ಪ್ರಯಾಗ್ರಾಜ್: ಜಗತ್ತಿನ ಅತೀದೊಡ್ಡ ಧಾರ್ಮಿಕ ಸಮಾವೇಶ ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ವಿವಿಧ ದೇಶಗಳ ಸಾವಿರಾರು ಮಂದಿ ಉತ್ತರಪ್ರದೇಶದ ಪ್ರಯಾಗ್ರಾಜ್ಗೆ ಆಗಮಿಸಿದ್ದಾರೆ ಮತ್ತು ಪವಿತ್ರ ಸ್ನಾನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದಾರೆ. ಮೂಲಗಳ ಪ್ರಕಾರ, ಸುಮಾರು 2,500 ಮಂದಿ ವಿದೇಶಿಯರು ಕುಂಭಮೇಳದಲ್ಲಿ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿರುವ ರಘುನಾಥ್ ರಜ್ಜಿಯವರು, ‘ಕುಂಭಮೇಳದಲ್ಲಿ 20 ಸ್ಟಾಲ್ಗಳನ್ನು ರಚನೆ ಮಾಡಲಾಗಿದ್ದು, ಇವುಗಳಲ್ಲಿ 2500 ವಿದೇಶಿಯರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ’ ಎಂದಿದ್ದಾರೆ. ರಜ್ಜಿಯವರು ಸನಾತನ ಧರ್ಮ ಸ್ವೀಕರಿಸಲು ಬಯಸುವವರಿಗೆ ನೆರವು ನೀಡುವವರಾಗಿದ್ದಾರೆ.
ಕುಂಭಮೇಳದ ವೇಳೆಯಲ್ಲಿ ಗಂಗಾ, ಯಮುನೆ, ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನವನ್ನು ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ಪಾಪಗಳೆಲ್ಲಾ ತೊಳೆದು ಹೋಗುತ್ತದೆ ಎಂಬ ನಂಬಿಕೆಯಿದೆ. ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳುವ ಕುತೂಹಲದೊಂದಿಗೆ ಇಲ್ಲಿಗೆ ಅಪಾರ ಪ್ರಮಾಣದ ವಿದೇಶಿಗರು ಆಗಮಿಸುತ್ತಾರೆ. ಹೆಚ್ಚಿನವರು ಇಲ್ಲಿಯೇ ಶಾಶ್ವತವಾಗಿ ಹಿಂದೂಗಳಾಗಿ ಪರಿವರ್ತನೆಗೊಳ್ಳುತ್ತಾರೆ.
ಮೊನ್ನೆಯಷ್ಟೇ 86 ವಿದೇಶಿಯರು ಕುಂಭಮೇಳದಲ್ಲಿ ಬ್ರಹ್ಮಚರ್ಯೆ ದೀಕ್ಷೆಯನ್ನು ಪಡೆದುಕೊಂಡಿದ್ದರು.
ಕುಂಭಮೇಳದ ಹಿನ್ನಲೆಯಲ್ಲಿ ಪ್ರಯಾಗ್ರಾಜ್ ಸುತ್ತಮುತ್ತ ಉತ್ತರಪ್ರದೇಶ ಪೊಲೀಸರು ದಿನದ 24 ಗಂಟೆಯೂ ಕಣ್ಗಾವಲನ್ನು ಇಟ್ಟಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯನ್ನು ವಹಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಎನ್ ಜಿಓಗಳ ಮತ್ತು ನಾಗರಿಕರ ಸಹಾಯವನ್ನೂ ಪಡೆದುಕೊಳ್ಳಲಾಗುತ್ತದೆ.
Source : thehinduprotal
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.