ನವದೆಹಲಿ: ಸ್ಮಾರ್ಟ್ಸಿಟಿ ಪ್ರಸ್ತಾವನೆಯಡಿ ರೂ.90,929 ಕೋಟಿ ಮೊತ್ತದ ಒಟ್ಟು 2,342 ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ. ಇವುಗಳ ಪೈಕಿ ಶೇ.72ರಷ್ಟು ಅಥವಾ ರೂ.51,866 ಮೊತ್ತದ 1,675 ಯೋಜನೆಗಳು ಪೂರ್ಣಗೊಂಡಿವೆ. ಕಳೆದ ಒಂದು ವರ್ಷಗಳಿಂದ ಇವುಗಳ ಅನುಷ್ಠಾನದ ಕಾರ್ಯ ತ್ವರಿತಗೊಳ್ಳುತ್ತಿದೆ.
ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ರಾಜ್ಯಸಭೆಗೆ ನೀಡಿದ ಮಾಹಿತಿಯ ಪ್ರಕಾರ, 2,05,018ಕೋಟಿ ರೂ. ಮೌಲ್ಯದ 5,151 ಯೋಜನೆಗಳು ಆಯ್ಕೆಮಾಡಲಾದ 100 ಸ್ಮಾರ್ಟ್ ಸಿಟಿಗಳ ಪ್ರಸ್ತಾಪಗಳನ್ನು ಒಳಗೊಂಡಿದೆ ಎಂದಿದ್ದಾರೆ. ಈ ಯೋಜನೆಗಳನ್ನು ಕೇಂದ್ರ, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳಿಂದ ಮತ್ತು ಬಾಹ್ಯವಾಗಿ ಅನುದಾನಿತ ಯೋಜನೆಗಳು ಅಥವಾ ಸಂಪನ್ಮೂಲಗಳ ಒಗ್ಗೂಡಿಸುವಿಕೆ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಇದಕ್ಕೆ ಪಬ್ಲಿಕ್ ಪ್ರೈವೇಟ್ ಪಾರ್ಟನರ್ಶಿಪ್ (ಪಿಪಿಪಿ) ಮೂಲಕ ಸುಮಾರು ಶೇ. 20 ರಷ್ಟು ಹಣವನ್ನು ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.
ಸ್ಮಾರ್ಟ್ ಸಿಟಿ ಮಿಷನ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಮಿಷನ್ ಅವಧಿ (2015 ರಿಂದ 2020 ರವರೆಗೆ) ಆಯ್ಕೆಮಾಡಿದ 100 ಸ್ಮಾರ್ಟ್ ನಗರಗಳಿಗೆ ಪ್ರತಿ 500 ಕೋಟಿ ರೂಪಾಯಿಗಳಿಗೆ ಆರ್ಥಿಕ ಬೆಂಬಲವನ್ನು ಕೇಂದ್ರ ಸರ್ಕಾರವು ನೀಡಲು ಯೋಜಿಸಿದೆ.
businesstoday.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.