ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್ನ ಪೊಲೀಸ್ ಇನ್ಸ್ಪೆಕ್ಟರ್, ಅಭಿಷೇಕ್ ಸೋನೆಕರ್ ಅವರು ’ಭಾರತದ ಅತ್ಯುತ್ತಮ ಸೈಬರ್ ಪೊಲೀಸ್’ ಎಂಬ ಅವಾರ್ಡ್ನ್ನು ಪಡೆದುಕೊಂಡಿದ್ದಾರೆ.
ನಸ್ಕಾಂ ಮತ್ತು ಡಾಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿಯಲ್ಲಿ ಆಯೋಜನೆಗೊಳಿಸಿದ ಕಾರ್ಯಕ್ರಮದಲ್ಲಿ ಸೋನೆಕರ್ ಅವರಿಗೆ ಈ ಅವಾರ್ಡ್ನ್ನು ಪ್ರದಾನಿಸಲಾಗಿದೆ.
ಎಲ್ಲಾ ರಾಜ್ಯಗಳು ಈ ಅವಾರ್ಡ್ಗಾಗಿ ತಮ್ಮ ನಾಮನಿರ್ದೇಶನವನ್ನು ಕಳುಹಿಸಿಕೊಟ್ಟಿದ್ದವು. ಮೂರು ಸದಸ್ಯರನ್ನೊಳಗೊಂಡ ಸಮಿತಿ ಪರಿಶೀಲನೆ ಮಾಡಿ ಅಂತಿಮವಾಗಿ ಸೋನೆಕರ್ ಅವರನ್ನು ಆಯ್ಕೆ ಮಾಡಿದೆ. ಇವರು ಭೋಪಾಲದ ಸೈಬರ್ ಸೆಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಭೋಪಾಲ ಇಬ್ಬರು ಉದ್ಯಮಿಗಳಿಗ ಸುಮಾರು 42 ಲಕ್ಷ ರೂಪಾಯಿಗಳನ್ನು ವಂಚಿಸಿದ್ದ ಇಬ್ಬರು ಸೈಬರ್ ಅಪರಾಧಿಗಳನ್ನು ಮತ್ತೆ ಹಚ್ಚಿ ದಂಡಿಸಿದ ಕೀರ್ತಿ ಸೋನೆಕರ್ ಅವರದ್ದು, ಈ ರೀತಿಯಾಗಿ ಅವರು ಹಲವಾರು ಸೈಬರ್ ಅಪರಾಧಗಳನ್ನು ಬೇಧಿಸಿದ್ದಾರೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.