ಭಾರತದ ಜನಸಂಖ್ಯೆ 1 ಬಿಲಿಯನ್ಗೂ ಅಧಿಕ, ವಿಶ್ವದ 7ನೇ ಅತೀದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ನಮ್ಮದು. ದೇಶದ ಸಾಕ್ಷೀಕರಿಸುವ ಕ್ಷಿಪ್ರ ಪ್ರಗತಿಯು ಅದರ ನಾಗರಿಕರ ಹೆಚ್ಚುತ್ತಿರುವ ಆಕಾಂಕ್ಷೆಗಳ ಮುಖ್ಯ ಸೂಚಕವಾಗಿರುತ್ತದೆ. ನಗರ ಪ್ರದೇಶದ ಜನರಿಗೆ ಉತ್ತಮ ಗುಣಮಟ್ಟದ ಜೀವನ ಶೈಲಿಯನ್ನು ಒದಗಿಸಿದರೆ, ಕಾರ್ಮಿಕ ಮಾರುಕಟ್ಟೆಯ ದಕ್ಷತೆಯನ್ನು ನೇರವಾಗಿ ಸಂಬಂಧಿಸಿರುವ ಆರ್ಥಿಕತೆಯು ಅತೀ ವೇಗದಲ್ಲಿ ಜಿಗಿತವನ್ನು ಕಾಣುವ ಸಂಭಾವ್ಯತೆಯನ್ನು ಹೊಂದಿರುತ್ತದೆ. ಶಿಕ್ಷಣ ಮತ್ತು ವೃತ್ತಿಪರ ಕಾರಣಗಳಿಗಾಗಿ ಗ್ರಾಮೀಣ ಭಾಗದಿಂದ ನಗರ ಭಾಗಕ್ಕೆ ಅಪಾರ ವಲಸೆಯನ್ನು ಗಮನಿಸಿದರೆ ಇದು ಇಂದಿನ ಅವಶ್ಯಕತೆಯೂ ಆಗಿದೆ. ಜೀವನ ಸರಳಗೊಳಿಸುವುದು, ಪ್ರಸ್ತುತ ಕಾಲಘಟ್ಟದ ಭಾರತೀಯ ಕುಟುಂಬಕ್ಕೆ ಅಗತ್ಯವಾದ ಉತ್ತಮ ಸೌಕರ್ಯ ಹೊಂದಿರುವ, ಕೈಗೆಟಕುವ ಸ್ಮಾರ್ಟ್ ಸಿಟಿಗಳ ನಿರ್ಮಾಣದಿಂದ ಇದನ್ನು ಸಾಧಿಸಲು ಸಾಧ್ಯ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಂದಿನಿಂದ, ನೈರ್ಮಲ್ಯದಿಂದ ಹಿಡಿದು ಡಿಜಿಟಲ್ ಇಂಡಿಯಾ, ಅಗ್ಗದ ವಸತಿ ಇತ್ಯಾದಿಗಳ ಮೂಲಕ ಭಾರತೀಯರಿಗೆ ಉತ್ತಮ ಜೀವನವನ್ನು ಒದಗಿಸುವ ತುರ್ತಿನಲ್ಲಿದೆ. ನಮ್ಮ ಮೆಟ್ರೋ ಸಿಟಿಗಳು ವಿವಿಧ ಸ್ತರಗಳಲ್ಲಿ ಒಡೆದು ಹೋಗುತ್ತಿವೆ ಮತ್ತು ಸಾಮರ್ಥ್ಯ ಒಂದೇ ಮುಂದಿರುವ ದಾರಿ. ಸೆಮೆ ಅರ್ಬನ್ ಪ್ರದೇಶಗಳು ಇನ್ನೂ ಅಭಿವೃದ್ಧಿಯಾಗಬೇಕಿದೆ ಮತ್ತು ಅದನ್ನು ನಗರಗಳಿಗೆ ಮೇಲ್ದರ್ಜೆಗಳಿಗೆ ಏರಿಸಬೇಕಿದೆ. ಇದರಿಂದ ಶಿಕ್ಷಣ, ಉದ್ಯೋಗ, ಸಾರ್ವಜನಿಕ ಸೌಲಭ್ಯ, ಆರೋಗ್ಯ ಸೇವೆಗಳು ಕೇವಲ ಕೆಲವರ ಸ್ವತ್ತಲ್ಲ, ಪ್ರತಿಯೊಬ್ಬ ಭಾರತೀಯರಿಗೂ ಸೇರಿದ್ದಾಗುತ್ತದೆ. ಬಡತನವನ್ನು ವೈಭವೀಕರಿಸುವ ಮತ್ತು ಸಮಾಜದ ಒಂದು ವರ್ಗ ವಿದ್ಯುತ್, ನೀರು ಇಲ್ಲದೆ ಪರದಾಡುವಾಗ ಚಕಾರವೆತ್ತದ ವ್ಯವಸ್ಥೆಗೆ ಇದು ವಿರುದ್ಧವಾದುದಾಗಿದೆ.
ಈ ನಿಟ್ಟಿನಲ್ಲಿ ಇಂದಿನ ಸರ್ಕಾರ ತೆಗೆದುಕೊಂಡ ಕ್ರಮಗಳು ಇಂತಿವೆ:
A.ಮುನ್ಸಿಪಲ್ ಬಾಂಡ್ಸ್: ಮುನ್ಸಿಪಲ್ ಬಾಂಡ್ಗಳ ಮೂಲಕ 2018ರಲ್ಲಿ ನಗರ ಮೂಲಸೌಕರ್ಯವನ್ನು ಅಪ್ಗ್ರೇಡ್ ಮಾಡಲು ರೂ.2,700 ಕೋಟಿಗಳನ್ನು ಒದಗಿಸಲಾಗಿದೆ.
B.ಸ್ವಚ್ಛ ಭಾರತ ಮಿಶನ್(ನಗರ)ನಡಿ 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 4124 ನಗರಗಳು ಮತ್ತು ಪ್ರದೇಶಗಳು ಬಯಲು ಶೌಚಮುಕ್ತಗೊಂಡಿವೆ.
C.ಘನತ್ಯಾಜ್ಯ ನಿರ್ವಹಣೆ ಪ್ರಕ್ರಿಯೆ ಶೇ.19ರಿಂದ ಶೇ.46ಕ್ಕೆ ಏರಿಕೆಯಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನಾ
1.ಸಂಪೂರ್ಣಗೊಂಡಿರುವುದು: 12 ಲಕ್ಷಕ್ಕೂ ಅಧಿಕ ಮನೆಗಳು
2. ನಿರ್ಮಾಣದಲ್ಲಿರುವುದು 36 ಲಕ್ಷಕ್ಕೂ ಅಧಿಕ ಮನೆಗಳು
3.ಮಂಜೂರುಗೊಂಡಿರುವುದು: 68.7 ಲಕ್ಷಕ್ಕೂ ಅಧಿಕ ಮನೆಗಳು
ಈ ಕಾರ್ಯಕ್ರಮಗಳ ಉದ್ಯೋಗ ಅವಕಾಶ ಹೆಚ್ಚಿಸುವ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ನಾವು ತಳ್ಳಿ ಹಾಕುವಂತಿಲ್ಲ.
ನಗರ ಪ್ರದೇಶಗಳ ನಿರ್ಮಾಣ ಸಾಮರ್ಥ್ಯ ಕಾರ್ಯವನ್ನು ತ್ವರಿತಗೊಳಿಸಲು ಹೆಚ್ಚುವರಿ ಬಜೆಟ್ ಸಂಪನ್ಮೂಲವನ್ನು ಒದಗಿಸಲಾಗಿದೆ ಮತ್ತು ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಲು 24 ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ.
ಸ್ಮಾರ್ಟ್ ಸಿಟಿ ಮಿಶನ್
A.ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾದ 100 ನಗರಗಳಿಗೆ ಸ್ಪೆಷಲ್ ಪರ್ಪಸ್ ವೆಹ್ಹಿಕಲ್ಸ್(ಎಸ್ಪಿವಿ)ಗಳನ್ನು ಅಳವಡಿಸಲಾಗಿದೆ.
B.ರೂ.2 ಲಕ್ಷ ಕೋಟಿ ಮೌಲ್ಯದ 5,511 ಯೋಜನೆಗಳನ್ನು ವಿವಿಧ ಹಂತದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಮೆಟ್ರೋ ರೈಲ್ ಲೈನ್ಸ್
ಆಪರೇಶನಲ್: ದೆಹಲಿ, ಎನ್ಸಿಆರ್, ಬೆಂಗಳೂರು,. ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಜೈಪುರ, ಕೊಚ್ಚಿ, ಲಕ್ನೋ, ಮುಂಬಯಿ, ಗುರುಗ್ರಾಮ ಸೇರಿದಂತೆ 10 ನಗರಗಳಲ್ಲಿ 536 ಕಿಮೀ ಮೆಟ್ರೋ ರೈಲ್ ಲೈನ್ ಸ್ಥಾಪನೆ
ಅನುಮೋದನೆ: 2014ರ ಮೇ ಬಳಿಕ 248 ಕಿಮೀ ಉದ್ದದ ರೂ.68,021 ಕೋಟಿ ವೆಚ್ಚದ 13 ಹೊಸ ಮೆಟ್ರೋ ಯೋಜನೆಗಳಿಗೆ ಚಾಲನೆ.
ಅನುಷ್ಠಾನ ಹಂತದಲ್ಲಿ: ಸುಮಾರು 650 ಕಿಮೀ ಮೆಟ್ರೋ ರೈಲ್
2018ರಲ್ಲಿ 66 ಕಿಮೀ ಉದ್ದದ ರೂ.16,408 ಕೋಟಿ ವೆಚ್ಚದ 3 ಹೊಸ ಯೋಜನೆಗಳಿಗೆ ನೊಯ್ಡಾ ಸಿಟಿ ಸೆಂಟರ್ನಿಂಡ ನೊಯ್ಡಾ ಸೆಕ್ಟರ್ 62ವರೆಗೆ ಭೋಪಾಲ್, ಇಂಧೋರ್, ದೆಹಲಿ ಮೆಟ್ರೋ ವಿಸ್ತರಣೆ. 750 ಕಿಮೀ ಮೆಟ್ರೋ ರೈಲ್ ಸಿಸ್ಟಮ್ ಮತ್ತು 373 ಕಿಮೀ ರ್ಯಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ನ್ನು ವಿವಿಧ ನಗರಗಳಲ್ಲಿ ಯೋಜಿಸಲಾಗಿದೆ.
ದೀನ್ದಯಾಳ್ ಅಂತ್ಯೋದಯ ಯೋಜನಾ-ನ್ಯಾಷನಲ್ ಅರ್ಬನ್ ಲೈವ್ಲೀಹುಡ್ ಮಿಶನ್-ನಗರ ಪ್ರದೇಶದ ವಸತಿ ರಹಿತ, ಬೀದಿ ವ್ಯಾಪಾರಿಗಳ ಕುಟುಂಬಗಳ ಬಡತನವನ್ನು ನಿರ್ಮೂಲನೆಯನ್ನು ತೊಡೆದು ಹಾಕುವ ಸಲುವಾಗಿ ತರಲಾಗಿದೆ, ಸ್ವಹಾಯ ಗುಂಪುಗಳತ್ತ ನಗರದ ಬಡವರನ್ನು ಕರೆ ತರುವ ಉದ್ದೇಶ ಇದರ ಹಿಂದಿದೆ. ಈ ಯೋಜನೆಯಡಿ
ತರಬೇತಿ: 2014ರ ಬಳಿಕ 13 ಲಕ್ಷ ನಗರ ಬಡವರಿಗೆ ತರಬೇತಿ ನೀಡಲಾಗಿದೆ, ಇದರಲ್ಲಿ 1.9 ಲಕ್ಷ ಫಲಾನುಭವಿಗಳು 2018ರಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ನೇಮಕ: 5 ಲಕ್ಷ ಫಲಾನುಭವಿಗಳನ್ನು 2014ರಿಂದ ವಿವಿಧ ಉದ್ಯೋಗಗಳಲ್ಲಿ ನೇಮಕಗೊಳಿಸಲಾಗಿದೆ.
ಪಾರಂಪರಿಕ ನಗರ ಅಭಿವೃದ್ಧಿ ಮತ್ತು ಮೌಲ್ಯವರ್ಧನಾ ಯೋಜನಾ
A.ಹೃದಯ್ ನಗರಗಳಿಗಾಗಿ ರೂ.422.61 ಕೋಟಿ ವೆಚ್ಚದ 70 ಯೋಜನೆಗಳಿಗೆ ಅನುಮೋದನೆಯನ್ನು ನೀಡಲಾಗಿದೆ. ಇದರಲ್ಲಿ ರೂ.310.43 ಕೋಟಿಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ.
B. 2019ರ ಮೇನೊಳಗೆ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿದೆ.
ಆನ್ಲೈನ್ ಬಿಲ್ಡಿಂಗ್ ಪರ್ಮಿಶಣ್ ಸಿಸ್ಟಮ್(ಒಬಿಪಿಎಸ್)ನ್ನು 1,453 ನಗರಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. 10 ರಾಜ್ಯಗಳ ಎಲ್ಲಾ ನಗರ ಸ್ಥಳಿಯ ಸಂಸ್ಥೆಗಳ್ಲಲಿ ಈ ಸಿಸ್ಟಮ್ನ್ನು ಅನುಷ್ಠಾನಕ್ಕೆ ತರಲಾಗಿದೆ.
ಭಾರತವನ್ನು ಸ್ಮಾರ್ಟ್ ಭಾರತವಾಗಿ ಪರಿವರ್ತಿಸುವ ಪ್ರಕ್ರಿಯೆ ಉದ್ಯೋಗ ಸೃಷ್ಟಿ ಮಾಡುವುದಲ್ಲದೇ, ನಗರ ಪ್ರದೇಶದ ಬಡತವನ್ನೂ ನಿರ್ಮೂಲನೆಗೊಳಿಸಲು ಸಹಾಯ ಮಾಡಲಿದೆ. 2019ರ ಸುಲಲಿತ ಉದ್ಯಮ ಪಟ್ಟಿಯಲ್ಲಿ ಭಾರತದ ರ್ಯಾಂಕಿಂಗ್ 181ನೇ ಸ್ಥಾನದಿಂದ 2018ರಲ್ಲಿ 52ನೇ ಸ್ಥಾನಕ್ಕೆ ಜಿಗಿತ ಕಂಡಿರುವುದು, ನಿರ್ಮಾಣ ವಲಯದಲ್ಲಿ ಸ್ಥಿರ ಸುಧಾರಣೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಒಂದು ಕಡೆ ಮಳೆಗಾಲದಲ್ಲಿ ಮುಂಬಯಿಯ ಸ್ಥಿತಿ ದುಃಸ್ಥಿತಿಗೆ ಬರುತ್ತದೆ, ಚಳಿಗಾಲದಲ್ಲಿ ದೆಹಲಿಯ ವಾತಾವರಣ ಹದಗೆಡುತ್ತದೆ. ಇನ್ನೊಂದೆಡೆ, ಚಂಡೀಗಢ ಮತ್ತು ಪುಣೆಯಂತಹ ಸಣ್ಣ ನಗರಗಳು ಉತ್ತಮ ಜೀವನದ ಸವಿ ಉಣ್ಣುತ್ತಿವೆ. ಇದರಿಂದ ಮೆಟ್ರೋ ಸಿಟಿಯಾಚೆಗೂ ಸ್ಮಾರ್ಟ್ ಸಿಟಿಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧ್ಯವಾಗಲಿದೆ ಎಂಬುದು ಸ್ಪಷ್ಟವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.