಕೋಲ್ಕತ್ತಾದಿಂದ ವಾರಣಾಸಿಗೆ ನ್ಯಾಷನಲ್ ವಾಟರ್ವೇ-1ರ ಮೂಲಕ ಆಗಮಿಸಿದ ದೇಶದ ಮೊದಲ ಕಂಟೇನರ್ ಸರಕನ್ನು ಸ್ವಾಗತಿಸಿದ್ದರು. ಈ ಎರಡು ಕ್ಷಣಗಳು ಭಾರತದ ಇನ್ಲ್ಯಾಂಟ್ ವಾಟರೇವೇ ವೃದ್ಧಿಸುವಲ್ಲಿನ ಮಹತ್ವದ ಮೈಲಿಗಲ್ಲಿನ ಕ್ಷಣಗಳಾಗಿವೆ.
Changing the way India Moves!
World’s largest container shipping company @Maersk will move 16 containers on river #Ganga (National Waterway-1) from Varanasi to Kolkata tomorrow.
Read all-
https://t.co/VRcbCYLi67 pic.twitter.com/zKCKtLguaB— Ministry of Shipping (@shipmin_india) February 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.